ಹೈದರಾಬಾದ್: 'ನ್ಯಾಷನಲ್ ಕ್ರಶ್' ಎಂಬ ಹೆಸರು ಪಡೆದುಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಿಡುವಿಲ್ಲದ ನಾಯಕ ನಟಿಯಾಗಿದ್ದಾರೆ.
ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. 'ಮಿಷನ್ ಮಜ್ನು' ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಈಗಷ್ಟೇ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಹೊಸ ಸಂದರ್ಶನವೊಂದರಲ್ಲಿ ರಶ್ಮಿಕಾ ರಿಲೇಶನ್‌ಶಿಪ್ ಕುರಿತು ಮನಸ್ಸು ತೆರೆದಿಟ್ಟಿದ್ದಾರೆ.
ನಿಮಗಿಂತ ವಯಸ್ಸಿನಲ್ಲಿ ಕಿರಿಯರೊಂದಿಗೆ ಡೇಟಿಂಗ್ ಮಾಡುತ್ತಿರಾ ಎಂಬ ಪ್ರಶ್ನೆಗೆ ಪ್ರೀತಿಗೂ ವಯಸ್ಸಿಗೂ ಏನು ಸಂಬಂಧ? ಅವರು ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸಬಾರದು. ಆಗ ವಯಸ್ಸು ಎಂಬುದು ದೊಡ್ಡ ವಿಷಯವಲ್ಲ ಎಂದು ಉತ್ತರಿಸಿದ್ದಾರೆ. ಆದರೆ, ಕೆಲ ದಿನಗಳಿಂದ ರಶ್ಮಿಕಾ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಆ ಮನೆಯ ಸೊಸೆಯಾಗಬೇಕು ಎಂಬ ಆಸೆ: ರಶ್ಮಿಕಾ ಮಂದಣ್ಣ
ಸಾಮಾಜಿಕ ಮಾಧ್ಯಮದಲ್ಲಿ ಕಟ್ಟು ಮಸ್ತು ದೇಹ ಪ್ರದರ್ಶಿಸುವ ಹುಡುಗರ ಬಗ್ಗೆ ಮಾತನಾಡಿ, ಅವರು ಕಷ್ಟಪಟ್ಟು ಫಿಟ್ ಆಗಿ ಕಾಣಿಸಿಕೊಳ್ಳುವುದನ್ನು ನಾನು ನಿಜಕ್ಕೂ ಪ್ರಶಂಸಿಸುತ್ತೇನೆ. ಆದರೆ, ಅದನ್ನು ಪ್ರೊಫೈಲ್ ಫೋಟೋ ಎಂದು ಏಕೆ ಹಾಕಬೇಕು? ದೇಹಕ್ಕಿಂತ ಮೊದಲು ನೀವೇನು ಎಂಬುದು ಅವರಿಗೆ ತಿಳಿದಿರಬೇಕು ಎಂದು ರಶ್ಮಿಕಾ ಉತ್ತರಿಸಿದ್ದಾರೆ.
Advertisement