ತಮ್ಮ 2ನೇ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಕ್ರಮ್ ರವಿಚಂದ್ರನ್

ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ವಿಕ್ರಮ್ ರವಿಚಂದ್ರನ್ ಅವರು ತಮ್ಮ ಎರಡನೇ ಚಿತ್ರಕ್ಕೆ ಅಂತಿಮವಾಗಿ ಸಹಿ ಹಾಕಿದ್ದಾರೆ. ನಟ-ನಿರ್ದೇಶಕ ಕಾರ್ತಿಕ್ ರಾಜನ್ ಅವರ ಚೊಚ್ಚಲ ನಿರ್ದೇಶನದಲ್ಲಿ ಗ್ಯಾಂಗ್‌ಸ್ಟರ್‌ ವಿಚಾರವನ್ನು ಆಯ್ದುಕೊಂಡಿದ್ದು, ಚಿತ್ರಕ್ಕೆ ಭಾನುವಾರ ಮುಹೂರ್ತ ನೆರವೇರಿದೆ.
ಮನೋರಂಜನ್ ರವಿಚಂದ್ರನ್-ಕಾರ್ತಿಕ್ ರಾಜನ್- ವಿಕ್ರಮ್ ರವಿಚಂದ್ರನ್
ಮನೋರಂಜನ್ ರವಿಚಂದ್ರನ್-ಕಾರ್ತಿಕ್ ರಾಜನ್- ವಿಕ್ರಮ್ ರವಿಚಂದ್ರನ್

ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ವಿಕ್ರಮ್ ರವಿಚಂದ್ರನ್ ಅವರು ತಮ್ಮ ಎರಡನೇ ಚಿತ್ರಕ್ಕೆ ಅಂತಿಮವಾಗಿ ಸಹಿ ಹಾಕಿದ್ದಾರೆ. ನಟ-ನಿರ್ದೇಶಕ ಕಾರ್ತಿಕ್ ರಾಜನ್ ಅವರ ಚೊಚ್ಚಲ ನಿರ್ದೇಶನದಲ್ಲಿ ಗ್ಯಾಂಗ್‌ಸ್ಟರ್‌ ವಿಚಾರವನ್ನು ಆಯ್ದುಕೊಂಡಿದ್ದು, ಚಿತ್ರಕ್ಕೆ ಭಾನುವಾರ ಮುಹೂರ್ತ ನೆರವೇರಿದೆ.

ಈ ಕುರಿತು ಸಿನಿಮಾ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿರುವ ವಿಕ್ರಮ್, ಚಿತ್ರಕ್ಕೆ ಚಾಲನೆ ನೀಡಿದ ನನ್ನ ಸಹೋದರ ಮನೋರಂಜನ್ ಅವರ ಜನ್ಮದಿನದ ಸಂದರ್ಭದಲ್ಲಿಯೇ ಚಿತ್ರದ ಮುಹೂರ್ತವನ್ನು ನೆರವೇರಿಸಲು ಚಿತ್ರತಂಡ ಬಯಸಿತ್ತು. ಅದರಂತೆ ಭಾನುವಾರ ಮುಹೂರ್ತ ನೆರವೇರಿತು. ಶೀರ್ಷಿಕೆಯೊಂದಿಗೆ ಟೀಸರ್ ಅನ್ನು ಜನವರಿ 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಮುಗಿಲ್‌ಪೇಟೆ ಸಿನಿಮಾದ ನಿರ್ಮಾಪಕರು (ರಕ್ಷಾ ಮತ್ತು ವಿಜಯ್ ಕುಮಾರ್) ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ, ವಿಕ್ರಮ್ ರವಿಚಂದ್ರನ್ ಅವರ ಬೆಂಬಲ ಸಹ ಚಿತ್ರಕ್ಕಿದೆ.

