ಗಾಳಿಪಟ 2 ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ಮುಂದಿನ ಚಿತ್ರವಾದ ಬಾನದಾರಿಯಲ್ಲಿ- ನೋಡು ಎಂಥ ಚಂದದ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ. ಚಿತ್ರವನ್ನು ಗಣೇಶ್ ಅವರ ಸ್ನೇಹಿತ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಅವರು ನಿರ್ದೇಶಿಸುತ್ತಿದ್ದು, ಈ ಜೋಡಿ ನಾಲ್ಕನೇ ಬಾರಿಗೆ ಒಟ್ಟಿಗೆ ಸಿನಿಮಾ ಮಾಡುತ್ತಿದೆ. ಚಿತ್ರದ ಕೆಲವು ಭಾಗಗಳನ್ನು ಚಿತ್ರಿಸಲು ಚಿತ್ರತಂಡ ಮಂಗಳೂರಿನಲ್ಲಿದ್ದು, ತಂಡದಲ್ಲಿ ನಟಿ ರುಕ್ಮಿಣಿ ವಸಂತ್ ಕೂಡ ಸೇರಿದ್ದಾರೆ.
ಕರ್ನಾಟಕ, ಚೆನ್ನೈ, ವಾರಣಾಸಿ ಮತ್ತು ಆಫ್ರಿಕಾದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದ್ಗು, ಇತ್ತೀಚೆಗಷ್ಟೇ 30 ದಿನಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಬಾನದಾರಿಯಲ್ಲಿ ಸಿನಿಮಾ ತಂಡದ ಮುಂದಿನ ಚಿತ್ರೀಕರಣ ಕೀನ್ಯಾದಲ್ಲಿ ನಡೆಯಲಿದೆ. ಹೀಗಾಗಿ ಗಣೇಶ್ ಮತ್ತು ಸಿಬ್ಬಂದಿ ಸೆಪ್ಟೆಂಬರ್ 19 ರಂದು ದಕ್ಷಿಣ ಆಫ್ರಿಕಾಕ್ಕೆ ಹಾರಲಿದ್ದಾರೆ. 15 ದಿನಗಳ ಕಾಲ ಅಲ್ಲಿನ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದ್ದಾರೆ.
ಚಿತ್ರದ ಪೋಸ್ಟರ್‌ಗಳಲ್ಲಿ ಕಾಣುತ್ತಿರುವಂತೆ ನಟ ಗಣೇಶ್ ಕ್ರಿಕೆಟಿಗನಾಗಿ ಚಿತ್ರದಲ್ಲಿ ನಟಿಸಿದ್ದರೆ, ರುಕ್ಮಿಣಿ ಸರ್ಫರ್ ಆಗಿ ಕಾಣಿಸಿಕೊಂಡಿದ್ದಾರೆ ಮತ್ತು ರೀಷ್ಮಾ ನಾಣಯ್ಯ ವನ್ಯಜೀವಿ ಛಾಯಾಗ್ರಾಹಕಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ರೊಮ್ಯಾಂಟಿಕ್ ಚಿತ್ರವಾದ ಬಾನದಾರಿಯಲ್ಲಿ ಸಿನಿಮಾದ ಕಥೆಯನ್ನು ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಮನ್ ಬರೆದಿದ್ದು, ಪ್ರೀತಂ ಚಿತ್ರಕಥೆ ಬರೆದಿದ್ದಾರೆ.
ವಿ ಹರಿಕೃಷ್ಣ ಅವರ ಸಂಗೀತ ಮತ್ತು ಅಭಿಲಾಷ್ ಕಲತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಬಾನದರಿಯಲ್ಲಿ ಹೊರತುಪಡಿಸಿ ಗಣೇಶ್ ಅವರ ಮುಂಬರುವ ಕಾಮಿಡಿ ಫ್ಯಾಮಿಲಿ ಎಂಟರ್‌ಟೈನರ್ ಟ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ ಮತ್ತು ನಿರ್ದೇಶಕ ಸುನಿ ಅವರ ರಾಯಗಡ ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ.
Advertisement