ಸೆಪ್ಟೆಂಬರ್ 10ಕ್ಕೆ 'ಶಿವಾಜಿ ಸುರತ್ಕಲ್' ಸೀಕ್ವೆಲ್ ಮುಹೂರ್ತ
ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸೂರತ್ಕಲ್ ಚಿತ್ರದ ಎರಡನೇ ಭಾಗದ ಸಿದ್ಧತೆ ಭರದಿಂದ ಸಾಗಿದ್ದು, ಈ ನಡುವೆ ಚಿತ್ರದ ಮುಹೂರ್ತ ಸಮಾರಂಭ ಸೆಪ್ಟೆಂಬರ್ 10 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.
Published: 08th September 2021 11:52 AM | Last Updated: 08th September 2021 01:31 PM | A+A A-

ಸಂಗ್ರಹ ಚಿತ್ರ
ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸೂರತ್ಕಲ್ ಚಿತ್ರದ ಎರಡನೇ ಭಾಗದ ಸಿದ್ಧತೆ ಭರದಿಂದ ಸಾಗಿದ್ದು, ಈ ನಡುವೆ ಚಿತ್ರದ ಮುಹೂರ್ತ ಸಮಾರಂಭ ಸೆಪ್ಟೆಂಬರ್ 10 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 10 ರಮೇಶ್ ಅರವಿಂದ್ ಅವರ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಅಂದೇ ಚಿತ್ರದ ಸೀಕ್ವೆಲ್' ಮುಹೂರ್ತ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಶಿವಾಜಿ ಸೂರತ್ಕಲ್ ಚಿತ್ರವನ್ನು ಆಕಾಶ್ ಶ್ರೀವಾಸ್ತವ ಅವರು ನಿರ್ದೇಶಿಸಿದ್ದು, 2020ರ ಫೆಬ್ರವರಿ ರಂದು ಬಿಡುಗಡೆಗೊಂಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೆ, ವರ್ಷದ ಅತ್ಯಧಿಕ ಗಳಿಕೆಯ ಚಿತ್ರಗಳಲ್ಲಿ ಶಿವಾಜಿ ಸೂರತ್ಕಲ್ ಕೂಡ ಒಂದಾಗಿತ್ತು. ಚಿತ್ರದ ಮೊದಲ ಭಾಗದ ಯಶಸ್ಸು ನಿರ್ಮಾಪಕರನ್ನು ಪ್ರೇರೇಪಿಸಿದ್ದು, ಇದೀಗ ಚಿತ್ರದ ಮುಂದುವರೆದ ಭಾಗವನ್ನೂ ನಿರ್ಮಿಸಲಾಗುತ್ತಿದೆ.
ಚಿತ್ರದ ಮುಂದವರೆದ ಭಾಗದ ಚಿತ್ರೀಕರಣವನ್ನು ಅಕ್ಟೋಬರ್ ನಿಂದ ಆರಂಭಿಸಲು ಚಿತ್ರ ತಂಡ ನಿರ್ಧರಿಸಿದ್ದು, ಚಿತ್ರದಲ್ಲಿ ರಾಧಿಕಾ ನಾರಾಯಣ್, ರಾಘು ರಾಮನಕೊಪ್ಪ ಹಾಗೂ ವಿದ್ಯಾ ಮೂರ್ತಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಪಾತ್ರಗಳಿಗೆ ಹೊಸ ನಟರಿಗಾಗಿ ಹುಡುಕಾಟ ಕೂಡ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಸೀಕ್ವೆಲ್'ನ ಕಥೆಯನ್ನೂ ಆಕಾಶ್ ಅವರೇ ಬರೆದಿದ್ದು, ಚಿತ್ರವನ್ನು ರೇಖಾ ಕೆಎನ್ ಹಾಗೂ ಅನೂಪ್ ಗೌಡ ಅವರು ನಿರ್ಮಿಸುತ್ತಿದ್ದಾರೆ.
ಅಂಜಂದ್ರಿ ಸಿನಿ ಕಂಬೈನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಎಂಜಿ ಛಾಯಾಗ್ರಹಣವಿದೆ. ಈ ನಡುವೆ ಚಿತ್ರದ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ರೀಮೇಕ್ 2022ಕ್ಕೆ ನಡೆಯಲಿದ್ದು, ಶೀಘ್ರದಲ್ಲೇ ಈ ಕುರಿತು ಆಯಾ ಭಾಷೆ ಸಿನಿಮಾ ನಿರ್ಮಾಣ ಸಂಸ್ಥೆಗಳು ಘೋಷಣೆ ಮಾಡಲಿವೆ.
ಈ ನಡುವೆ ನಿರ್ದೇಶಕ ಆಕಾಶ್ ಶ್ರೀವಾತ್ಸ ಅವರು ಚಿತ್ರವನ್ನು ಬಾಲಿವುಡ್ ನಲ್ಲೂ ನಿರ್ಮಿಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.