'ಟಾಮ್ ಅಂಡ್ ಜೆರ್ರಿ' ಗಾಯಕ ಸಿದ್ ಶ್ರೀರಾಂ ಕನ್ನಡ ಹಾಡು ಇನ್ಸ್ಟಾಗ್ರಾಂನಲ್ಲಿ ಇನ್ಸ್ಟೆಂಟ್ ಹಿಟ್
ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ.
Published: 07th September 2021 01:25 PM | Last Updated: 07th September 2021 01:25 PM | A+A A-

ಸಿದ್ ಶ್ರೀರಾಂ
ಬೆಂಗಳೂರು: ಎಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದ ಟಾಮ್ ಅಂಡ್ ಜೆರ್ರಿ ಸಿನಿಮಾದ 'ಹಾಯಾಗಿದೆ ಎದೆಯೊಳಗೆ' ಹಾಡು ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಸಾಧನೆ ಮಾಡಿದೆ. ಈ ಸಾಧನೆ ಮಾಡಿದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ.
ಇದನ್ನೂ ಓದಿ: ಗಣೇಶ ಚತುರ್ಥಿಗೆ ದರ್ಶನ್ ನಟನೆಯ 55ನೇ ಸಿನಿಮಾ ಟೈಟಲ್ ರಿವೀಲ್!
ತಮಿಳುನಾಡು ಮೂಲದ ಹೆಸರಾಂತ ಗಾಯಕ ಸಿದ್ ಶ್ರೀರಾಂ ಅವರು ಹಾಡಿರುವ ಮೊದಲ ಕನ್ನಡ ಹಾಡು ಇದು ಎನ್ನುವುದು ವಿಶೇಷ. ಈ ಹಾಡಿಗೆ ಸಂಗೀತ ನೀಡಿರುವವರು ಮ್ಯಾಥ್ಯೂಸ್ ಮನೋಹರ್.
ಟಾಮ್ ಅಂಡ್ ಜೆರ್ರಿ ಸಿನಿಮಾವನ್ನು ರಾಘವ್ ವಿನಯ್ ಶಿವಗಂಗೆ ನಿರ್ದೇಶಿಸುತ್ತಿದ್ದಾರೆ. ನಿಶ್ಚಿತ್ ಕೊರೊಡಿ ಮತ್ತು ಚೈತ್ರಾ ರಾವ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಅವರಿಬ್ಬರೂ ಈ ಹಿಂದೆ ಗಂಟುಮೂಟೆ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.
ಇದನ್ನೂ ಓದಿ: ದಕ್ಷಿಣ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ಪೆಡ್ರೋ' ಚಿತ್ರ ಆಯ್ಕೆ
'ಹಾಯಾಗಿದೆ ಎದೆಯೊಳಗೆ' ಹಾಡನ್ನು ಕೇಳಿದ್ದ ನಟ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ಸೂಚಿಸಿದ್ದರು. ಟಾಮ್ ಅಂಡ್ ಜೆರ್ರಿ ಸಿನಿಮಾ ನಿರ್ಮಾಣ ಪೂರ್ತಿಯಾಗಿದ್ದು ಸೆನ್ಸಾರ್ ಅನುಮತಿಗಾಗಿ ಕಾಯುತ್ತಿದೆ.
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದ ನಂತರ ಸಿನಿಮಾ ಬಿಡುಗಡೆಗೊಳಿಸುವ ಇರಾದೆ ಚಿತ್ರತಂಡದ್ದು. ಸಿನಿಮಾ ರಿದ್ದಿ ಸಿದ್ದಿ ಬ್ಯಾನರ್ ಅಡಿ ಮೂಡಿ ಬರುತ್ತಿದೆ. ಜೈ ಜಗದೀಶ್, ರಂಗಾಯಣ ರಘು, ಕಡ್ಡಿಪುಡಿ ಚಂದ್ರು, ಪದ್ಮಜಾ ರಾವ್ ಮತ್ತಿತರರು ತಾರಾಗಣದಲ್ಲಿದ್ದಾರೆ.