ಶಬರಿ ಸರ್ಚಿಂಗ್ ಫಾರ್ ರಾವಣ: ಮೊದಲ ಹಂತದ ಶೂಟಿಂಗ್ ಮುಗಿಸಿದ ರಚಿತಾ ರಾಮ್

ರಾಜ್ಯ ಸರ್ಕಾರ ಲಾಕ್ ಡೌನ್ ತೆರವುಗೊಳಿಸಿದ ನಂತರ ರಚಿತಾ ರಾಮ್ ಅತ್ಯಂತ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಮೊದಲ ಹಂತದ 12 ದಿನಗಳ ಶೂಟಿಂಗ್ ಮೈಸೂರಿನಲ್ಲಿ ಪೂರ್ಣಗೊಳಿಸಿದ್ದಾರೆ.
ರಚಿತಾ ರಾಮ್
ರಚಿತಾ ರಾಮ್

ರಾಜ್ಯ ಸರ್ಕಾರ ಲಾಕ್ ಡೌನ್ ತೆರವುಗೊಳಿಸಿದ ನಂತರ ರಚಿತಾ ರಾಮ್ ಅತ್ಯಂತ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಮೊದಲ ಹಂತದ 12 ದಿನಗಳ ಶೂಟಿಂಗ್ ಮೈಸೂರಿನಲ್ಲಿ ಪೂರ್ಣಗೊಳಿಸಿದ್ದಾರೆ.

ಚಿತ್ರದ ಹಾಡು ಮತ್ತು ಫೈಟಿಂಗ್ ದೃಶ್ಯ ಪೂರ್ಣಗೊಳಿಸಿದ್ದು, ಅಚ್ಯುತ ಕುಮಾರ್ ಹಾಜರಿದ್ದರು. ಮಹಿಳಾ ಕೇಂದ್ರಿತ ರಿವೇಂಜ್ ಥ್ರಿಲ್ಲರ್ ಇದಾಗಿದ್ದು, ಎಡಿಟರ್ ನವೀನ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.ತಯಾರಕರು ಸಿನಿಮಾದ ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.  ಸಿನಿಮಾದಲ್ಲಿ ರಚಿತಾ ರಾಮ್ ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಕೆ ಪ್ರೊಡಕ್ಷನ್ ಮತ್ತು ಎಟಿಎಂ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಿರಣ್ ಕುಮಾರ್ ನಿರ್ಮಿಸಿರುವ ಈ ಚಿತ್ರದ ಚಿತ್ರಕಥೆಯನ್ನು ಚೇತನ್ ಕೇಶವ್ ಬರೆದಿದ್ದಾರೆ ಮತ್ತು ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಶಬರಿ ಸರ್ಚಿಂಗ್ ಫಾರಿ ರಾವಣ ಸಿನಿಮಾದ ಮುಂದಿನ ವೇಳಾಪಟ್ಟಿ ಆಗಸ್ಟ್ ಅಂತ್ಯದ ವೇಳೆಗೆ ಆರಂಭವಾಗಲಿದ್ದು, ತಂಡವು ಪ್ರಸ್ತುತ ಬೆಂಗಳೂರಿನ ಸ್ಥಳಗಳಿಗಾಗಿ ಶೋಧ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com