ನಟ ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾಗೆ ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕ

ಡಾಲಿ ಧನಂಜಯ್ ನಿರ್ಮಾಣದ, ಉಮೇಶ್‌ ಕೆ.ಕೃಪ ಇದೇ ಮೊಲದ ಬಾರಿಗೆ ನಿರ್ದೇಶಿಸುತ್ತಿರುವ ‘ಟಗರು ಪಲ್ಯ’ ಸಿನಿಮಾದಲ್ಲಿ ನಾಯಕನಾಗಿ ‘ಇಕ್ಕಟ್‌’ ಸಿನಿಮಾ ಖ್ಯಾತಿಯ ನಾಗಭೂಷಣ್ ಕಾಣಿಸಿಕೊಳ್ಳಲಿದ್ದಾರೆ.
ನಟ ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾಗೆ ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕ
Updated on

ತಿಂಗಳ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ‘ಹೆಡ್‌ಬುಷ್‌’ ಸಿನಿಮಾದ ಪ್ರಿರಿಲೀಸ್‌ ಕಾರ್ಯಕ್ರಮದಲ್ಲಿ ನಟ ‘ಡಾಲಿ’ ಧನಂಜಯ ಅವರು ತಮ್ಮ ಪ್ರೊಡಕ್ಷನ್‌ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಹೊಸ ಚಿತ್ರವನ್ನು ಘೋಷಿಸಿದ್ದರು. ಉಮೇಶ್‌ ಕೆ.ಕೃಪ ಇದೇ ಮೊಲದ ಬಾರಿಗೆ ನಿರ್ದೇಶಿಸುತ್ತಿರುವ ‘ಟಗರು ಪಲ್ಯ’ ಸಿನಿಮಾದಲ್ಲಿ ನಾಯಕನಾಗಿ ‘ಇಕ್ಕಟ್‌’ ಸಿನಿಮಾ ಖ್ಯಾತಿಯ ನಾಗಭೂಷಣ್ ಕಾಣಿಸಿಕೊಳ್ಳಲಿದ್ದಾರೆ.

ಪ್ರತಿ ವರ್ಷ ಡಾಲಿ ಪಿಕ್ಚರ್ಸ್‌ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ, ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಧನಂಜಯ ಅವರು ತಮ್ಮ ಜನ್ಮದಿನದಂದು ಘೋಷಿಸಿದ್ದರು. ಇದೀಗ ನಾಗಭೂಷಣ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು, ಈ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

ದೃಶ್ಯ ಕಲೆಯ ಹಿನ್ನೆಲೆಯಿಂದ ಬಂದ ಉಮೇಶ್ ಅವರು ಶಿಲ್ಪಕಲೆಯಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮುನ್ನ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ನಾಗಭೂಷಣ - ನಟ ಧನಂಜಯ್
ನಾಗಭೂಷಣ - ನಟ ಧನಂಜಯ್

'ಕ್ಯಾಮೆರಾ ಹಿಂದೆ ಕೆಲಸ ಮಾಡುತ್ತಿದ್ದ ನಾನು ಯಾವಾಗಲೂ ನಿರ್ದೇಶಕನಾಗುವ ಕನಸನ್ನು ಕಾಣುತ್ತಿದ್ದೆ. ಇದೀಗ ಟಗರು ಪಲ್ಯ ಸಿನಿಮಾದ ಮೂಲಕ ನನ್ನ ಗುರಿ ಸಾಕಾರಗೊಳ್ಳುತ್ತಿದೆ’. ಟಗರು ಪಲ್ಯ ಎಂಬುದು ಕರ್ನಾಟಕದ ಭಾಗಗಳಲ್ಲಿ ಲಭ್ಯವಿರುವ ಪ್ರಸಿದ್ಧ ಖಾದ್ಯದ ಹೆಸರು. ನನ್ನ ಕಥೆಯು ಒಂದು ಕಾರ್ಯಕ್ರಮದ ಸುತ್ತ ಮತ್ತು ನಿರ್ದಿಷ್ಟ ರೀತಿಯ ಭಕ್ಷ್ಯಗಳಿಗಾಗಿ ಹಾತೊರೆಯುವ ಜನರ ಬಗ್ಗೆ ನಡೆಯುತ್ತದೆ ಎನ್ನುತ್ತಾರೆ ಉಮೇಶ್.

ಜೀವನ, ಸಂಪ್ರದಾಯಗಳು ಮತ್ತು ಬೇರೂರಿರುವ ಸಂಸ್ಕೃತಿಯ ವಿಷಯಗಳೇ ಸಿನಿಮಾದ ಮೂಲ ವಿಷಯವಾಗಿದೆ' ಎನ್ನುತ್ತಾರೆ ಉಮೇಶ್. ಕಚ್ಚಾ ಮತ್ತು ವಾಸ್ತವದ ವಿಚಾರಗಳನ್ನು ಅನ್ವೇಷಿಸಲು ಬಯಸಿದ ಉಮೇಶ್ ಅವರು ಲೊಕೇಶನ್‌ಗಳನ್ನು ಫೈನಲ್ ಮಾಡಿದ್ದಾರೆ. ಚಿತ್ರಕ್ಕೆ ರಂಗಾಯಣ ರಘು, ತಾರಾ ಮತ್ತು ಶರತ್ ಲೋಹಿತಾಶ್ವ ಸೇರಿದಂತೆ ಕೆಲವು ನಟರನ್ನು ಆಯ್ಕೆ ಮಾಡಿದ್ದಾರೆ.

ಟಗರು ಪಲ್ಯ ಚಿತ್ರವು ದೊಡ್ಡ ತಾರಾಂಗಣವನ್ನು ಒಳಗೊಂಡಿದ್ದು, ಪ್ರಮುಖ ಪಾತ್ರಗಳಲ್ಲಿ 35 ಹೆಸರಾಂತ ನಟರನ್ನು ಕರೆತರಲು ನಾವು ಯೋಜಿಸುತ್ತಿದ್ದೇವೆ. ಸಿನಿಮಾದಲ್ಲಿ ಧನಂಜಯ್ ಅವರು ಪಾತ್ರವನ್ನು ನಿರ್ವಹಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳುತ್ತಾರೆ ಉಮೇಶ್.

ವಾಸುಕಿ ವೈಭವ್ ಅವರು ಸಂಗೀತ ಸಂಯೋಜಿಸಲಿರುವ ಟಗರು ಪಲ್ಯ ಸಿನಿಮಾಗೆ ಎಸ್.ಕೆ. ರಾವ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com