ರಾಣಿ ಎಲಿಜಬೆತ್ II ಭಾಗವಹಿಸಿದ ಏಕೈಕ ಸಿನಿಮಾ ಸೆಟ್ 'ಮರುದನಾಯಗಂ': ನಟ ಕಮಲ್ ಹಾಸನ್

ರಾಣಿ ಎಲಿಜಬೆತ್-II ರ ನಿಧನಕ್ಕೆ ಟಾಪ್ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಸಂಸ್ಥಾಪಕ ಕಮಲ್ ಹಾಸನ್ ಶುಕ್ರವಾರ ಸಂತಾಪ ಸೂಚಿಸಿದ್ದಾರೆ. 1997 ರಲ್ಲಿ ಎಲಿಜಬೆತ್ ಅವರು ಇಲ್ಲಿಗೆ ಭೇಟಿ ನೀಡಿದಾಗ ತಮ್ಮ 'ಮರುದನಾಯಗಮ್' ಸಿನಿಮಾದ ಸೆಟ್‌ಗಳಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ರಾಣಿ ಎಲಿಜಬೆತ್-II - ಕಮಲ್ ಹಾಸನ್
ರಾಣಿ ಎಲಿಜಬೆತ್-II - ಕಮಲ್ ಹಾಸನ್
Updated on

ಚೆನ್ನೈ: ಬ್ರಿಟನ್ ರಾಣಿ ಎಲಿಜಬೆತ್-II ರ ನಿಧನಕ್ಕೆ ಟಾಪ್ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಸಂಸ್ಥಾಪಕ ಕಮಲ್ ಹಾಸನ್ ಶುಕ್ರವಾರ ಸಂತಾಪ ಸೂಚಿಸಿದ್ದಾರೆ. 1997 ರಲ್ಲಿ ಎಲಿಜಬೆತ್ ಅವರು ಇಲ್ಲಿಗೆ ಭೇಟಿ ನೀಡಿದಾಗ ತಮ್ಮ 'ಮರುದನಾಯಗಮ್' ಸಿನಿಮಾದ ಸೆಟ್‌ಗಳಿಗೆ ಭೇಟಿ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ವಸಾಹತುಶಾಹಿ ಆಡಳಿತದ ವಿರುದ್ಧವೇ ತಯಾರಾಗಿದ್ದ ಸಿನಿಮಾದಲ್ಲಿನ ಸಂಭಾಷಣೆಗಳ ಬಗ್ಗೆ ಅವರು ಸಾಕಷ್ಟು ತಿಳಿದುಕೊಂಡೇ ಸೆಟ್‌ಗಳಿಗೆ ಬಂದಿದ್ದರು. ಆದರೆ, ದಿವಂಗತ ರಾಣಿಗೆ ಆಗ ಜಗತ್ತು ಮತ್ತು ರಾಜಕೀಯ ಬದಲಾಗಿದೆ ಎಂಬ ಅರಿವು ಇತ್ತು ಎಂದು ನಟ ತಿಳಿಸಿದ್ದಾರೆ.

'ನಾವು ಹೇಳಿದ ಡೈಲಾಗ್‌ಗಳು ವಸಾಹತುಶಾಹಿ ಆಡಳಿತದ ವಿರುದ್ಧವಾಗಿತ್ತು. ಅದನ್ನು ತಿಳಿದಿದ್ದರೂ ಅವರು ಅಲ್ಲಿಗೆ ಬಂದಿದ್ದರು. ಅವರು ರಾಣಿಯಾಗಿ ಬಂದಿರಲಿಲ್ಲ ಬದಲಿಗೆ ರಾಜಕೀಯ ಬದಲಾಗಿದೆ, ಜಗತ್ತು ಬದಲಾಗಿದೆ ಎಂಬುದನ್ನು ಅರಿತುಕೊಂಡಿದ್ದ ತಾಯಿಯಾಗಿ ಅಲ್ಲಿಗೆ ಬಂದಿದ್ದರು ಎಂಬುದನ್ನು ತೋರಿಸುತ್ತಿತ್ತು. ನಾನು ಅದನ್ನು ಇಷ್ಟಪಟ್ಟೆ' ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್ ತಿಳಿಸಿದರು.

ಅವರು 'ಸಂಪೂರ್ಣ' ಜೀವನವನ್ನು ನಡೆಸಿದರು ಮತ್ತು ದೀರ್ಘಕಾಲ ಆಳ್ವಿಕೆ ನಡೆಸಿದರು ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ಸರಣಿ ಟ್ವೀಟ್‌ ಮಾಡಿದ್ದ ಅವರು, 'ದಿವಂಗತ ರಾಣಿಯನ್ನು ಬ್ರಿಟಿಷರು ಮಾತ್ರವಲ್ಲದೆ ಪ್ರಪಂಚದಾದ್ಯಂತ ಇರುವ ಜನರು ಪ್ರೀತಿಸುತ್ತಿದ್ದರು' ಎಂದು ಹೇಳಿದರು.

'ಇಪ್ಪತ್ತೈದು ವರ್ಷಗಳ ಹಿಂದೆ, ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿದರು ಮತ್ತು ಮರುದನಾಯಗಂ ಚಿತ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು ಮತ್ತು ನಮ್ಮನ್ನು ಸ್ವಾಗತಿಸಿದರು. ಬಹುಶಃ ಅವರು ಭಾಗವಹಿಸಿದ್ದ ಏಕೈಕ ಚಲನಚಿತ್ರ ಚಿತ್ರೀಕರಣ ಇದಾಗಿದೆ' ಎಂದು ಅವರು ಹೇಳಿದರು.

ಐದು ವರ್ಷಗಳ ಹಿಂದೆ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಲಂಡನ್‌ಗೆ ಭೇಟಿ ನೀಡಿದ್ದಾಗ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಅವರೊಂದಿಗಿನ ಭೇಟಿಯನ್ನು ಪ್ರೀತಿಯಿಂದ ನೆನಪಿಸಿಕೊಂಡಿರುವ ಕಮಲ್ ಹಾಸನ್ ಅವರು, ಅವರ ಭೇಟಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಬ್ರಿಟನ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ II ಗುರುವಾರ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com