ಕೆಜಿಎಫ್-2 ನಂತರ ಯಶ್ ಮುಂದಿನ ಚಿತ್ರ ಯಾವುದು? ರಾಕಿ ಭಾಯ್ ಅಭಿಮಾನಿಗಳ ಕಾತುರಕ್ಕೆ ಇಲ್ಲಿದೆ ಉತ್ತರ!

ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಮಾರ್ಕೆಟ್ ನಲ್ಲಿ ಭಾರೀ ಯಶಸ್ಸು ಸಾಧಿಸಿದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಇನ್ನೂ ಎಲ್ಲೂ ಬಾಯಿಬಿಟ್ಟಿಲ್ಲ.
ಯಶ್
ಯಶ್

ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಮಾರ್ಕೆಟ್ ನಲ್ಲಿ ಭಾರೀ ಯಶಸ್ಸು ಸಾಧಿಸಿದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಇನ್ನೂ ಎಲ್ಲೂ ಬಾಯಿಬಿಟ್ಟಿಲ್ಲ.

ಕೆಜಿಎಫ್ 2 ರಿಲೀಸ್ ಗಾಗಿ ಕಾಯುತ್ತಿರುವ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಪ್ರತಿ ದಿನ ಯಶ್ ಹೊಸ ಸಿನಿಮಾ ಬಗ್ಗೆ ಹಲವು ವದಂತಿಗಳು ಹರಡುತ್ತಿವೆ. ವಿವಿಧ ಪ್ರೊಡಕ್ಷನ್ ಹೌಸ್ ಗಳ ಜೊತೆ ಯಶ್ ಸಹಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕನ್ನಡ, ತಮಿಳು, ಮತ್ತು ಹಿಂದಿ ಸಿನಿಮಾ ರಂಗದ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್ ಗಳು ಯಶ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ಯಾನ್ ಇಂಡಿಯಾ ಮೂಲಕ ತಮ್ಮ ಮುಂದಿನ ಚಿತ್ರವನ್ನು ಮಾಡಲು ಬಯಸಿರುವ ಯಶ್ ಸರಿಯಾದ ಕತೆ ಆಯ್ಕೆ ಮಾಡುವ ಲೆಕ್ಕಾಚಾರ ಹಾಕಿದ್ದಾರೆ ಎಂದು ಯಶ್ ಆಪ್ತರೊಬ್ಬರು ತಿಳಿಸಿದ್ದಾರೆ.

ಇದೆಲ್ಲಾ ವದಂತಿಗಳ ನಡುವೆ ಯಶ್ ತಮ್ಮ ಕೆಜಿಎಫ್ -2 ಬಿಡುಗಡೆ ಸಂಬಂಧ ಗಮನ ಹರಿಸಿದ್ದಾರೆ. ಆದರೂ ಯಶ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕನ ಮುಂದಿನ ಸಿನಿಮಾ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ, ಮುಫ್ತಿ ಡೈರೆಕ್ಟರ್ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಯಬಹುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com