ಸ್ಯಾಂಡಲ್ ವುಡ್ನ ಅಭಿನಯ ಚಕ್ರವರ್ತಿ ಹಾಗೂ ಬಹುಭಾಷಾ ನಟ ಸುದೀಪ್ ಸದ್ಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಯ ಸನಿಹದಲ್ಲಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಸುದೀಪ್ ಗೆ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿಯಿದೆ. ಅಲ್ಲದೇ ಆವರು ಐಪಿಎಲ್ ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಪುಟ್ಟ ಮಕ್ಕಳಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರವರೆಗೂ ಸುದೀಪ್‌ಗೆ ಫ್ಯಾನ್ಸ್ ಬಳಗವಿದೆ. ಒಬ್ಬರಲ್ಲಾ ಇನ್ನೊಬ್ಬರು ಆಗಾಗ್ಗೆ ತಮ್ಮ ನೆಚ್ಚಿನ ಗೆಳೆಯನಿಗೆ ಸರ್‌ಪ್ರೈಸ್ ಗಿಫ್ಟ್ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್, ರಾಜಸ್ಥಾನ ರಾಯಲ್ಸ್ ತಂಡವನ್ನು 2022ರ ಐಪಿಎಲ್ ನಲ್ಲಿ ಏಕಾಂಗಿಯಾಗಿ ಫೈನಲ್ ಹಂತಕ್ಕೆ ತಂದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಉಡುಗೊರೆಯೊಂದನ್ನು ಸುದೀಪ್‌ಗೆ ನೀಡಿದ್ದರು. ಕಿಚ್ಚ ಸುದೀಪ್‌ಗೆ ತಮ್ಮ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಇದೀಗ ಇಂಡಿಯನ್ ಕ್ರಿಕೆಟ್ ದಿಗ್ಗಜರೊಬ್ಬರು ಸುದೀಪ್‌ಗೆ ಬಿಗ್ ಸರ್‌ಪ್ರೈಸ್ ಒಂದನ್ನು ನೀಡಿದ್ದಾರೆ. ಇದನ್ನು ಕಂಡ ಕಿಚ್ಚನ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್, ಕ್ರಿಕೆಟ್ ಲೋಕದ ಲೆಜೆಂಡ್ ಕಪಿಲ್ ದೇವ್ ಈ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ಸುದೀಪ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್ ಸುದೀಪ್‌ಗೆ ವಿಶೇಷ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬ್ಯಾಟ್ ಬಲು ವಿಶೇಷತೆಯಿಂದ ಕೂಡಿದೆ. ಇದನ್ನು ಕಂಡು ಕಿಚ್ಚ ಫುಲ್ ಖುಷ್ ಆಗಿದ್ದಾರೆ. "ವಾವ್.. ಎಂಥ ಅದ್ಭುತ ಭಾನುವಾರ. ಧನ್ಯವಾದಗಳು ಕಪಿಲ್ ದೇವ್ ಸರ್. ಇದು ನಿಜವೇ! ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಇದು ಕ್ಲಾಸಿಕ್ ಪೀಸ್" ಎಂದು ಬ್ಯಾಟ್‌ನ ಫೋಟೋ ಜೊತೆ ಸುದೀಪ್ ಬರೆದುಕೊಂಡಿದ್ದಾರೆ.
Advertisement