ನಟ ವಿವೇಕ್ 38 ವರ್ಷಗಳಿಂದ ಹುಡುಕುತ್ತಿದ್ದ ಫೋಟೋ ಅವರ ಸಾವಿನ ನಂತರ ಸಿಕ್ಕಿತು!

ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ನಟ ವಿವೇಕ್ ಆ ಒಂದು ಫೋಟೊಗಾಗಿ 38 ವರ್ಷಗಳಿಂದ ಹುಡುಕುತ್ತಿದ್ದರು. ಆದರೆ ಆ ಫೋಟೋ ಅವರ ಸಾವಿನ ನಂತರ ದೊರೆತಿದೆ. 
ನಟ ವಿವೇಕ್ 38 ವರ್ಷಗಳಿಂದ ಹುಡುಕುತ್ತಿದ್ದ ಫೋಟೋ ಅವರ ಸಾವಿನ ನಂತರ ಸಿಕ್ಕಿತು!
ನಟ ವಿವೇಕ್ 38 ವರ್ಷಗಳಿಂದ ಹುಡುಕುತ್ತಿದ್ದ ಫೋಟೋ ಅವರ ಸಾವಿನ ನಂತರ ಸಿಕ್ಕಿತು!

ಮುಂಬೈ: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ನಟ ವಿವೇಕ್ ಆ ಒಂದು ಫೋಟೊಗಾಗಿ 38 ವರ್ಷಗಳಿಂದ ಹುಡುಕುತ್ತಿದ್ದರು. ಆದರೆ ಆ ಫೋಟೋ ಅವರ ಸಾವಿನ ನಂತರ ದೊರೆತಿದೆ. 

ಮಧುರೈ ನ ತಲ್ಲಕುಳಂ ನಲ್ಲಿ ಆಗಿನ ಡಿಪಾರ್ಟ್ ಮೆಂಟ್ ಆಫ್ ಪೋಸ್ಟಲ್, ಟೆಲಿಕಮ್ಯುನಿಕೇಷನ್ (ಈಗಿನ ಬಿಎಸ್ಎನ್ಎಲ್) ನಲ್ಲಿ 1983 ರಲ್ಲಿ ವಿವೇಕ್ ಟೆಲಿಫೋನ್ ಆಪರೇಟರ್ ಆಗಿ ಮೂರು ತಿಂಗಳ ತರಬೇತಿ ಮುಕ್ತಾಯಗೊಳಿಸಿದ್ದ ದಿನದಂದು ತೆಗೆಸಿಕೊಂಡಿದ್ದ ಫೋಟೋವನ್ನು ವಿವೇಕ್ ದಶಕಗಳ ಕಾಲ ಹುಡುಕುತ್ತಿದ್ದರು. 

ವಿವೇಕ್ ಅವರಿದ್ದ ಫೋಟೋವನ್ನು ಅವರ ಮಾಜಿ ಸಹೋದ್ಯೋಗಿ ಒಬ್ಬರು 38 ವರ್ಷಗಳ ಕಾಲ ಇಟ್ಟುಕೊಂಡಿದ್ದರು. ವಿವೇಕ್ ಅವರ ಸಾವಿನ ನಂತರ ಈ ಫೋಟೋ ಎಲ್ಲೆಡೆ ವೈರಲ್ ಆಗತೊಡಗಿವೆ. 

ಬಿಎಸ್ಎನ್ಎಲ್ ಉದ್ಯೋಗಿಯಿಂದ ಫೋಟೋವನ್ನು ಪಡೆದುಕೊಂಡ ಹಿರಿಯ ಪತ್ರಕರ್ತ ಜೆನ್ರಾಮ್ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಹಾಸ್ಯ ನಟ ನೋಡಬೇಕೆಂದುಕೊಂಡಿದ್ದ ಫೋಟೋ ಇದೇ ಎಂದು ಬರೆದುಕೊಂಡಿದ್ದಾರೆ. 

"ಮಧುರೈ ನ ತಲ್ಲಕುಳಂ ನಲ್ಲಿ ಪಿ&ಟಿಯಲ್ಲಿ ಮಧುರೈ ನ 1982-83 ರಲ್ಲಿ ನಾನು ವಿವೇಕಾನಂದನ್ ಸೇರಿ 29 ಮಂದಿ ಟೆಲಿಫೋನ್ ಆಪರೇಟರ್ ಆಗಿ ಕಾರ್ಯನಿರ್ವಹಿಸುವುದಕ್ಕಾಗಿ ತರಬೇತಿ ಪಡೆದುಕೊಂಡಿದ್ದೆವು" ಎಂದು ವಿವೇಕ್ ಅವರ ಮಾಜಿ ಸಹೋದ್ಯೋಗಿ ಹೇಳಿರುವುದನ್ನು ಪತ್ರಕರ್ತರು ಉಲ್ಲೇಹಿಸಿದ್ದಾರೆ. 

ಹಲವಾರು ವರ್ಷಗಳಿಂದ ವಿವೇಕ್ ನೋಡಬೇಕೆಂದುಕೊಂಡಿದ್ದ ಫೋಟೋವನ್ನು ಈಗ ಇಡೀ ಜಗತ್ತಿಗೇ ನೋಡಲು ಸಿಕ್ಕಿದೆ. ಆದರೆ ಅವರು ಮಾತ್ರ ನೋಡಲು ಸಾಧ್ಯವಾಗುವುದಿಲ್ಲ ಎಂದು ಸ್ನೇಹಿತರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com