ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯ ಚಿತ್ರಕ್ಕೆ ಹೆಸರು 'ಇಬ್ಬನಿ ತಬ್ಬಿದ ಇಳೆಯಲಿ'
ಚಂದ್ರಜಿತ್ ಬೆಳ್ಳಿಯಪ್ಪ ಅವರ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ 'ಇಬ್ಬನಿ ತಬ್ಬಿದ ಇಳೆಯಲಿ' ಎಂದು ಹೆಸರಿಡಲಾಗಿದೆ.
Published: 22nd August 2022 12:43 PM | Last Updated: 22nd August 2022 01:36 PM | A+A A-

ಇಬ್ಬನಿ ತಬ್ಬಿದ ಇಳೆಯಲಿ
ಚಂದ್ರಜಿತ್ ಬೆಳ್ಳಿಯಪ್ಪ ಅವರ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ 'ಇಬ್ಬನಿ ತಬ್ಬಿದ ಇಳೆಯಲಿ' ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ಹೊಸಬರಾದ ವಿಹಾನ್ ಮತ್ತು ಅಂಕಿತಾ ಅಮರ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಬ್ಬನಿ ತಬ್ಬಿದ ಇಳೆಯಲಿ ಹಿಂದಿನ ಪ್ರಣಯದ ಸಾರವನ್ನು ಸೆರೆಹಿಡಿಯಲು ಮತ್ತು ಇಂದಿನ ಪ್ರೀತಿಯ ಪ್ರಸ್ತುತತೆಯನ್ನು ಅನ್ವೇಷಿಸಲು ಮತ್ತು ಭವಿಷ್ಯದ ಪರೀಕ್ಷೆಯನ್ನು ಗೆಲ್ಲಲು ಸಾಧ್ಯವಾದರೆ ಅದನ್ನು ಸೆರೆಹಿಡಿಯುವ ಪ್ರಯತ್ನವೇ ಇದಾಗಿದೆ. ರಕ್ಷಿತ್ ಶೆಟ್ಟಿ ಅವರ 7 ಆಡ್ಸ್ ಬರವಣಿಗೆ ತಂಡದ ಸದಸ್ಯಲ್ಲಿ ಒಬ್ಬರಾಗಿ 'ಅವನೇ ಶ್ರೀಮನ್ನಾರಾಯಣ' ಮತ್ತು 'ಕಿರಿಕ್ ಪಾರ್ಟಿ'ಗೆ ಬರಹಗಾರರಾಗಿ ಕೆಲಸ ಮಾಡಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ 'ಪಂಚತಂತ್ರ' ನಾಯಕ ವಿಹಾನ್ ಗೆ ಜೋಡಿಯಾಗಿದ್ದಾರೆ 'ನಮ್ಮನೆ ಯುವರಾಣಿ'
ರಿಷಬ್ ಶೆಟ್ಟಿ ಪರಿಕಲ್ಪನೆಯ ಕಥಾಸಂಗಮದಲ್ಲಿ 'ರೇನ್‌ಬೊ ಲ್ಯಾಂಡ್' ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಅವರೀಗ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರ ತಂಡವು ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನೋಡುತ್ತಿದ್ದು, 2023ರ ಬೇಸಿಗೆಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.
ಗಗನ್ ಬದೇರಿಯಾ ಸಂಗೀತ ಸಂಯೋಜಿಸುತ್ತಿದ್ದು, ಶ್ರೀವತ್ಸನ್ ಸೆಲ್ವರಾಜನ್ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.