ಗರುಡ ಗಮನ ಋಷಭ ವಾಹನಕ್ಕೆ ಲಾಕ್ ಡೌನ್ ವರವಾಗಿ ಪರಿಣಮಿಸಿತು: ರಾಜ್ ಬಿ. ಶೆಟ್ಟಿ
ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿರುವ ಗರುಡ ಗಮನ ಋಷಭ ವಾಹನ ಸಿನಿಮಾ ಬಗ್ಗೆ ಕಾತರ ಹೆಚ್ಚಾಗುತ್ತಿದೆ. ಈ ಗ್ಯಾಂಗ್ ಸ್ಟರ್ ಡ್ರಾಮಾ ಸಿನಿಮಾ ರಾಜ್ ಬಿ.ಶೆಟ್ಟಿ ಅವರ ಎರಡನೇ ನಿರ್ದೇಶನದ ಸಿನಿಮಾ.
Published: 18th November 2021 01:21 PM | Last Updated: 18th November 2021 01:29 PM | A+A A-

ಸಿನಿಮಾ ಪೋಸ್ಟರ್
ಬೆಂಗಳೂರು: ರಾಜ್ ಬಿ. ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಗರುಡ ಗಮನ ಋಷಭ ವಾಹನ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿರುವ ಈ ಹೊತ್ತಿನಲ್ಲಿ ಕಾತರ ಹೆಚ್ಚಾಗುತ್ತಿದೆ. ಈ ಗ್ಯಾಂಗ್ ಸ್ಟರ್ ಡ್ರಾಮಾ ಸಿನಿಮಾ ರಾಜ್ ಬಿ.ಶೆಟ್ಟಿ ಅವರ ಎರಡನೇ ನಿರ್ದೇಶನದ ಸಿನಿಮಾ ಆಗಿದೆ. ಮೊದಲು ಅವರು ಒಂದು ಮೊಟ್ಟೆಯ ಕತೆ ಸಿನಿಮಾದಲ್ಲಿ ನಿರ್ದೇಶಕನ ಕ್ಯಾಪ್ ಧರಿಸಿದ್ದರು.
ರಾಜ್. ಬಿ. ಶೆಟ್ಟಿ ಜೊತೆ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಒಟ್ಟು 40ಕ್ಕೂ ಹೆಚ್ಚು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರ ಪರಂವಾಹ್ ಸ್ಟುಡಿಯೋಸ್ ಅಡಿ ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಕೆ. ಆರ್. ಜಿ ನಿರ್ಮಿಸಿದೆ.
ಕೊರೊನಾ ಕಾಲದ ನಂತರ ವಿಶ್ವದ ಹಲವೆಡೆ ತೆರೆ ಕಾಣುತ್ತಿರುವ ಮೊದಲ ಕನ್ನಡ ಸಿನಿಮಾ ಗರುಡ ಗಮನ ಋಷಭ ವಾಹನ. ಭಾರತ ಹೊರತುಪಡಿಸಿ ಅಮೆರಿಕ, ಯುಎಇ, ಸಿಂಗಪೂರ್ ಮತ್ತು ಕೆನಡಾ ದೇಶಗಳಲ್ಲಿಯೂ ಗರುಡ ಗಮನ ಋಷಭ ವಾಹನ ಸಿನಿಮಾ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಗರುಡ ಗಮನ ಋಷಭ ವಾಹನ ಸಿನಿಮಾದ ನನ್ನ ಪಾತ್ರ ನೋಡಿ ಪ್ರೇಕ್ಷಕರು ಸರ್ ಪ್ರೈಸ್ ಆಗುವುದು ಖಂಡಿತ: ರಿಷಬ್ ಶೆಟ್ಟಿ
ಕೊರೊನಾ ಕಾಲದಲ್ಲಿ ತಯಾರಾದ ಈ ಸಿನಿಮಾ ನಿರ್ಮಾಣ ಮಾಡುವಾಗ ಅವಸರ ಮಾಡಬೇಕಾಗಿ ಬರಲಿಲ್ಲ ಎನ್ನುವುದೇ ವರದಾನವಾಯಿತು. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಗಿತವಾದ್ದರಿಂದ ಸಿನಿಮಾದ ಹಲವು ವಿಭಾಗಗಳನ್ನು ಮರುಪರಿಶೀಲಿಸಿ ಇಂಪ್ರೊವೈಸ್ ಮಾಡಿಕೊಳ್ಲಲು ಸಾಕಷ್ಟು ಕಾಲವಕಾಶ ದೊರೆತಿದ್ದಾಗಿ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಲಾಕ್ ಡೌನ್ ಗರುಡ ಗಮನ ಋಷಭ ವಾಹನ ಸಿನಿಮಾಗೆ ವರವಾಯಿತು ಎನ್ನುವ ಮಾತನ್ನು ಅವರು ಹೇಳಿದ್ದಾರೆ.
ಇದನ್ನೂ ಓದಿ: ತನಗಿಂತ ಕಿರಿಯರ ಜೊತೆ ಡೇಟಿಂಗ್ ವಿಚಾರ: ಪ್ರೇಮಕ್ಕೂ ವಯಸ್ಸಿಗೂ ಸಂಬಂಧವಿಲ್ಲ; ಅದು ಸಮಸ್ಯೆಯೇ ಅಲ್ಲ ಎಂದ ನಟಿ ರಶ್ಮಿಕಾ