ಅಚ್ಚ ಕನ್ನಡದಲ್ಲಿ ಕೋವಿಡ್ ಜಾಗೃತಿ ಸಂದೇಶ ನೀಡಿದ ನಟ ಜ್ಯೂನಿಯರ್ ಎನ್ ಟಿಆರ್, ವಿಡಿಯೋ

ಬಹು ನಿರೀಕ್ಷಿತ ಆರ್ ಆರ್ ಆರ್ ಚಿತ್ರತಂಡ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಾಣಿಸಿಕೊಂಡಿರುವ ನಟಿ ಆಲಿಯಾ ಭಟ್, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್ ಟಿಆರ್, ಅಜಯ್ ದೇವಗನ್ ಹಾಗೂ ನಿರ್ದೇಶಕ ಎಸ್ ಎಸ್ ರಾಜಮೌಳಿ ಎಲ್ಲರೂ ಒಟ್ಟಾಗಿ ಕೋವಿಡ್-19 ನಿಯಂತ್ರಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.
ಆರ್ ಆರ್ ಆರ್ ಚಿತ್ರ ತಂಡ
ಆರ್ ಆರ್ ಆರ್ ಚಿತ್ರ ತಂಡ

ಹೈದ್ರಾಬಾದ್: ಬಹು ನಿರೀಕ್ಷಿತ ಆರ್ ಆರ್ ಆರ್ ಚಿತ್ರತಂಡ ಗುರುವಾರ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಾಣಿಸಿಕೊಂಡಿರುವ ನಟಿ ಆಲಿಯಾ ಭಟ್, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್ ಟಿಆರ್, ಅಜಯ್ ದೇವಗನ್ ಹಾಗೂ ನಿರ್ದೇಶಕ ಎಸ್ ಎಸ್ ರಾಜಮೌಳಿ ಎಲ್ಲರೂ ಒಟ್ಟಾಗಿ ಕೋವಿಡ್-19 ಹರಡುವಿಕೆ ನಿಯಂತ್ರಿಸೋಣ ಎಂದು ಭಾರತೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಂದೇಶ ನೀಡಿರುವ ತಾರೆಯರು, ಜನರು ಮಾಸ್ಕ್ ಧರಿಸಿ, ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಅದರಲ್ಲೂ ಅಚ್ಚ ಕನ್ನಡದಲ್ಲಿ ಮಾತನಾಡಿರುವ ಜ್ಯೂನಿಯರ್ ಎನ್ ಟಿಆರ್,ಮಾಸ್ಕ್ ನ್ನು ಯಾವಾಗಲೂ ಧರಿಸಿ, ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ, ಹೊರಗಡೆ ಹೋದಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆರ್ ಆರ್ ಆರ್ ಮೂವೀ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಸಂದೇಶವನ್ನು ಹಂಚಿಕೊಳ್ಳಲಾಗಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ಸ್‌ನ ಡಿವಿವಿ ದಾನಯ್ಯ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಆರ್ ಆರ್ ಆರ್ ಚಿತ್ರ ಅಕ್ಟೋಬರ್ 13 ರಂದು ತೆರೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com