ಶೀಘ್ರದಲ್ಲೇ 'ಡ್ರೋನ್' ಪ್ರಥಮ್'ಗೆ ಮುಹೂರ್ತ!

'ಡ್ರೋನ್ ಬಾಯ್' ಚಿತ್ರ ಮಾಡುವುದಾಗಿ ಹೇಳಿ ಎಲ್ಲರಿಗೂ ಕಾಗೆ ಹಾರಿಸಿದ್ದ ಬಿಗ್ ಬಾಸ್ 04 ಕನ್ನಡ ರಿಯಾಲಿಟಿ ಶೋ ಪ್ರಶಸ್ತಿ ವಿಜೇತ ಪ್ರಥಮ್ ಇದೀಗ 'ಡ್ರೋನ್ ಪ್ರಥಮ್'' ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಪ್ರಥಮ್
ಪ್ರಥಮ್

ಬೆಂಗಳೂರು: 'ಡ್ರೋನ್ ಬಾಯ್' ಚಿತ್ರ ಮಾಡುವುದಾಗಿ ಹೇಳಿ ಎಲ್ಲರಿಗೂ ಕಾಗೆ ಹಾರಿಸಿದ್ದ ಬಿಗ್ ಬಾಸ್ 04 ಕನ್ನಡ ರಿಯಾಲಿಟಿ ಶೋ ಪ್ರಶಸ್ತಿ ವಿಜೇತ ಪ್ರಥಮ್ ಇದೀಗ 'ಡ್ರೋನ್ ಪ್ರಥಮ್'' ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಶೀಘ್ರದಲ್ಲೇ ಮೂಹೂರ್ತದ ದಿನಾಂಕದೊಂದಿಗೆ ಚಿತ್ರದ ಅಪ್ಡೇಡ್ ನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಪ್ರಥಮ್ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಸುತ್ತ ರಾತ್ರೋರಾತ್ರಿ ಹೈಪ್ ಕ್ರಿಯೆಟ್ ಆಗಿ ವಿವಾದಾತ್ಮಕ ಹೇಳಿಕೆಗಳು ಬಂದಿದ್ದವು. ನಂತರ ಅದೆಲ್ಲಾ ಸುಳ್ಳಾಗಿ ಬದಲಾಗಿತ್ತು.

ಡ್ರೋನ್ ಪ್ರಥಮ್ ಗಾಗಿ ನಾಲ್ಕು ತಿಂಗಳು ಅಧ್ಯಯನ ಮಾಡಿದ್ದು, ನಾನೇ ಮಾಡಿದ್ದ ಅನೇಕ ಭಾಷಣಗಳನ್ನು ವೀಕ್ಷಿಸಿದ್ದೇನೆ. ಇದನ್ನೇ ತನ್ನ ನಡವಳಿಕೆ ಹಾಗೂ ಮ್ಯಾನರಿಸಂ ಸರಕನ್ನಾಗಿ ಬಳಸಲಾಗಿದೆ. ತಬಲ ನಾಣಿ ಇದರಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರತಾಪ್ ಜೀವನ ಕುರಿತಾದ ಚಿತ್ರದಲ್ಲಿ ಹೆಚ್ಚಿನ ಹಾಸ್ಯವಿದೆ. ಸುಬ್ಬಾ ಶಾಸ್ತ್ರಿ, ಗೌರಿ ಗಣೇಶ, ಉಂಡು ಹೋದ ಕೊಂಡು ಹೋದ ಅಂತಹ ಹಾಸ್ಯ ಚಿತ್ರಗಳ ಪ್ರೇರಣೆ ಪಡೆದಿರುವುದಾಗಿ ಪ್ರಥಮ್ ವಿವರಿಸಿದ್ದಾರೆ.

'ಡ್ರೋನ್ ಪ್ರಥಮ್' ಚಿತ್ರದಲ್ಲಿ ಇಬ್ಬರು ಹಿರೋಯಿನ್ ಗಳಿದ್ದು, ಅದರಲ್ಲಿ ಮುಂಬೈ ಮೂಲಕ ಒಬ್ಬರ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಚಿತ್ರದಲ್ಲಿ ಪೋರ್ನ್ ಸ್ಟಾರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಯೋಜನೆ ಕೈಗೆತ್ತಿಕೊಳ್ಳಲು ಧ್ರವ ಸರ್ಜಾ ಪ್ರಥಮ್ ಗೆ ಪ್ರೇರಣೆಯಂತೆ. ನಟ ಹಾಗೂ ನಿರ್ದೇಶಕನಾಗಿ ನನ್ನ ಸಾಮರ್ಥ್ಯ ರೆಗ್ಯೂಲರ್ ಮಾಸ್ ಹಿರೋಗಿಂತ ವಿಭಿನ್ನವಾಗಿದೆ. ಡೈಲಾಗ್ ಡೆಲಿವರಿ ಮತ್ತು ಹಾಸ್ಯ ನನ್ನ ಬಲವಾಗಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದಿದ್ದಾರೆ. 

ರಿಯಾಲಿಟಿ ಶೋ ಗೆದ್ದ ನಂತರ ಪ್ರಥಮ್  'ದೇವರಂಥ ಮನುಷ್ಯ' ಚಿತ್ರದಲ್ಲಿ ಎಂಎಲ್ ಎ ಅವತಾರದಲ್ಲಿ ಬೆಳ್ಳಿ ಪರದೆಯಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದರು. ಅವರ ಮೊದಲ ನಿರ್ದೇಶನದ 'ನಟ ಭಯಂಕರ' ರಿಲೀಸ್ ಗೆ ರೆಡಿಯಾಗಿದೆ. ಎರಡನೇ ಚಿತ್ರದ ನಿರ್ದೇಶನವನ್ನು ಮುಗಿಸುವಲ್ಲಿ ಪ್ರಥಮ್ ನಿರತವಾಗಿದ್ದು,  ಕರ್ನಾಟಕ ಅಳಿಯ  ಶೂಟಿಂಗ್ ಪ್ರಕ್ರಿಯೆಯ ಕೊನೆಯ ಹಂತದಲ್ಲಿದೆ. ಈ ಎಲ್ಲದರ ನಡುವೆ ಪ್ರಥಮ್ ಕೂಡ ಡ್ರೋನ್ ಪ್ರಥಮ್ ಗೆ ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ದೊಡ್ಡ ಚಿಂತನೆಯನ್ನು ಪ್ರಥಮ್ ಮಾಡಿದ್ದಾರೆ. 

ಹಿಂದಿನ ಚಿತ್ರಗಳಿಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಸಿದ್ದರಾಮಯ್ಯ ಮತ್ತು ಹಿರಿಯ ರಾಷ್ಟ್ರೀಯ ನಾಯಕ ಎಲ್ ಕೆ ಅಡ್ವಾಣಿ ಕ್ಲಾಪ್‌ಬೋರ್ಡ್ ಮಾಡಿದ್ದರು. ಈ ಬಾರಿಯೂ ಅಷ್ಟೇ ಪ್ರಸಿದ್ಧ ವ್ಯಕ್ತಿಯಿಂದ ಮಾಡಿಸುವ ಯೋಚನೆಯಿದ್ದು, ಶೀಘ್ರದಲ್ಲಿಯೇ ಹೆಸರನ್ನು ಘೋಷಿಸಲಾಗುವುದು ಎಂದು ಪ್ರಥಮ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com