ಉಪೇಂದ್ರ ನಿರ್ದೇಶನದ 'UI' ಸಿನಿಮಾ ಸೆಟ್ ನಲ್ಲಿ ಬಹುಭಾಷಾ ನಟ ಮುರುಳಿ ಶರ್ಮಾ

ತರ್ಲೆ ನನ್ಮಗ, ಶ್! ಓಂ, ಎ, ಉಪೇಂದ್ರ ಹಾಗೂ ಉಪ್ಪಿ ಸಿನಿಮಾಗಳ ಡೈರೆಕ್ಟರ್ ಉಪೇಂದ್ರ ತಮ್ಮ ಮುಂದಿನ ನಿರ್ದೇಶನ ಯುಐ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.  
ಮುರುಳಿ ಶರ್ಮಾ
ಮುರುಳಿ ಶರ್ಮಾ
Updated on

ತರ್ಲೆ ನನ್ಮಗ, ಶ್! ಓಂ, ಎ, ಉಪೇಂದ್ರ ಹಾಗೂ ಉಪ್ಪಿ ಸಿನಿಮಾಗಳ ಡೈರೆಕ್ಟರ್ ಉಪೇಂದ್ರ ತಮ್ಮ ಮುಂದಿನ ನಿರ್ದೇಶನ ಯುಐ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.  

ಯುಐ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಪೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನಟ ಉಪೇಂದ್ರ ತಮ್ಮ ಹೊಸ ಸಿನಿಮಾದ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಶಿನವರಾಜ್ ಕುಮಾರ್ ಮತ್ತು ಸುದೀಪ್, ಡಾಲಿ ಧನಂಜಯ ಹಾಗೂ ದುನಿಯಾ ವಿಜಯ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ್ದ ಉಪೇಂದ್ರ, ಯುಐ ಸಿನಿಮಾ ಕಲ್ಪನೆ 15 ವರ್ಷಗಳ ಹಿಂದಿನದ್ದು, ಆದರೆ ಇಂದಿಗೂ ಅದು ಪ್ರಸ್ತುಕವಾಗಿದೆ, ಸಿನಿಮಾ ರಂಗದಲ್ಲಿ 3 ದಶಕಗಳನ್ನು ಪೂರೈಸಿರುವ ಉಪೇಂದ್ರ ಅವರ ನಿರ್ದೇಶನದ 11ನೇ ಸಿನಿಮಾ ಇದಾಗಿದೆ. 7 ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ.

ಚಿತ್ರದಲ್ಲಿ ಉಪೇಂದ್ರ  ನಾಯಕನಾಗಿ ನಟಿಸುತ್ತಿದ್ದು, ಮುರಳಿ ಶರ್ಮಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಪ್ರಸ್ತುತ ಚಿತ್ರೀಕರಣದಲ್ಲಿ  ಮುರುಳಿ ಶರ್ಮಾ ಭಾಗವಹಿಸುತ್ತಿದ್ದಾರೆ. ಯುಐ ಸಿನಿಮಾವನ್ನು ಜಿ ಮನೋಹರನ್ (ಲಹರಿ ಫಿಲ್ಮ್ಸ್) ಮತ್ತು ಕೆಪಿ ಶ್ರೀಕಾಂತ್ (ವೀನಸ್ ಎಂಟರ್ಟೈನರ್ಸ್) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಸದ್ಯಕ್ಕೆ, ಕಲಾ ನಿರ್ದೇಶಕ ಶಿವಕುಮಾರ್ (ವಿಕ್ರಾಂತ್ ರೋಣ, ಕೆಜಿಎಫ್ ಮತ್ತು ಕಬ್ಜಾ) ಅವರನ್ನು  ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ, ಉಪೇಂದ್ರ ಕಬ್ಜಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com