ಹಾಸ್ಯ ಸಿನಿಮಾಗಳಿಗೆ ಸಂಗೀತ ನೀಡುವುದು ಕಷ್ಟ: ವಾಸುಕಿ ವೈಭವ್

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾ ನಂತರ ರಿಷಬ್ ಶೆಟ್ಟಿ ಮತ್ತು ವಾಸುಕಿ ವೈಭವ್ ಹರಿಕತೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.
ವಾಸುಕಿ ವೈಭವ್
ವಾಸುಕಿ ವೈಭವ್

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾ ನಂತರ ರಿಷಬ್ ಶೆಟ್ಟಿ ಮತ್ತು ವಾಸುಕಿ ವೈಭವ್ ಹರಿಕತೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್. ಎನ್. ನಿರ್ಮಿಸಿ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನ ಮಾಡಿರುವ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾ ಸಂದರ್ಭದಿಂದಲೂ ನಾನು  ರಿಷಬ್ ಶೆಟ್ಟಿ ಅವರನ್ನು ಬಲ್ಲೆ, ಅವರದ್ದು ಬಹುಮುಖ ವ್ಯಕ್ತಿತ್ವ, ಅವರ ನಿರ್ದೇಶನ ಮತ್ತು ನಟನಾ ಕೌಶಲ್ಯ ಎಲ್ಲರಲ್ಲು ಕುತೂಹಲ ಮೂಡಿಸುತ್ತದೆ. ರಿಷಬ್ ಶೆಟ್ಟಿ ಅವರ ಪ್ರತಿಭೆ ಸಿನಿಮಾದಲ್ಲಿ ಪ್ರತಿಫಲಿಸುತ್ತದೆ.  ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಜೂನ್ 23 ರಂದು ಬಿಡುಗಡೆಯಾಗಲಿದೆ.

ಭಾವನಾತ್ಮಕ ಅಥವಾ ಆಕ್ಷನ್ ಚಿತ್ರಗಳಿಗಿಂತ ಭಿನ್ನವಾಗಿ, ಹಾಸ್ಯ ಕಥಾವಸ್ತುಗಳಿಗೆ ಸಂಗೀತವನ್ನು ತುಂಬಲು ಸಾಧ್ಯವಿಲ್ಲ. ಹೀಗಾಗಿ HKGK ನನಗೆ ಸವಾಲಾಗಿತ್ತು ಎಂದು ವಾಸುಕಿ ವೈಭವ್ ಅಭಿಪ್ರಾಯ ಪಟ್ಟಿದ್ದಾರೆ.

ನಿರ್ದೇಶಕರ ಇನ್‌ಪುಟ್‌ಗಳು ಕಥೆಗೆ ನ್ಯಾಯ ಒದಗಿಸಲು ನನಗೆ ಸಹಾಯ ಮಾಡಿತು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಕೂಡ ಸವಾಲಾಗಿತ್ತು. ನಾನು ದೃಶ್ಯಗಳಿಗೆ ಅನುಗುಣವಾಗಿ ಹಾಡುಗಳನ್ನು ರೂಪಿಸಬೇಕಾಗಿತ್ತು ಅದು ವಿಭಿನ್ನ ಅನುಭವವಾಗಿದೆ ಎಂದು ಹೇಳಿದ್ದಾರೆ.

ವಾಸುಕಿ ಅವರು HKGK ಯ ತಮ್ಮ ನೆಚ್ಚಿನ ಹಾಡಾದ ಕ್ಲೈಮ್ಯಾಕ್ಸ್ ಟ್ರ್ಯಾಕ್ ಹಂಚಿಕೊಂಡಿದ್ದಾರೆ. ತಮಿಳಿನ ಗಾಯಕ ಪ್ರದೀಪ್ ಕುಮಾರ್ ಹಾಡಿರುವ ಹಾಡು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ" ಎಂದು ಅವರು ಹೇಳುತ್ತಾರೆ. ಒಂದಲ್ಲಾ ಎರಡಲ್ಲಾ, ಚೂರಿ ಕಟ್ಟೆ, ಫ್ರೆಂಚ್ ಬಿರಿಯಾನಿ ಮತ್ತು ಬಡವ ರಾಸ್ಕಲ್ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ.

ಇದುವರೆಗೂ ಸಿನಿಮಾ ಕನಸು ಹೊತ್ತು ಗಾಂಧಿನಗರದಲ್ಲಿ ಸುಳಿದಾಡುವವರ ಕಥೆಗಳು ಸಾಕಷ್ಟು ಕಾಣಿಸಿಕೊಂಡಿವೆ. ಆದರೆ ‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿರೋದು ಡಿಫರೆಂಟಾದ ಕಥೆ ಎಂಬುದನ್ನು ನಿರ್ದೇಶಕದ್ವಯರು ನಿಖರವಾಗಿಯೇ ನಿರೂಪಿಸಿದ್ದಾರೆ. ಅದು ಈ ಟ್ರೈಲರ್‌ನ ನಿಜವಾದ ಪ್ಲಸ್ ಪಾಯಿಂಟ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com