ವಿಭಿನ್ನ ಪಾತ್ರಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ನಟ ಶ್ರೀನಗರ ಕಿಟ್ಟಿ ಅವರು ನವೀನ್ ರೆಡ್ಡಿ ನಿರ್ದೇಶನದ 'ಮಾದೇವ' ಸಿನಿಮಾದಲ್ಲಿ ನಟಿಸಿಲಿದ್ದಾರೆ. ಅವರು ನಟ ವಿನೋದ್ ಪ್ರಭಾಕರ್ ಅವರ ಎದುರಾಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಶೇ 50ರಷ್ಟು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಚಿತ್ರದಂಡಕ್ಕೆ ಶ್ರೀನಗರ ಕಿಟ್ಟಿ ಸೇರಿಕೊಂಡಿದ್ದಾರೆ. 1965, 1980, ಮತ್ತು 1999 ರ ವಿಭಿನ್ನ ಕಾಲಘಟ್ಟದ ಒಂದು ಸ್ಫೂರ್ತಿದಾಯಕ ಕಥೆ ಇದಾಗಿದ್ದು, ಮಾದೇವನ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಹಿಂದೆಂದೂ ನೋಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ವಿನೋದ್ ಮತ್ತು ನಟಿ ಸೋನಲ್ ಮೊಂತೆರೊ ಅವರು ಮಾದೇವ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ಒಟ್ಟಾಗಿ ನಟಿಸುತ್ತಿದ್ದಾರೆ.
ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್. ಕೇಶವ್ (ದೇವಸಂದ್ರ) ಮತ್ತು ಸುಮಂತ್ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ನಟಿ ಶ್ರುತಿ, ಅಚ್ಯುತ್ ಕುಮಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ಡಿಒಪಿ ಸೆಂಥಿಲ್ ಕುಮಾರ್ ಅವರ ಸಹಾಯಕ ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ ಮತ್ತು ಪ್ರದ್ದ್ಯೋತ್ತನ್ ಅವರ ಸಂಗೀತವಿದೆ. ಬೆಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನ ಕೆಲವು ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.
ನಿರ್ದೇಶಕ ನವೀನ್ ರೆಡ್ಡಿ ಅವರು ಪ್ರತಿನಾಯಕನಾಗಿ ನಟಿಸಲು ಗೌಳಿ ಸಿನಿಮಾದ ನಟ ಶ್ರೀನಗರ ಕಿಟ್ಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Advertisement