ಒಳ್ಳೆಯ ಕಥೆಯನ್ನು ತೆರೆ ಮೇಲೆ ಪ್ರಸ್ತುತ ಪಡಿಸುವುದು ಥ್ರಿಲ್ ಕೊಡುತ್ತದೆ: ಗರುಡ ಗಮನ ಋಷಭ ವಾಹನ ಸಿನಿಮೆಟೊಗ್ರಾಫರ್ ಪ್ರವೀಣ್ ಶ್ರಿಯನ್
ಗರುಡ ಗಮನ ಋಷಭ ವಾಹನ (GGVV) ಸಿನಿಮಾದ ಸಿನಿಮೆಟೊಗ್ರಫಿ ಹಾಗೂ ಎಡಿಟಿಂಗ್, ಎರಡೂ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿರುವ ಪ್ರವೀಣ್ ಶ್ರಿಯನ್ ಸಿನಿಮಾದ ಬ್ಯಾಕ್ ಬೋನ್ ಎಂದು ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
Published: 17th November 2021 01:24 PM | Last Updated: 17th November 2021 01:28 PM | A+A A-

ಚಿತ್ರೀಕರಣ ವೇಳೆ ರಾಜ್ ಶೆಟ್ಟಿ ಜೊತೆ ಪ್ರವೀಣ್ ಶ್ರಿಯನ್
ಬೆಂಗಳೂರು: ಸಿನಿಮೆಟೊಗಾಫರ್ ಹಾಗೂ ಎಡಿಟಿಂಗ್ ಎರಡೂ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿರುವ ಪ್ರವೀಣ್ ಶ್ರಿಯನ್ ಗರುಡ ಗಮನ ಋಷಭ ವಾಹನ (GGVV) ಸಿನಿಮಾದ ಬ್ಯಾಕ್ ಬೋನ್ ಎಂದು ನಿರ್ದೇಶಕ ಮತ್ತು ನಟ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಗರುಡ ಗಮನ ಋಷಭ ವಾಹನ ಸಿನಿಮಾದ ನನ್ನ ಪಾತ್ರ ನೋಡಿ ಪ್ರೇಕ್ಷಕರು ಸರ್ ಪ್ರೈಸ್ ಆಗುವುದು ಖಂಡಿತ: ರಿಷಬ್ ಶೆಟ್ಟಿ
ಪ್ರವೀಣ್ ಮತ್ತು ರಾಜ್ ಬಿ. ಶೆಟ್ಟಿ ಅವರು ಸಿನಿಮಾರಂಗಕ್ಕೆ ಬರುವುದಕ್ಕೆ ಮುಂಚಿನಿಂದಲೂ ಪರಿಚಿತರು. ಜಾಹೀರಾತು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರವೀಣ್ ಅವರು ಅಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡುತ್ತಿದ್ದರೆ, ರಾಜ್ ಅವರು ಜಾಹಿರಾತಿನ ಕಾನ್ಸೆಪ್ಟನ್ನು ಬರೆದುಕೊಡುತ್ತಿದ್ದರು. ಮುಂದೆ ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಪ್ರವೀಣ್ ಮತ್ತು ರಾಜ್ ಬಿ. ಶೆಟ್ಟಿ ಇಬ್ಬರೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಇದನ್ನೂ ಓದಿ: ಗರುಡ ಗಮನ ವೃಷಭ ವಾಹನ ಸಿನಿಮಾಗೆ ಸಂಗೀತ ನೀಡುವುದು ಸವಾಲಾಗಿತ್ತು: ಮಿದುನ್ ಮುಕುಂದನ್
ಒಂದೊಳ್ಳೆಯ ಕಥೆಯನ್ನು ಕ್ಯಾಮೆರಾ ಮೂಲಕ ಪ್ರಸ್ತುತ ಪಡಿಸುವುದೇ ನನಗೆ ಥ್ರಿಲ್ ಕೊಡುತ್ತದೆ ಎನ್ನುತ್ತಾರೆ ಪ್ರವೀಣ್. ಅವರು ಸಿನಿಮಾರಂಗ ಪ್ರವೇಶಿಸುವ ಆಸೆಯನ್ನೇ ಇಟ್ಟುಕೊಂಡಿರಲಿಲ್ಲ.
ಸಣ್ಣ ಕೆಲಸವೊಂದಕ್ಕೆ ರಾಜ್ ಶೆಟ್ಟಿಯವರು ಪ್ರವೀಣ್ ನೆರವು ಪಡೆದುಕೊಂಡಿದ್ದರು. ಅದು ಮುಂದೆ ಮೊಟ್ಟೆಯ ಕಥೆ ಸಿನಿಮಾಗೆ ಕ್ಯಾಮೆರಾ ಹಿಡಿಯುವಂತೆ ಪ್ರೇರೇಪಿಸಿತು. ಈಗ ಗರುಡ ಗಮನ ಋಷಭ ವಾಹನ ಸಿನಿಮಾದ ಕ್ಯಾಮೆರಾಮೆನ್ ಮತ್ತು ಸಂಕಲನ ವಿಭಾಗವನ್ನೂ ಅವರೇ ನಿರ್ವಹಿಸಿದ್ದಾರೆ. ಕೆ ಆರ್ ಜಿ ಸಂಸ್ಥೆ ನಿರ್ಮಿಸಿ, ರಕ್ಷಿತ್ ಶೆಟ್ಟಿ ಅವರ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಪ್ರಸ್ತುತ ಪಡಿಸಲಾಗುತ್ತಿರುವ ಈ ಸಿನಿಮಾ ನವೆಂಬರ್ 19ರಂದು ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