ವಿನೋದ್ ಪ್ರಭಾಕರ್ ನಟನೆಯ 'ಲಂಕಾಸುರ' ಸೆಪ್ಟಂಬರ್ ನಲ್ಲಿ ರಿಲೀಸ್!

ವಿನೋದ್‌ ಪ್ರಭಾಕರ್‌ ತಮ್ಮ ಪತ್ನಿ ನಿಶಾ ವಿನೋದ್‌ ಪ್ರಭಾಕರ್‌ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.
ಲಂಕಾಸುರ ಸಿನಿಮಾ ಸ್ಟಿಲ್
ಲಂಕಾಸುರ ಸಿನಿಮಾ ಸ್ಟಿಲ್

ನಟ ವಿನೋದ್ ಪ್ರಭಾಕರ್ ಅವರ ಮೊದಲ ನಿರ್ಮಾಣ  ಮೊದಲ ಸಿನಿಮಾ 'ಲಂಕಾಸುರ' ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ವಿನೋದ್‌ ಪ್ರಭಾಕರ್‌ ತಮ್ಮ ಪತ್ನಿ ನಿಶಾ ವಿನೋದ್‌ ಪ್ರಭಾಕರ್‌ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಟೈಗರ್‌ ಟಾಕೀಸ್‌' ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ಪ್ರಮೋದ್‌ ಕುಮಾರ್‌ ನಿರ್ದೇಶನದ, ವಿನೋದ್‌ ಪ್ರಭಾಕರ್‌ ನಟನೆಯ ‘ಲಂಕಾಸುರ’ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್‌ ಮತ್ತು ಸಂಸ್ಥೆಯ ಲೋಗೋವನ್ನು ಚಿತ್ರತಂಡ ಲೋಕಾರ್ಪಣೆಗೊಳಿಸಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ‘ಲಂಕಾಸುರ’ ಟೀಸರ್ ಲಾಂಚ್ ಮಾಡಿದರು, ಇನ್ನು ಡೈನಾಮಿಕ್ ಪ್ರಿನ್ಸ್ ದೇವರಾಜ್, ಅಭಿಷೇಕ್ ಅಂಬರೀಶ್ ಸೇರಿ ಬಹಳಷ್ಟು ಕಲಾವಿದರು ‘ಲಂಕಾಸುರ’ನ ಟೀಸರ್​ ಇವೆಂಟ್​ನಲ್ಲಿ ಭಾಗವಹಿಸಿ ಆಲ್ ದಿ ಬೆಸ್ಟ್ ಹೇಳಿದರು. ಸದ್ಯ ಟೀಸರ್​ನೊಂದಿಗೆ ‘ಲಂಕಾಸುರ’ ಅಬ್ಬರ ಶುರು ಮಾಡಿದ್ದಾನೆ. ಇನ್ನುಳಿದ ಎಲ್ಲ ಕೆಲಸ ಮುಗಿಸ್ಕೊಂಡು ಶೀಘ್ರದಲ್ಲೇ ಥಿಯೇಟರ್​ಗೆ ಬರೋಕೆ ಬರಲಿದ್ದಾನಂತೆ ಲಂಕಾಸುರ.

ವಿನೋದ್ ಪತ್ನಿ ನಿಶಾ ಇದರ ನಿರ್ಮಾಪಕಿಯಾಗಿದ್ದು, ಪ್ರಮೋದ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ವಿನೋದ್ ಜೊತೆಗೆ ಲೂಸ್ ಮಾದ ಯೋಗಿ ಕೂಡ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ದೇವರಾಜ್ ಡಾನ್ ಆಗಿ ಕಾಣಿಸಿಕೊಂಡರೆ, ರವಿಶಂಕರ್ ಅವರು ಪೊಲೀಸ್ ಆಫೀಸರ್ ಗೆಟಪ್‌ನಲ್ಲಿದ್ದಾರೆ. ಉಳಿದಂತೆ, ನಾಯಕಿಯರಾಗಿ ಪಾರ್ವತಿ ಅರುಣ್ ಮತ್ತು ಆದ್ಯಾ ಪ್ರಿಯಾ ನಟಿಸಿದ್ದಾರೆ.

ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಲಂಕಾಸುರ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ, ಹಿಂದಿ ಡಬ್ಬಿಂಗ್ ಹಕ್ಕುಗಳಿಗಾಗಿ ನಮ್ಮನ್ನು ಅನೇಕರು ಸಂಪರ್ಕಿಸಿದ್ದಾರೆ, ಆದರೆ ಇನ್ನೂ ಅಂತಿಮಗೊಂಡಿಲ್ಲ ಎಂದು ವಿನೋದ್ ತಿಳಿಸಿದ್ದಾರೆ. ಸೆನ್ಸಾರ್ ಸರ್ಟಿಫಿಕೇಟ್ ಮುಗಿದ ನಂತರ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು. ಸೆಪ್ಟಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com