ಆ ಮನೆಯ ಸೊಸೆಯಾಗಬೇಕು ಎಂಬ ಆಸೆ: ರಶ್ಮಿಕಾ ಮಂದಣ್ಣ

ಅತ್ಯಲ್ಪ ಸಮಯದಲ್ಲಿ ತೆಲುಗಿನಲ್ಲಿ ತಾರಾ ನಾಯಕಿಯಾಗಿ ಎತ್ತರಕ್ಕೇರಿರುವ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ, “ಕಿರಕ್‌ಪಾರ್ಟಿ” ಚಿತ್ರದ ನಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಕೊಡಗಿನ ಬೆಡಗಿ.
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ಚೆನ್ನೈ: ಅತ್ಯಲ್ಪ ಸಮಯದಲ್ಲಿ ತೆಲುಗಿನಲ್ಲಿ ತಾರಾ ನಾಯಕಿಯಾಗಿ ಎತ್ತರಕ್ಕೇರಿರುವ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ, “ಕಿರಕ್‌ ಪಾರ್ಟಿ” ಚಿತ್ರದ ನಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಕೊಡಗಿನ ಬೆಡಗಿ.

ಆಕೆ ನಟಿಸಿದ ನಟಿಸಿದ ಮೊದಲ ತೆಲುಗು ಚಿತ್ರ 'ಚಲೋ' ಸೂಪರ್ ಹಿಟ್ ಆಗಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ನಂತರ ವಿಜಯ್ ದೇವರಕೊಂಡ ಎದುರು 'ಗೀತ ಗೋವಿಂದಂ' ಚಿತ್ರದಲ್ಲಿ ನಟಿಸಿ ತೆಲುಗಿನಲ್ಲಿ ತಾರಾ ನಾಯಕಿ ಎಂಬ ಪಟ್ಟ ಅಲಂಕರಿಸಿದರು.
ತೆಲುಗಿನಲ್ಲಿ ಪ್ರಸ್ತುತ ಅಲ್ಲು ಅರ್ಜುನ್‌- ಸುಕುಮಾರ್‌ ಕಾಂಬಿನೇಷನ್‌ ಮೂಡಿಬರುತ್ತಿರುವ “ಪುಷ್ಪ” ದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಭಾರಿ ಬೇಡಿಕೆ ಇದ್ದರೂ ಕಾಲಿವುಡ್‌ ಮೇಲೂ ಕಣ್ಣಹಾಕಿದ ರಶ್ಮಿಕಾ, ಕಾರ್ತಿ ನಾಯಕರಾಗಿ ನಟಿಸಿದ್ದ ʼಸುಲ್ತಾನ್‌ʼ ಮೂಲಕ ಕಾಲಿವುಡ್‌ ಪ್ರವೇಶಿಸಿದ್ದರು. ಸಿನಿಮಾ ಫ್ಲಾಪ್‌ ಆದರೂ ರಶ್ಮಿಕಾ ಪಾತ್ರ ಕ್ಕೆ ಒಳ್ಳೆಯ ಅಂಕ ಸಿಕ್ಕಿವೆ.

ಈ ನಡುವೆ ರಶ್ಮಿಕಾ ಮಾತನಾಡಿ.. ತಮಿಳು ನಾಡು ಎಂದರೆ ತಮಗೆ ತುಂಬಾ ಇಷ್ಟ.. ಅಲ್ಲಿನ ಜನರು .. ಸಂಪ್ರದಾಯ ತಮ್ಮನ್ನು ತುಂಬಾ ಆಕರ್ಷಿಸಿದೆ ಎಂದು ಹೇಳಿದ್ದಾರೆ. ತಾವು ಎಂದಾದರೂ ತಮಿಳು ಮನೆಯ ಸೊಸೆಯಾಗಬೇಕು ಎಂಬುದು ತಮ್ಮ ಮಹದಾಸೆಯೆಂದು ಮನಸಿನ ಮಾತು ಬಹಿರಂಗಗೊಳಿಸಿದ್ದಾರೆ. ರಶ್ಮಿಕಾ ಆಸೆ ನೆರವೇರುವುದೋ ಇಲ್ಲವೊ ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com