<strong>ಚಿತ್ರಕ್ಕೆ ಕ್ಲಾಪ್ಸ್ ಮಾಡಿದ ಮನೋರಂಜನ್ ರವಿಚಂದ್ರನ್</strong>
ಚಿತ್ರಕ್ಕೆ ಕ್ಲಾಪ್ಸ್ ಮಾಡಿದ ಮನೋರಂಜನ್ ರವಿಚಂದ್ರನ್

'ನಾನು ಅಂತಿಮವಾಗಿ ನನ್ನ ಇಷ್ಟದ ಸ್ಕ್ರಿಪ್ಟ್‌ನ ಭಾಗವಾಗಿದ್ದೇನೆ, ಅದು ಕಚ್ಚಾ ಆಗಿರುತ್ತದೆ. ಈ ಚಿತ್ರವು ನಮ್ಮ ಸಂಸ್ಥೆಯಾದ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಹೊಸ ವರ್ಷದ ಮುನ್ನಾದಿನದಂದು ಶಿವಮೊಗ್ಗದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಯೋಜಿಸಲಾಗಿದೆ. ಈ ಸಿನಿಮಾವು 2023ರ ವರ್ಷದ ಆರಂಭಕ್ಕೆ ಉತ್ತಮವಾಗಿರುತ್ತದೆ. ನಾನು ಚಿತ್ರದ ಫಲಿತಾಂಶದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಆದರೆ, 2023 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಲು ಖಂಡಿತವಾಗಿಯೂ ಆಶಿಸುತ್ತೇವೆ ಎಂದಿದ್ದಾರೆ.

ಈ ಹಿಂದೆ ತಮಿಳಿನ ನಿರ್ದೇಶಕ ವಿಜಯ್ ಚಂದರ್ ಅವರೊಂದಿಗೆ ಕೆಲಸ ಮಾಡಿದ ಕಾರ್ತಿಕ್ ರಾಜನ್, ನಾಗಾರ್ಜುನ ಮತ್ತು ಸಮಂತಾ ಅಭಿನಯದ ತೆಲುಗು ಚಿತ್ರ ರಾಜು ಗಾರಿ ಗಾದಿ 2 ಸಿನಿಮಾದ ಕಥೆ ಬರೆದಿದ್ದಾರೆ. ತಮಿಳಿನ ವೆಬ್ ಸೀರೀಸ್ ನಿಶಾಗೆ ಕೆಲಸ ಮಾಡಿದ ಕಾರ್ತಿಕ್, ಕನ್ನಡದ ಹೆಡ್ ಬುಷ್ ಸಿನಿಮಾದಲ್ಲಿಯೂ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಈ ಎಲ್ಲಾ ಅನುಭವಗಳನ್ನು ಸೇರಿಸಿ ಕನ್ನಡದಲ್ಲಿ ಗ್ಯಾಂಗ್‌ಸ್ಟರ್ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ ಕಾರ್ತಿಕ್.

ನಿರ್ದೇಶಕರ ಪ್ರಕಾರ ಈ ಪಾತ್ರಕ್ಕೆ ವಿಕ್ರಮ್ ಸೂಕ್ತ. ಶಿವಮೊಗ್ಗದಲ್ಲಿ ಆರಂಭವಾಗಲಿರುವ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಮತ್ತೊಂದು ಸ್ಥಳವನ್ನು ಚಿತ್ರತಂಡ ಅಂತಿಮಗೊಳಿಸುತ್ತಿದೆ.

ಇದೇ ಮೊದಲ ಬಾರಿಗೆ ಸಂಗೀತ ಸಂಯೋಜನೆಗೆ ಇಳಿದಿರುವ ಯುವರಾಜ್, ಸಂಕಲನಕಾರ ಪಿಕೆ ಸೇರಿದಂತೆ ತಂಡವು ಈ ಸಿನಿಮಾಗಾಗಿ ಹೊಸ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡಿದೆ. ಉಳಿದ ತಾರಾಗಣ ಮತ್ತು ಸಿಬ್ಬಂದಿಯನ್ನು ನಿರ್ಮಾಪಕರು ಅಂತಿಮಗೊಳಿಸಿ, ಶೀಘ್ರದಲ್ಲೇ ತಿಳಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com