ನಟ ಧರ್ಮ ಕೀರ್ತಿರಾಜ್ ಮತ್ತು ಸೋನು ಗೌಡ ಅಭಿನಯದ ವಸುಂಧರಾದೇವಿ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲು ಚಿತ್ರತಂಡ ಯೋಚನೆಯಲ್ಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಮಹೇಶ್ ಚಿನ್ಮಯಿ ನಿರ್ದೇಶನದ ಮತ್ತು ಅಶೋಕ್ ಕವೇಟಿ ನಿರ್ಮಾಣದ ವಸುಂಧರಾದೇವಿ ಚಿತ್ರ ಇದೇ ನವೆಂಬರ್‌ನಲ್ಲಿ ತೆರೆಗೆ ಬರಬಹುದು ಎನ್ನಲಾಗಿದೆ.
ವಸುಂಧರಾದೇವಿ ಮರ್ಡರ್ ಮಿಸ್ಟರಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ನಟಿ ಸೋನು ಗೌಡ, ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಧರ್ಮ ಕೀರ್ತಿರಾಜ್ ತನಿಖಾ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯನಟ ಗೋವಿಂದೇಗೌಡ, ರೂಪೇಶ್, ಪೂಜಾ ಮತ್ತು ಸೆವೆನ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ.
Advertisement