ಶಿವರಾಜ್ ಕುಮಾರ್ 124ನೇ ಸಿನಿಮಾ ಮೂಲಕ ಕನ್ನಡಕ್ಕೆ ಮೆಹ್ರಿನ್ ಪಿರ್ಜಾಡಾ ಪಾದಾರ್ಪಣೆ!

ರಾಮ್ ಧೂಳಿಪುಡಿ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ 124ನೇ ಸಿನಿಮಾ ಮೂಲಕ ನಟಿ ಮೆಹ್ರೀನ್ ಪಿರ್ಜಾಡಾ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

Published: 21st July 2021 11:42 AM  |   Last Updated: 21st July 2021 11:42 AM   |  A+A-


Mehreen Pirzada

ಮೆಹ್ರಿನ್ ಪಿರ್ಜಾಡಾ

Posted By : Shilpa D
Source : The New Indian Express

ರಾಮ್ ಧೂಳಿಪುಡಿ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ 124ನೇ ಸಿನಿಮಾ ಮೂಲಕ ನಟಿ ಮೆಹ್ರೀನ್ ಪಿರ್ಜಾಡಾ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲು ಚಿತ್ರ ತಂಡ ಸಿದ್ಧತೆ ನಡೆಸಿದ್ದು, ಉಳಿದ ಕಲಾವಿದರ ಆಯ್ಕೆ ಕೆಲಸ ಅಂತಿಮಗೊಳ್ಳುತ್ತಿದೆ. ಎಫ್2 ಮತ್ತು ಪತ್ತಾಸ್ ಸಿನಿಮಾ ನಾಯಕಿ ಮೆಹ್ರೀನ್ ಪಿರ್ಜಾಡಾ ಶಿವಣ್ಣಗೆ ನಾಯಕಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೆಹ್ರೀನ್ ಪಿರ್ಜಾಡಾ ಅವರಿಗೆ ಕಥೆ ಇಷ್ಟವಾಗಿದ್ದು ಗ್ರೀನ್ ಸಿಗ್ನನಲ್ ನೀಡಿದ್ದಾರೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಮೆಹ್ರೀನ್ ಪಿರ್ಜಾಡಾ ಜನಪ್ರಿಯರಾಗಿದ್ದಾರೆ. ಸದ್ಯ ಅನಿಲ್ ರವಿಪುಡಿ ಅವರ ಎಫ್ 3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಬಾಲ ಶ್ರೀರಾಮ್ ಸ್ಟುಡಿಯೋ ಶಿವರಾಜ್ ಕುಮಾರ್ ಅವರ 124 ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದೊಂದು ಕೌಟುಂಬಿಕ ಸಿನಿಮಾವಾಗಿದೆ. ಶಿವಣ್ಣ ಎರಡು ಸೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಸ್ಸಾರ್, ಸಂಪತ್, ಸಾಧುಕೋಕಿಲ ಮತ್ತು ಗಾಯಕಿ ಮಂಗ್ಲಿಕ್ ಕೂಡ ನಟಿಸುತ್ತಿದ್ದಾರೆ. ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲಾ ಶ್ರೀನಿವಾಸ್ ರೆಡ್ಡಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಕುಡುಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಟಗರು ಸಿನಿಮಾ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜಿಸಿದದ್ದಾರೆ. ರವಿ ಕುಮಾರ್ ಸನಾ ಛಾಯಾಗ್ರಹಣವಿದೆ.
 


Stay up to date on all the latest ಸಿನಿಮಾ ಸುದ್ದಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp