ಸೆಲೆಬ್ರಿಟಿ ಮಕ್ಕಳಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಅದು ಸಿನಿಮಾದ ಯಶಸ್ಸಿಗೆ ಕಾರಣವಾಗಲ್ಲ: ತರುಣ್ ಕಿಶೋರ್ ಸುಧೀರ್

ಎಲ್ಲಾ ಮಕ್ಕಳಿಗೆ 40 ವರ್ಷ ಹಳೆಯ ಬೆಂಗಳೂರಿನ ಯಂಗ್ ಪಯೋನಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತುದಾರ ಬಿ.ಆರ್.ಕುಮಾರ್ ಮತ್ತು ತಂಡದಿಂದ ಒಂದು ವರ್ಷ ಕಠಿಣ ತರಬೇತಿ ನೀಡಲಾಗಿದೆ.
ಗುರು ಶಿಷ್ಯರು ಸಿನಿಮಾದ ಪೋಸ್ಟರ್
ಗುರು ಶಿಷ್ಯರು ಸಿನಿಮಾದ ಪೋಸ್ಟರ್

ಶರಣ್‌ ನಾಯಕರಾಗಿರುವ 'ಗುರು ಶಿಷ್ಯರು' ಸಿನಿಮಾ ತನ್ನ ಚಿತ್ರೀಕರಣದ ವಿಷಯದಲ್ಲಿ, ಕಥೆಯ ವಿಚಾರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾವನ್ನು ಜಡೇಶಾ ಕೆ ಹಂಪಿ ನಿರ್ದೇಶಿಸಿದ್ದು, ಜನಪ್ರಿಯ ಗ್ರಾಮೀಣ ಕ್ರೀಡೆಯಾದ ಖೋ-ಖೋ ಮೂಲಕ ಗುರು (ಪಿಟಿ ಶಿಕ್ಷಕರು) ಮತ್ತು ಅವರ ಶಿಷ್ಯರ (ವಿದ್ಯಾರ್ಥಿಗಳು) ನಡುವಿನ ಸಂಬಂಧವನ್ನು ತೆರೆಯ ಮೇಲೆ ಬಿಚ್ಚಿಡಲಿದೆ.

ನಟ ಶರಣ್ ಸಹ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ತರುಣ್ ಕಿಶೋರ್ ಸುಧೀರ್ ಈ ಸಿನಿಮಾದ ಕ್ರಿಯೇಟಿವ್ ಹೆಡ್ ಮತ್ತು ಸಹ ನಿರ್ಮಾಪಕರಾಗಿದ್ದಾರೆ. ಕ್ರೀಡೆಯ ನೈಜ ಸಾರವನ್ನು ಸೆರೆಹಿಡಿಯಲು ತಂಡವು ಹೆಚ್ಚುವರಿ ಮೈಲುಗಳಷ್ಟು ದೂರ ಹೋಗಿದೆ. ಚಿತ್ರದಲ್ಲಿ 11 ಪ್ರತಿಭಾವಂತ ಮಕ್ಕಳು ಅಭಿನಯಿಸಿದ್ದು, ಇವರಲ್ಲಿ ಸೆಲೆಬ್ರಿಟಿಗಳ ಮಕ್ಕಳು ಸೇರಿದ್ದಾರೆ. ಹೃದಯ (ಶರಣ್ ಅವರ ಮಗ), ಏಕಾಂತ್ (ಪ್ರೇಮ್ ಅವರ ಮಗ), ಸೂರ್ಯ (ರವಿ ಶಂಕರ್ ಗೌಡ ಅವರ ಮಗ), ಹರ್ಷಿತ್ (ನವೀನ್ ಕೃಷ್ಣ ಅವರ ಮಗ), ರಕ್ಷಕ್ (ಬುಲೆಟ್ ಪ್ರಕಾಶ್ ಅವರ ಮಗ) ಮತ್ತು ಮಣಿಕಂಠ ನಾಯಕ್ (ಶಾಸಕ ರಾಜುಗೌಡ ಅವರ ಪುತ್ರ) ಸಿನಿಮಾದಲ್ಲಿ ನಟಿಸಿದ್ದಾರೆ.

ಆಡಿಷನ್ ಮೂಲಕ ಆಯ್ಕೆಯಾದ ಇತರ ಯುವ ಪ್ರತಿಭೆಗಳೆಂದರೆ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಮಣ ಮತ್ತು ಅಮಿತ್ ಬಿ. ಈ ಎಲ್ಲಾ ಮಕ್ಕಳಿಗೆ 40 ವರ್ಷ ಹಳೆಯ ಬೆಂಗಳೂರಿನ ಯಂಗ್ ಪಯೋನಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತುದಾರ ಬಿ.ಆರ್.ಕುಮಾರ್ ಮತ್ತು ತಂಡದಿಂದ ಒಂದು ವರ್ಷ ಕಠಿಣ ತರಬೇತಿ ನೀಡಲಾಗಿದೆ.

'ಈ ತರಬೇತಿಯ ಮೂಲಕ ಮಕ್ಕಳು ಕ್ರೀಡೆಯಲ್ಲಿ ಮತ್ತು ನಟನೆಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಬೇಕು ಎಂದು ನಾವು ಬಯಸಿದ್ದೆವು. ಅದರಂತೆ ಅವರು ಉತ್ತಮವಾಗಿ ನಟಿಸಿದ್ದಾರೆ. ಶರಣ್ ಸಹ ತರಬೇತುದಾರರಾಗಿ ತಮ್ಮ ಭಾಗಕ್ಕೆ ಸರಿಹೊಂದುವಂತೆ ಅನುಭವಿ ಆಟಗಾರ ಮತ್ತು ಶಿಕ್ಷಕ ಬಿ.ವಿ. ನಂದಕುಮಾರ್ ಅವರಿಂದ 4 ತಿಂಗಳ ಕಾಲ ವೈಯಕ್ತಿಕ ತರಬೇತಿಯನ್ನು ಪಡೆದರು' ಎನ್ನುತ್ತಾರೆ ಸ್ವತಃ ತರಬೇತಿ ಶಿಬಿರದ ಭಾಗವಾಗಿದ್ದ ಜಡೇಶಾ ಕೆ ಹಂಪಿ.

ಸೆಲೆಬ್ರಿಟಿ ಮಕ್ಕಳನ್ನು ಕರೆತರುವುದು ಕಾರ್ಯಸಾಧ್ಯವಾಗಿರಲಿಲ್ಲ, ಏಕೆಂದರೆ ಚಿತ್ರದಲ್ಲಿ ಈಗಾಗಲೇ ಸ್ಟಾರ್ ನಟ ಶರಣ್ ಕೂಡ ಇದ್ದಾರೆ ಎನ್ನುತ್ತಾರೆ ತರುಣ್ ಕಿಶೋರ್ ಸುಧೀರ್. ಪಾತ್ರವರ್ಗದ ಒಂದು ವಿಭಾಗವು ಸ್ಟಾರ್ ಮಕ್ಕಳಾಗಿರುವುದು ಕಾಕತಾಳೀಯವಾಗಿದೆ. ಈ ಚಿತ್ರವು ಅವರಿಗೆ ಮನ್ನಣೆಯನ್ನು ನೀಡುತ್ತದೆ. ಆದರೆ, ಇದುವೇ ಚಿತ್ರದ ಯಶಸ್ಸಿನ ಟಿಕೆಟ್ ಆಗಿರುವುದಿಲ್ಲ. ಆಡಿಷನ್ ಮೂಲಕ ಆಯ್ಕೆಯಾದ ಸ್ಟಾರ್ ಮಕ್ಕಳು ಮತ್ತು ಇತರರನ್ನು ಸಮಾನವಾಗಿ ಪರಿಗಣಿಸಲಾಗಿದೆ ಎಂದು ತರುಣ್ ಕಿಶೋರ್ ಸುಧೀರ್ ತಿಳಿಸಿದ್ದಾರೆ.

ಚಿತ್ರೀಕರಣದಲ್ಲಿ ಮತ್ತು ಹೊರಗೆ ಅವರು ತಂಡವಾಗಿ ಕೆಲಸ ಮಾಡಬೇಕಾಗಿತ್ತು. ಗುರು ಶಿಷ್ಯರು ಅವರ ಅನುಭವವು ಅವರ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅವರೆಲ್ಲರೂ ಈ ಆಟವನ್ನು ನಿಜವಾದ ಸ್ಪೂರ್ತಿಯನ್ನಾಗಿ ತೆಗೆದುಕೊಂಡಿದ್ದಾರೆ ಎಂದು ನಾನು ನಂಬುತ್ತೇನೆ. ಎಂದು ಅವರು ಹೇಳಿದರು.

ಚಿತ್ರದಲ್ಲಿ ನಾಯಕಿಯಾಗಿ ನಿಶ್ವಿಕಾ ನಾಯ್ಡು, ಸುರೇಶ್ ಹೆಬ್ಳೀಕರ್, ದತ್ತಣ್ಣ ಮತ್ತು ಅಪೂರ್ವ ಕಾಸರವಳ್ಳಿ ನಟಿಸಿರುವ 90ರ ದಶಕದಲ್ಲಿ ನಡೆದ ಈ ಚಿತ್ರ ಸೆಪ್ಟೆಂಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com