ರಂಗಭೂಮಿಯ ಭಾಗವಾಗಿದ್ದರೆ ಅಭಿನಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು: ನಟಿ ಕಾಜಲ್ ಕುಂದರ್

ನಟಿ ಕಾಜಲ್ ಕುಂದರ್ ತಮ್ಮ ಮುಂದಿನ ಬಾಂಡ್ ರವಿ ಸಿನಿಮಾದ ಬಗ್ಗೆ ಉತ್ಸುಕರಾಗಿದ್ದಾರೆ. ಇದು ಅವರ ಮೊದಲ ಕಮರ್ಷಿಯಲ್ ಸಿನಿಮಾವಾಗಿದೆ. 'ನಾನು ಮುಂಬೈನಲ್ಲಿ ನೆಲೆಸಿರುವ ತುಳು ಮಾತನಾಡುವ ಕುಟುಂಬದಿಂದ ಬಂದಿದ್ದೇನೆ. ಹೀಗಾಗಿಯೇ ನಾನು ಒಂದೆರಡು ಭಾಷೆಗಳ ಸಿನಿಮಾಗಳಲ್ಲಿ ತನ್ನ ಛಾಪು ಮೂಡಿಸಲು ಸಾಧ್ಯವಾಯಿತು.
ಕಾಜಲ್ ಕುಂದರ್
ಕಾಜಲ್ ಕುಂದರ್

ಮರಾಠಿ, ಹಿಂದಿ, ತುಳು ಮತ್ತು ಕನ್ನಡದಲ್ಲಿ ಕಲಾತ್ಮಕ ಸಿನಿಮಾದಲ್ಲಿ ನಟಿಸಿದ್ದ ನಟಿ ಕಾಜಲ್ ಕುಂದರ್ ತಮ್ಮ ಮುಂದಿನ ಬಾಂಡ್ ರವಿ ಸಿನಿಮಾದ ಬಗ್ಗೆ ಉತ್ಸುಕರಾಗಿದ್ದಾರೆ. ಇದು ಅವರ ಮೊದಲ ಕಮರ್ಷಿಯಲ್ ಸಿನಿಮಾವಾಗಿದೆ. 'ನಾನು ಮುಂಬೈನಲ್ಲಿ ನೆಲೆಸಿರುವ ತುಳು ಮಾತನಾಡುವ ಕುಟುಂಬದಿಂದ ಬಂದಿದ್ದೇನೆ. ಹೀಗಾಗಿಯೇ ನಾನು ಒಂದೆರಡು ಭಾಷೆಗಳ ಸಿನಿಮಾಗಳಲ್ಲಿ ತನ್ನ ಛಾಪು ಮೂಡಿಸಲು ಸಾಧ್ಯವಾಯಿತು.

'ರಂಗಭೂಮಿಯ ಹಿನ್ನೆಲೆಯಿಂದ ಬಂದ ನನಗೆ ಆರಂಭದಲ್ಲಿ ಅಭಿನಯ ಆಧಾರಿತ ಪಾತ್ರಗಳನ್ನು ಮಾಡುವ ಅವಕಾಶಗಳು ಸಿಕ್ಕವು. ಆದರೆ, ಆ ಎಲ್ಲಾ ಚಿತ್ರಗಳು ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಮಾತ್ರ ಪ್ರದರ್ಶನಗೊಂಡಿವೆ. ನನಗೆ ಸಿನಿಮಾ ಉದ್ಯಮದ ಸೂತ್ರ ತಿಳಿದಿಲ್ಲದ ಕಾರಣ, ನನಗೆ ಬಂದ ಅವಕಾಶಗಳೊಂದಿಗೆ ವೃತ್ತಿಯನ್ನು ಆರಂಭಿಸಿದೆ. ನಾನು ಹಿಂದಿ ಚಿತ್ರದಿಂದ ಪ್ರಾರಂಭಿಸಿದರೂ, ದುರದೃಷ್ಟವಶಾತ್, ಅದು ಬಿಡುಗಡೆಯಾಗಲಿಲ್ಲ. ಈ ನಡುವೆ ನಾನು ಮರಾಠಿ ಮತ್ತು ಎರಡು ತುಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಮೊದಲ ಕನ್ನಡ ಚಿತ್ರ 2020 ರಲ್ಲಿ ಬಿಡುಗಡೆಯಾದ ಮಾಯಾ ಕನ್ನಡಿ. ಎರಡನೆಯದು ಬಾಂಡ್ ರವಿ. ಇದು ನನ್ನ ಮೊದಲ ಕಮರ್ಷಿಯಲ್ ಎಂಟರ್‌ಟೈನರ್ ಮತ್ತು ನಾನು ಇದನ್ನು ದೊಡ್ಡ ಬ್ರೇಕ್ ಎಂದು ಪರಿಗಣಿಸುತ್ತೇನೆ' ಎಂದು ಅವರು ಹೇಳುತ್ತಾರೆ.

