'ಇಂಡಿಯನ್ ಐಡಲ್'' ಸೀಸನ್ 12: ಪ್ರಶಸ್ತಿ ವಿಜೇತ ಪವನ್ ದೀಪ್ ರಾಜನ್ ಗೆ 25 ಲಕ್ಷ ರೂ. ನಗದು, ಒಂದು ಕಾರು ಬಹುಮಾನ!
ದೇಶಾದ್ಯಂತ ಸಂಗೀತ ಪ್ರೇಮಿಗಳ ಹೃದಯ ಕದ್ದಿರುವ ಉತ್ತರಾಖಂಡದ ಸ್ವರ ಮಾಂತ್ರಿಕ ಪವನ್ ದೀಪ್ ರಾಜನ್ ಇಂಡಿಯನ್ ಐಡಿಯಲ್ ಸೀಸನ್ 12ರ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
Published: 16th August 2021 11:54 AM | Last Updated: 16th August 2021 02:41 PM | A+A A-

ಪವನ್ ದೀಪ್ ರಾಜನ್, ಅರುಣಿತಾ, ಸಾಯಿ ಕಾಂಬ್ಳೆ
ಮುಂಬೈ: ದೇಶಾದ್ಯಂತ ಸಂಗೀತ ಪ್ರೇಮಿಗಳ ಹೃದಯ ಕದ್ದಿರುವ ಉತ್ತರಾಖಂಡದ ಸ್ವರ ಮಾಂತ್ರಿಕ ಪವನ್ ದೀಪ್ ರಾಜನ್ ಇಂಡಿಯನ್ ಐಡಿಯಲ್ ಸೀಸನ್ 12ರ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಸಂಜೆ ಸೋನಿ ಟಿವಿಯಲ್ಲಿ ಇದೇ ಮೊದಲ ಬಾರಿಗೆ ನಡೆದ 12 ಸುತ್ತಿನ ಸಂಗೀತ ಸಂಭ್ರಮದ ನಂತರ ನಡೆದ ಗ್ಯ್ರಾಂಡ್ ಫಿನಾಲೆಯಲ್ಲಿ ಉತ್ತರಾಖಂಡದ ಚಾಂಪವಾಟ್ ನ ನಿವಾಸಿ ರಾಜನ್ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.
ಈ ಗೆಲುವು ಹೆಚ್ಚು ಕೆಲಸ ಮಾಡುವ ಆತ್ಮವಿಶ್ವಾಸವನ್ನು ನೀಡಿದೆ ಎಂದು ಪ್ರಶಸ್ತಿ ಪಡೆದ ಬಳಿಕ ಪವನ್ ದೀಪ್ ಹೇಳಿದರು. ಖ್ಯಾತ ಗಾಯಕರಾಗಿದ್ದ ಅನು ಮಲ್ಲಿಕ್, ಹಿಮೇಶ್ ರೆಶ್ಮಿಯಾ ಮತ್ತು ಸೋನು ಕಾಕ್ಕರ್ ತೀರ್ಪುಗಾರರಾಗಿದ್ದ ಇಂಡಿಯನ್ ಐಡಿಯಲ್ ಸೀಸನ್ 12 ವಿಜೇತರಾಗಿರುವುದು ನಂಬಲಿಕ್ಕೆ ಆಗುತ್ತಿಲ್ಲ ಎಂದು ರಾಜನ್ ವೇದಿಕೆ ಮೇಲೆ ನುಡಿದರು.
ಅತೀವ ಸಂತೋಷವಾಗುತ್ತಿದ್ದು, ತುಂಬಾ ಅದೃಷ್ಟಶಾಲಿ ಅನಿಸುತ್ತಿದೆ. ಈ ಜವಾಬ್ದಾರಿ ಮುಂದೆ ಹೆಚ್ಚು ಕೆಲಸ ಮಾಡಲು ಆತ್ಮವಿಶ್ವಾಸವನ್ನುಂಟು ಮಾಡಿದೆ. ಆಡಿಷನ್ ಸಮಯದಲ್ಲಿ ನಾನು ತುಂಬಾ ಆತಂಕಕ್ಕೊಳಗಾಗಿದ್ದೆ, ನಾನು ಆಯ್ಕೆಯಾಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಪ್ರಯಾಣ ಚೆನ್ನಾಗಿತ್ತು. ತೀರ್ಪುಗಾರರಿಂದ ಸಾಕಷ್ಟು ಕಲಿತಿದ್ದೇನೆ, ಇಂಡಿಯನ್ ಐಡಲ್ ನನ್ನ ಕನಸುಗಳಿಗೆ ಸೇತುವೆಯಂತೆ ಕೆಲಸ ಮಾಡಿದೆ. ಅಭಿಮಾನಿಗಳು ಇದೇ ರೀತಿಯ ಪ್ರೀತಿಯನ್ನು ಮುಂದುವರೆಸುತ್ತಾರೆ ಎಂಬ ವಿಶ್ವಾಸ ಇರುವುದಾಗಿ ಅವರು ತಿಳಿಸಿದ್ದಾರೆ.
ಪವನ್ ದೀಪ್ ರಾಜನ್ ಗೆ ಸೋನಿ ಎಂಟರ್ ಟೈನ್ ಮೆಂಟ್ ಟೆಲಿವಿಷನ್ ನಿಂದ 25 ಲಕ್ಷ ರೂ. ನಗದು ಹಾಗೂ ಮಾರುತಿ ಸುಜುಕಿ ಸ್ವೀಪ್ಟ್ ಕಾರನ್ನು ಬಹುಮಾನವಾಗಿ ನೀಡಲಾಯಿತು. ಅಂತಿಮ ಹಂತದ ಸ್ಪರ್ಧೆಯಲ್ಲಿದ್ದ ಗಾಯಕಿ ಅರುಣಿತಾ ಕಂಜಿಲಾಲ್ ಮತ್ತು ಸಾಯ್ಲಿ ಕಾಂಬ್ಳೆ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಆಫ್ ಆಗಿ 5 ಲಕ್ಷ ರೂ. ಬಹುಮಾನ ಪಡೆದರು. ಮೊಹಮ್ಮದ್ ಡ್ಯಾನಿಶ್ ಮತ್ತು ನಿಹಾಲ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ರನ್ನರ್ ಆಫ್ ಪ್ರಶಸ್ತಿ ಸ್ವೀಕರಿಸಿದರು. ಇಂಡಿಯನ್ ಐಡಲ್ ಸೀಸನ್ 12 ಅನ್ನು ಗಾಯಕ ಆದಿತ್ಯ ನಾರಾಯಣ್ ಆಯೋಜಿಸಿದ್ದರು.
Tnku so much all of u#Pawandeep #Pawandeeprajan #Nehakakkar #IndianIdol #Indianidol12 #indianidol2021 #arunitakanjilal pic.twitter.com/g2Wo3fVQLP
— PawanDeep Rajan FP (@Pawandeeprajan1) August 15, 2021