ಪುನೀತ್ ನಿವಾಸಕ್ಕೆ ತೆಲುಗು ನಟ ನಾಗಾರ್ಜುನ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
ಕಳೆದ ಶುಕ್ರವಾರ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ತೆಲುಗು ನಟ ನಾಗಾರ್ಜುನ ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Published: 02nd November 2021 04:56 PM | Last Updated: 02nd November 2021 04:56 PM | A+A A-

ಪುನೀತ್ ನಿವಾಸಕ್ಕೆ ಆಗಮಿಸಿದ ತೆಲುಗು ನಟ ನಾಗಾರ್ಜುನ
ಬೆಂಗಳೂರು: ಕಳೆದ ಶುಕ್ರವಾರ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ತೆಲುಗು ನಟ ನಾಗಾರ್ಜುನ ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಇಂದು ಅಪರಾಹ್ನ ಆಗಮಿಸಿದ ನಾಗಾರ್ಜುನ, ಪುನೀತ್ ಫೋಟೋಗೆ ಅಂತಿಮ ನಮನ ಸಲ್ಲಿಸಿ, ಪುನೀತ್ ಪತ್ನಿ, ಮಕ್ಕಳು ಹಾಗೂ ಸಹೋದರ ಡಾ. ಶಿವರಾಜ್ ಕುಮಾರ್ ಮತ್ತಿತರರೊಂದಿಗೆ ಮಾತುಕತೆ ನಡೆಸಿ, ಧೈರ್ಯ ತುಂಬಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗಾರ್ಜುನ, ಪುನೀತ್ ನಿಧನ ಶಾಕಿಂಗ್ ಆಗಿದೆ. ಅವರು ನಿಧನರಾಗಿದ್ದಾರೆ ಎಂಬುದನ್ನು ನಂಬಲಿಕ್ಕೆ ಆಗುತ್ತಿಲ್ಲ, ಅವರು ಸೆಟ್ ನಲ್ಲಿದ್ದಾಗ ಎಲ್ಲರನ್ನು ಹುರಿದುಂಬಿಸುತ್ತಿದ್ದರು ಎಂದು ಸ್ಮರಿಸಿದರು.