ಗಾಳಿಪಟ 2 ಚಿತ್ರದ ಪೋಸ್ಟರ್
ಗಾಳಿಪಟ 2 ಚಿತ್ರದ ಪೋಸ್ಟರ್

ಯೋಗರಾಜ್ ಭಟ್ಟರ ಗಾಳಿಪಟ 2 ಗೆ ವಿದೇಶಗಳಲ್ಲಿ ಭರ್ಜರಿ ರೆಸ್ಪಾನ್ಸ್

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರ ಆಗಸ್ಟ್ 12 ರಂದು ಬಿಡುಗಡೆಯಾಯಿತು. ಭಾರತದಿಂದ ಹೊರಗೆ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ಸಿನಿಮಾ 250 ಪ್ರದರ್ಶನಗಳೊಂದಿಗೆ ಉತ್ತಮ ಓಪನಿಂಗ್ ಪಡೆದಿದೆ.
Published on

ನಟ ಗಣೇಶ್ ಅವರಿಗೆ ಮತ್ತೆ ಸುರ್ಣ ದಿನಗಳು ಬಂದಿವೆಯಂತೆ. ಈಗಾಗಲೇ ಸಾಕಷ್ಟು ಅಭಿಮಾನಿಗಳ ಬಳಗವನ್ನು ಗಳಿಸಿರುವ ನಟ, ತಮ್ಮ ಇತ್ತೀಚಿನ ಗಾಳಿಪಟ 2 ಚಿತ್ರದ ಬಿಡುಗಡೆಯೊಂದಿಗೆ ಮತ್ತಷ್ಟು ವಿಸ್ತರಿಸಿದೆ. ಸದ್ಯ ರಾಜ್ಯದ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ವಿದೇಶದಲ್ಲಿ ನೆಲೆಸಿರುವ ಕನ್ನಡ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರ ಆಗಸ್ಟ್ 12 ರಂದು ಬಿಡುಗಡೆಯಾಯಿತು. ಭಾರತದಿಂದ ಹೊರಗೆ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ಸಿನಿಮಾ 250 ಪ್ರದರ್ಶನಗಳೊಂದಿಗೆ ಉತ್ತಮ ಓಪನಿಂಗ್ ಪಡೆದಿದೆ.

ಎರಡನೇ ವಾರದಲ್ಲಿ ಇನ್ನಷ್ಟು ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಬಿಡುಗಡೆಯಾದಾಗಿನಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ 15 ಕೋಟಿ ರೂಪಾಯಿ ಹಣ ಗಳಿಸಿದೆ. ಇದರೊಂದಿಗೆ ಮುಂಬೈ ಮತ್ತು ಹೈದರಾಬಾದ್‌ನಂತಹ ಭಾರತದ ಇತರ ನಗರಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ಈ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಟ ಗಣೇಶ್, 'ಈಗ ಎಲ್ಲೆಡೆ ಪ್ಯಾನ್ ಇಂಡಿಯಾ ಸಿನಿಮಾಗಳಿವೆ. ನಮ್ಮದು ಅಪ್ಪಟ ಕನ್ನಡ ಸಿನಿಮಾ. ಆರಂಭದಲ್ಲಿ, ಇತರ ನಗರಗಳಲ್ಲಿ ಕಡಿಮೆ ನಿರೀಕ್ಷೆಯನ್ನಷ್ಟೇ ನಾವು ಹೊಂದಿದ್ದೆವು. ಮೊದಲ ವಾರದಲ್ಲಿ, ಸುಮಾರು 70- 80 ಪ್ರತಿಶತದಷ್ಟು ಸೀಟುಗಳನ್ನು ಆಕ್ರಮಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ ಮತ್ತು ಈಗ ಅದು ಸಂಪೂರ್ಣವಾಗಿ ಭರ್ತಿಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಾಗರೋತ್ತರ ಮಾರುಕಟ್ಟೆಯಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಇನ್ನಷ್ಟು ಖುಷಿ ತಂದಿದೆ' ಎಂದಿದ್ದಾರೆ.

'ನಮ್ಮ ಚಿತ್ರಕ್ಕೆ ಈ ರೀತಿಯ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಮೊದಲ ವಾರದಲ್ಲಿಯೇ 250 ಶೋಗಳು ಬಂದಿರುವುದು ದೊಡ್ಡ ಗೆಲುವು. ಇದರ ಶ್ರೇಯ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಸಲ್ಲಬೇಕು' ಎಂದು ತಿಳಿಸಿದ್ದಾರೆ.

ದಿಗಂತ್ ಮಂಚಾಲೆ, ಪವನ್ ಕುಮಾರ್, ಅನಂತ್ ನಾಗ್, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಗಣೇಶ್-ಯೋಗರಾಜ್ ಭಟ್ ಕಾಂಬಿನೇಶನ್‌ನಲ್ಲಿ ಮೂಡಿಬಂದ 2008 ರ ಗಾಳಿಪಟ ಚಿತ್ರದ ಮುಂದುವರಿದ ಭಾಗವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com