ಪ್ರಜ್ವಲ್ ಎಸ್.ಪಿ. ನಿರ್ದೇಶನದ ಬಾಂಡ್ ರವಿ ಸಿನಿಮಾ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದರೂ, ಚಿತ್ರದಲ್ಲಿ ತನ್ನ ಅಭಿನಯವನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿತು. ಬಾಂಡ್ ರವಿ ಮಾಸ್ ಮತ್ತು ಕಂಟೆಂಟ್‌ನ ಪರಿಪೂರ್ಣ ಮಿಶ್ರಣವನ್ನು ಹೊಂದಿದ್ದು, ನಾಯಕ ಮತ್ತು ನಾಯಕಿ ಇಬ್ಬರಿಗೂ ಸಮಾನವಾದ ಸ್ಕ್ರೀನ್ ಟೈಮ್ ಸಿಗುತ್ತದೆ. ಪಾತ್ರಗಳಲ್ಲಿ ಆಳ ಮತ್ತು ವ್ಯತ್ಯಾಸಗಳಿವೆ. ನಾನು ಪ್ರಮೋದ್ ಜೊತೆಗೆ ಹೊಸ ರೀತಿಯ ಪ್ರೇಮಕಥೆಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದೊಂದು ಮಾಸ್ ಪ್ಯಾಕೇಜ್' ಎಂದು ಕಾಜಲ್ ತಮ್ಮ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಾರೆ.

<strong>ಕಾಜಲ್ ಕುಂದರ್</strong>
ಕಾಜಲ್ ಕುಂದರ್

'ನನ್ನ ಪಾತ್ರ ಶ್ವೇತಾ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು ಮತ್ತು ಸೂಕ್ಷ್ಮ ವ್ಯಕ್ತಿತ್ವದವಳು. ಆಕೆ ದೊಡ್ಡ ನಗರಕ್ಕೆ ಸ್ಥಳಾಂತರಗೊಳ್ಳುತ್ತಾಳೆ ಮತ್ತು ಸ್ವತಂತ್ರವಾಗಿರಲು ಪ್ರಯತ್ನಿಸುತ್ತಾಳೆ. ಅದು ಸವಾಲಿನದ್ದು. ಅಣ್ಣಾ ಬಾಂಡ್ ಸಿನಿಮಾ ನೋಡಿದ ನಂತರ ಸಿನಿಮಾದಲ್ಲಿನ ರವಿ ಪಾತ್ರಧಾರಿ ಅಪ್ಪು (ಪುನೀತ್ ರಾಜ್‌ಕುಮಾರ್) ಅವರ ದೊಡ್ಡ ಅಭಿಮಾನಿಯಾಗುತ್ತಾರೆ ಮತ್ತು ಅವರು ತಮ್ಮ ಹೆಸರನ್ನು ಬಾಂಡ್ ರವಿ ಎಂದು ಬದಲಿಸಿಕೊಳ್ಳುತ್ತಾರೆ. ಒಂದು ಹುಡುಗಿ ಆತನ ಜೀವನದಲ್ಲಿ ಪ್ರವೇಶಿಸಿದಾಗ ಎಲ್ಲವೂ ಬದಲಾಗುತ್ತದೆ' ಎಂದು ಕಾಜಲ್ ವಿವರಿಸುತ್ತಾರೆ.

ಕಾಜಲ್ ಕುಂದರ್ ಅವರು ವಿನಯ್ ರಾಜಕುಮಾರ್ ಅವರ ಜೊತೆಗೆ ಪೆಪೆ ಸಿನಿಮಾದಲ್ಲಿಯೂ ನಟಿಸಿದ್ದು, ಇದು ಕೂಡ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದೆ. ಕೆಟಿಎಂ ಚಿತ್ರದಲ್ಲೂ ನಟಿಸುತ್ತಿದ್ದು, ಇದು ಔಟ್ ಅಂಡ್ ಔಟ್ ಲವ್ ಸ್ಟೋರಿಯಾಗಿದೆ.

'ಕಲಾ-ಆಧಾರಿತ ಚಲನಚಿತ್ರಗಳಿಂದ ಕಮರ್ಷಿಯಲ್ ಮನರಂಜನೆಗೆ ಬದಲಾಗುವುದು ಉತ್ತಮ ಕ್ರಮವಾಗಿದೆ. ನಾನು ಯಾವಾಗಲೂ ಉತ್ತಮ ಮನರಂಜನೆಯ ಭಾಗವಾಗಲು ಬಯಸುತ್ತೇನೆ. ಏಕೆಂದರೆ, ನಾವು ಅದನ್ನು ನೋಡುತ್ತಾ ಬೆಳೆದಿದ್ದೇವೆ. ಆದಾಗ್ಯೂ, ರಂಗಭೂಮಿಯ ಭಾಗವಾಗಿರುವುದರಿಂದ ಉತ್ತಮ ಪ್ರದರ್ಶನದ ಮೌಲ್ಯವನ್ನು ನೀವು ಅರ್ಥಮಾಡಿಕೊಳ್ಳುವಿರಿ. ನನ್ನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ನಾನು ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವುದಕ್ಕೆ ನನಗೆ ಖುಷಿಯಾಗಿದೆ' ಎಂದು ಹೇಳಿದರು.

ಬಾಂಡ್ ರವಿಯ ಮೇಲೆ ಭರವಸೆ ಇಟ್ಟುಕೊಂಡಿರುವ ಕಾಜಲ್, 'ಆರು ವರ್ಷಗಳ ಕಠಿಣ ಪರಿಶ್ರಮದ ನಂತರ, ಅಂತಿಮವಾಗಿ ನನ್ನ ಪರವಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ. ಸ್ಯಾಂಡಲ್‌ವುಡ್ ಇಂಡಸ್ಟ್ರಿ ನನಗೆ ಒಳ್ಳೆಯದಾಗಿದೆ ಮತ್ತು ಈ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರು ನನ್ನನ್ನು ಪೂರ್ಣ ಹೃದಯದಿಂದ ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com