
ಬೆಂಗಳೂರು: ಸಿದ್ಲಿಂಗು ನಿರ್ದೇಶಕ ವಿಜಯಪ್ರಸಾದ್ ತೋತಾಪುರಿ ಪಾರ್ಟ್1 ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾವನ್ನು ಕ್ರಮವಾಗಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಬಿಡುಗಡೆಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮುಂದಿನ ಹೊಸ ಸಿನಿಮಾ ಪರಿಮಳ ಲಾಡ್ಜ್ ಶೂಟಿಂಗ್ ಗೆ ಸಿದ್ಧತೆ ನಡೆಸಿದ್ದಾರೆ. ನೀರ್ ದೋಸೆ ಸಿನಿಮಾದ ನಿರ್ಮಾಪಕರಾದ ಪ್ರಸನ್ನ, ಪರಿಮಳ ಲಾಡ್ಜಿಗೆ ಹಣ ಹೂಡುತ್ತಿದ್ದಾರೆ.
ಈ ಹಿಂದೆ ಪರಿಮಳ ಲಾಡ್ಜ್ ಸಿನಿಮಾದಲ್ಲಿ ಸತೀಶ್ ನೀನಾಸಂ ಅವರು ನಟಿಸುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಸತೀಶ್ ನೀನಾಸಂ ಅವರು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ. ಪರಿಮಳ ಲಾಡ್ಜ್ ಗೆ ನಾಯಕರಾಗಿ ಯೋಗಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಯೋಗಿ ಮತ್ತು ವಿಜಯಪ್ರಸಾದ್ ಈ ಹಿಂದೆ ಸಿದ್ಲಿಂಗು ಸಿನಿಮದಲ್ಲಿ ಜೊತೆಯಾಗಿದ್ದರು.
ಪರಿಮಳ ಲಾಡ್ಜ್ ಸಿನಿಮಾದಲ್ಲಿ ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆದಿದೆ. ಪರಿಮಳ ಲಾಡ್ಜ್ ನಂತರ ವಿಜಯ ಪ್ರಸಾದ್ ಮತ್ತು ಯೋಗಿ ಸಿದ್ಲಿಂಗು ಪಾರ್ಟ್ 2 ಸಿನಿಮಾಗೆ ಜೊತೆಯಾಗಲಿದ್ದಾರೆ.
ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ
ಕರ್ನಾಟಕದ ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು
ಸೂರಿ 'ಬ್ಯಾಡ್ ಮ್ಯಾನರ್ಸ್' ನಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿಷೇಕ್!
'ಶಬರಿ ಸರ್ಚಿಂಗ್ ಫಾರ್ ರಾವಣ' ಪೋಸ್ಟರ್ ರಿವೀಲ್: ಹೊಸ ಗೆಟಪ್ ನಲ್ಲಿ ಗುಳಿಕೆನ್ನೆ ಬೆಡಗಿ ರಚಿತಾ ರಾಮ್!
Advertisement