'ಕನ್ನಡಿಗ' ಅಂಶ ಚುನಾವಣೆಯಲ್ಲಿ ಮುನ್ನಲೆಗೆ; ತೆಲುಗು ಸಿನಿಮಾ ಕಲಾವಿದರ ಸಂಘದ ಸದಸ್ಯತ್ವಕ್ಕೆ ಪ್ರಕಾಶ್ ರೈ ರಾಜೀನಾಮೆ

ತೆಲುಗು ಸಿನಿಮಾ ರಂಗದ ಕಲಾವಿದರ ಸಂಘಟನೆಯಾದ  ಮೂವಿ ಆರ್ಟಿಸ್ಟ್  ಅಸೋಸಿಯೇಶನ್ (MAA)  ಅಧ್ಯಕ್ಷ  ಸ್ಥಾನಕ್ಕೆ  ನಡೆದ  ಚುನಾವಣೆಯಲ್ಲಿ ತೆಲುಗು ನಟ ಮಂಚು  ವಿಷ್ಣು  ಗೆಲುವು   ಸಾಧಿಸಿದ್ದಾರೆ. ಭಾನುವಾರ ನಡೆದ   ಚುನಾವಣೆಯಲ್ಲಿ, ಮಂಚು ವಿಷ್ಣು, ಪ್ರಕಾಶ್  ರೈ  ವಿರುದ್ದ ಜಯಭೇರಿ  ಬಾರಿಸಿದ್ದಾರೆ.
ನಟ ಪ್ರಕಾಶ್ ರೈ
ನಟ ಪ್ರಕಾಶ್ ರೈ

ಹೈದ್ರಾಬಾದ್‌: ತೆಲುಗು ಸಿನಿಮಾ ರಂಗದ ಕಲಾವಿದರ ಸಂಘಟನೆಯಾದ  ಮೂವಿ ಆರ್ಟಿಸ್ಟ್  ಅಸೋಸಿಯೇಶನ್ (MAA)  ಅಧ್ಯಕ್ಷ  ಸ್ಥಾನಕ್ಕೆ  ನಡೆದ  ಚುನಾವಣೆಯಲ್ಲಿ ತೆಲುಗು ನಟ ಮಂಚು  ವಿಷ್ಣು  ಗೆಲುವು ಸಾಧಿಸಿದ್ದಾರೆ. ಭಾನುವಾರ ನಡೆದ   ಚುನಾವಣೆಯಲ್ಲಿ, ಮಂಚು ವಿಷ್ಣು, ಪ್ರಕಾಶ್  ರೈ  ವಿರುದ್ದ ಜಯಭೇರಿ  ಬಾರಿಸಿದ್ದಾರೆ.

ಪ್ರಕಾಶ್ ರೈ   ಅವರ   ಗುಂಪಿನಿಂದಲೂ   ಕೆಲವರು ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ  ಸೋಮವಾರ ಹೈದ್ರಾಬಾದಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ, ಮೂವಿ ಆರ್ಟ್ಸ್ ಅಸೋಸಿಯೇಷನ್' ಚುನಾವಣೆಗಳು  ಅತ್ಯಂತ  ಚೈತನ್ಯ ದಾಯಕವಾಗಿ  ನೆಡೆದಿದ್ದು,  ಗೆದ್ದ  ಸದಸ್ಯರಿಗೆ ಅಭಿನಂದಿಸುವುದಾಗಿ ತಿಳಿಸಿದರು. 

ಚಿತ್ರರಂಗ ಎದುರಿಸುತ್ತಿರುವ  ಸಮಸ್ಯೆಗಳು ಎಲ್ಲರಿಗೂ  ಗೊತ್ತು. ಈಗ   ಚುನಾಯಿತ  ಸಮಿತಿ  ಎಲ್ಲಾ ಭರವಸೆಗಳನ್ನು ಈಡೇರಿಸುವುದು ಮುಖ್ಯವಾಗಿದೆ ಎಂದರು.

ನಾನು  ಕರ್ನಾಟಕ ರಾಜ್ಯಕ್ಕೆ ಸೇರಿದವನು, ತೆಲುಗಿನವನಲ್ಲ, ಕನ್ನಡಿಗ ಎಂಬ ಅಂಶವನ್ನು   ಚುನಾವಣೆಯಲ್ಲಿ ಪ್ರಮುಖವಾಗಿ  ಮುನ್ನಲೆಗೆ  ತರಲಾಯಿತು. ನಾನು ತೆಲುಗಿನವನೇ. ನಾನು  ಒಬ್ಬ  ಕಲಾವಿದ ಎಂದು ಹೇಳಿದ ಪ್ರಕಾಶ್‌  ರೈ ಮೂವಿ ಆರ್ಟಿಸ್ಟ್ ಅಸೋಸಿಯೇಶನ್ (MAA) ಸದಸ್ಯತ್ವಕ್ಕೆ  ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com