ಮೂವರು ನಾಯಕಿಯರೊಂದಿಗೆ ಗೋಲ್ಡನ್ ಸ್ಟಾರ್ 'ತ್ರಿಬಲ್ ರೈಡಿಂಗ್‌'; ಯಟ್ಟಾ ಯಟ್ಟಾ ಹಾಡಿಗೆ ಭರ್ಜರಿ ರೆಸ್ಪಾನ್ಸ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಮಂಗ್ಲಿ ಹಾಡಿರುವ ಸಾಯಿ ಕಾರ್ತಿಕ್ ಸಂಯೋಜನೆಯ ಯಟ್ಟಾ ಯಟ್ಟಾ ಯಟ್ಟಾ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತ್ರಿಬಲ್ ರೈಡಿಂಗ್ ಸಿನಿಮಾದ ಯಟ್ಟಾ ಯಟ್ಟಾ ಹಾಡಿನ ದೃಶ್ಯ
ತ್ರಿಬಲ್ ರೈಡಿಂಗ್ ಸಿನಿಮಾದ ಯಟ್ಟಾ ಯಟ್ಟಾ ಹಾಡಿನ ದೃಶ್ಯ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಯಟ್ಟಾ ಯಟ್ಟಾ ಯಟ್ಟಾ ಎಂಬ ಶೀರ್ಷಿಕೆಯ ಈ ಹಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮೂವರು ನಾಯಕಿಯರಾದ ಮೇಘಾ ಶೆಟ್ಟಿ, ಅದಿತಿ ಪ್ರಭುದೇವ ಮತ್ತು ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ.

ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಮಂಗ್ಲಿ ಹಾಡಿರುವ ಸಾಯಿ ಕಾರ್ತಿಕ್ ಸಂಯೋಜನೆಯ ಈ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯೂಟ್ಯೂಬ್‌ನಲ್ಲಿ ಸದ್ಯ ಟ್ರೆಂಡಿಂಗ್‍ನಲ್ಲಿದೆ. ಚಂದನ್ ಶೆಟ್ಟಿ ಅವರೇ ಈ ಹಾಡನ್ನು ಬರೆದಿದ್ದು, ಈ ವಿಡಿಯೋದ ಪ್ರಮುಖ ಅಂಶವೆಂದರೆ ಸೀನು ಅವರ ಕಲಾಕೃತಿ.

ಮಹೇಶ್ ಗೌಡ ನಿರ್ದೇಶನದ ಈ ಚಿತ್ರವನ್ನು ಇದೇ ಮೊದಲ ಬಾರಿಗೆ ರಾಮ್ ಗೋಪಾಲ್ ಅವರು ನಿರ್ಮಿಸಿದ್ದಾರೆ. ತ್ರಿಬಲ್ ರೈಡಿಂಗ್ ಆಕ್ಷನ್, ಥ್ರಿಲ್ಲರ್, ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಸಿನಿಮಾವಾಗಿದ್ದು, ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಉಮೇಶ್ ಮತ್ತು ಡಿಂಗ್ರಿ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತ್ರಿಬಲ್ ರೈಡಿಂಗ್ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com