ನಿರ್ಮಾಪಕ ವಿಜಯ್ ಕಿರಗಂದೂರು, ಮಾನುಷಿ ಚಿಲ್ಲರ್
ಸಿನಿಮಾ ಸುದ್ದಿ
ಬೆಂಗಳೂರು: ಮಾನುಷಿ ಚಿಲ್ಲರ್, ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ: ಮುಂದಿನ ಚಿತ್ರಕ್ಕೆ ನಾಯಕಿ?
ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ಅಲೆಯಲ್ಲಿ ಬೀಗುತ್ತಿರುವ ಸ್ಯಾಂಡಲ್ ವುಡ್ ನಿರ್ಮಾಪಕ ವಿಜಯ್ ಕಿರಗಂದೂರು ಇತ್ತೀಚಿಗೆ 2017 ರ ವಿಶ್ವ ಸುಂದರಿ ವಿಜೇತೆ, ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಅವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ಅಲೆಯಲ್ಲಿ ಬೀಗುತ್ತಿರುವ ಸ್ಯಾಂಡಲ್ ವುಡ್ ನಿರ್ಮಾಪಕ ವಿಜಯ್ ಕಿರಗಂದೂರು ಇತ್ತೀಚಿಗೆ 2017 ರ ವಿಶ್ವ ಸುಂದರಿ ವಿಜೇತೆ, ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಅವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರಿನ ಹೊಂಬಾಳೆ ಫಿಲ್ಮಂ ಕಚೇರಿಯಲ್ಲಿ ಇಬ್ಬರ ಭೇಟಿಯಾಗಿದ್ದು, ಹೊಂಬಾಳೆ ಫಿಲ್ಮಂ ಟ್ವೀಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು, ಮಾನುಷಿ ಜೊತೆಗೆ ವಿಜಯ್ ಕಿರಗಂದೂರು ಯಾವ ಸಿನಿಮಾ ಮಾಡಲಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ಸಿನಿಮಾ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿರುವ ಮಾನುಷಿ ಚಿಲ್ಲರ್, ಹೊಂಬಾಳೆ ಫಿಲಂಸ್ ನಲ್ಲಿ ಬರುತ್ತಿರುವ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರ ಟೈಸನ್ ಸಿನಿಮಾದಲ್ಲಿ ನಟಿಸಲಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಈ ಅನುಮಾನಕ್ಕೆ ಸದ್ಯದಲ್ಲೇ ಉತ್ತರ ಸಿಗುವ ಸಾಧ್ಯತೆಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