ಪ. ರಂಜಿತ್, ಚಿಯಾನ್ ವಿಕ್ರಂ ಜೋಡಿಯ ಬಹು ನಿರೀಕ್ಷಿತ ಚಿತ್ರದ ಟೈಟಲ್ ಹೊರಬಂದಿದೆ. ಕಿರು ಟೀಸರ್ ನೊಂದಿಗೆ ಟೈಟಲ್ ನ್ನು ಚಿತ್ರ ತಂಡ ಅಧಿಕೃತವಾಗಿ ಘೋಷಿಸಿದೆ.
ಈ ಸಿನಿಮಾಕ್ಕೆ ತಂಗಲಾನ್ ಎಂದು ಹೆಸರಿಡಲಾಗಿದೆ . ಕಿರು ಟೀಸರ್ ಹೇಳುವಂತೆ ಇದು ನೈಜ ಘಟನೆಗಳಿಂದ ಪ್ರೇರಿತವಾಗಿರುವ ಸಿನಿಮಾವಾಗಿದೆ. ಹಳ್ಳಿಯ ಯಾವುದೋ ಸಮುದಾಯದ ನಾಯಕನಂತೆ ವಿಕ್ರಂ ಕಾಣುತ್ತಿದ್ದು, ಅವರು ಬ್ರಿಟಿಷರೊಂದಿಗೆ ಹೋರಾಡುವ ಕಥೆಯಂತೆ ಕಾಣುತ್ತಿದೆ.
ಇದು ಕರ್ನಾಟಕದ ಕೋಲಾರದಲ್ಲಿನ ಪೂರ್ವಕುಡಿ ಸಮುದಾಯದ ಬಗೆಗಿನ ಚಿತ್ರವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾ ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
Advertisement