ರಂಗಭೂಮಿ ದಂತಕಥೆ ಗುಬ್ಬಿ ವೀರಣ್ಣ ಮಗಳು ಹಿರಿಯ ಕಲಾವಿದೆ ಹೇಮಲತಾ ನಿಧನ

ಕನ್ನಡ ರಂಗಭೂಮಿಯ ದಂತಕಥೆ ಗುಬ್ಬಿ ವೀರಣ್ಣ ಪುತ್ರಿ ಜಿ.ವಿ ಹೇಮಲತಾ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಹಿರಿಯ ಕಲಾವಿದೆ ಹೇಮಲತಾ(ಸುಷ್ಮಾವೀರ್ ಅವರ ಫೇಸ್ ಬುಕ್ ಖಾತೆಯಿಂದ ಸಂಗ್ರಹ)
ಹಿರಿಯ ಕಲಾವಿದೆ ಹೇಮಲತಾ(ಸುಷ್ಮಾವೀರ್ ಅವರ ಫೇಸ್ ಬುಕ್ ಖಾತೆಯಿಂದ ಸಂಗ್ರಹ)
Updated on

ಬೆಂಗಳೂರು: ಕನ್ನಡ ರಂಗಭೂಮಿಯ ದಂತಕಥೆ ಗುಬ್ಬಿ ವೀರಣ್ಣ (Theatre Artist Gubbi Veeranna) ಪುತ್ರಿ ಜಿ.ವಿ ಹೇಮಲತಾ (Hemalatha) ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸೋಮೇಶ್ವರ ಬಡವಾಣೆಯಲ್ಲಿ ಹೇಮಲತಾ ವಾಸಿಸುತ್ತಿದ್ದರು. ತನ್ನ ನಿವಾಸದಲ್ಲೇ ಹೇಮಲತಾ ಇಂದು ಬೆಳಗ್ಗೆ ಇಹಲೋಕ ತ್ಯಾಜಿಸಿದ್ದಾರೆ. ಹಿರಿಯ ರಂಗಭೂಮಿ ಕಲಾವಿದೆ ಜಯಶ್ರೀ ಅವರ ಮಗಳು ಸುಷ್ಮಾವೀರ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ತಿಳಿಸಿದ್ದಾರೆ. 

ಜಿವಿ ಹೇಮಲತಾ ಅವರಿಗೆ ಎರಡು ದಿನಗಳ ಹಿಂದೆಯೇ ಲಘು ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಹೇಮಲತಾ ಕೊನೆಯುಸಿರೆಳೆದಿದ್ದಾರೆ. ಮೂಲತಃ ಭರತನಾಟ್ಯ ಕಲಾವಿದೆಯಾದ ಹೇಮಲತಾ ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಜೊತೆ ಎಮ್ಮೆ ತಮ್ಮಣ್ಣ ಸಿನಿಮಾದಲ್ಲಿ ಹೇಮಲತಾ ನಟಿಸಿದ್ದರು. ನಟ ಕಲ್ಯಾಣ್ ಕುಮಾರ್ ಜೊತೆ ಕಲಾವತಿ ಸಿನಿಮಾದಲ್ಲೂ ನಾಯಕಿಯಾಗಿ ಮಿಂಚಿದ್ದರು. ನಟ ಉದಯ್ ಸಿನಿಮಾದಲ್ಲಿಯೂ ನಟಿಸಿದ್ದರು. 

ಇವರಿಗೆ ಮೂವರು ಮಕ್ಕಳಿದ್ದು ಎಲ್ಲರೂ ಅಮೆರಿಕಾದಲ್ಲಿ ವಾಸವಿದ್ದಾರೆ. ಹೇಮಲತಾ ತನ್ನ ಸಹೋದರನ ಮಗಳು ಗುಬ್ಬಿ ವೀರಣ್ಣನವರ ಪುತ್ರ ಗುರುಸ್ವಾಮಿ ಅವರ ಪುತ್ರಿ ಜಯಭಾರತಿ ಅವರ ಮನೆಯಲ್ಲಿ ವಾಸವಾಗಿದ್ದರು.

ಹೇಮಲತಾ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಮತ್ತು ರಂಗಭೂಮಿ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ, ಹಿರಿಯ ನಟಿ, ರಂಗಭೂಮಿ ಕಲಾವಿದೆ ಜಯಶ್ರೀ ಸೇರಿದಂತೆ ಅನೇಕರ ಸಂತಾಪ ಸೂಚಿಸಿದ್ದಾರೆ. ಹೇಮಲತಾ ಮೃತದೇಹವನ್ನು ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಆಸ್ಪತ್ರೆಗೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com