ನಾನು ಒಂದೇ ಚಿತ್ರದಲ್ಲಿ ನಟಿಸಿರಬಹುದು, ಆದರೆ ಚಿತ್ರರಂಗದಲ್ಲಿ 9 ವರ್ಷದಿಂದ ಇದ್ದೇನೆ: 'ವಿಜಯಾನಂದ' ಪಾತ್ರಧಾರಿ ನಿಹಾಲ್

ಕರ್ನಾಟಕದ ಜೀವಂತ ದಂತಕಥೆ ಮತ್ತು ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ ಅವರ ಪಾತ್ರವನ್ನು ತೆರೆಯ ಮೇಲೆ ಮಾಡುವುದು ನಿಹಾಲ್ ಗೆ ಅತಿದೊಡ್ಡ ಸವಾಲಾಗಿತ್ತು. ಟ್ರಂಕ್ ಚಿತ್ರದ ಮೂಲಕ ನಟನಾ ಲೋಕಕ್ಕೆ ಪಾದಾರ್ಪಣೆ ಮಾಡಿ ಕೇವಲ ಒಂದು ಚಿತ್ರದಲ್ಲಿ ಅಭಿನಯಿಸಿ ಅನುಭವ ಹೊಂದಿರುವ ನಿಹಾಲ್ ಬಯಕೆ ಈಡೇರಿದೆಯಂತೆ.
ವಿಜಯಾನಂದ ಪಾತ್ರಧಾರಿ ನಿಹಾಲ್
ವಿಜಯಾನಂದ ಪಾತ್ರಧಾರಿ ನಿಹಾಲ್

ಕರ್ನಾಟಕದ ಜೀವಂತ ದಂತಕಥೆ ಮತ್ತು ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ ಅವರ ಪಾತ್ರವನ್ನು ತೆರೆಯ ಮೇಲೆ ಮಾಡುವುದು ನಿಹಾಲ್ ಗೆ ಅತಿದೊಡ್ಡ ಸವಾಲಾಗಿತ್ತು. ಟ್ರಂಕ್ ಚಿತ್ರದ ಮೂಲಕ ನಟನಾ ಲೋಕಕ್ಕೆ ಪಾದಾರ್ಪಣೆ ಮಾಡಿ ಕೇವಲ ಒಂದು ಚಿತ್ರದಲ್ಲಿ ಅಭಿನಯಿಸಿ ಅನುಭವ ಹೊಂದಿರುವ ನಿಹಾಲ್ ಬಯಕೆ ಈಡೇರಿದೆಯಂತೆ. ಇವರ ಬಯಕೆಯಿಂದಲೇ ರಿಶಿಕಾ ಶರ್ಮ ಅವರ ನಿರ್ದೇಶನದಲ್ಲಿ ವಿಜಯ್ ಸಂಕೇಶ್ವರ ಚಿತ್ರ ತೆರೆಗೆ ಬಂದಿದೆ.

ಉತ್ತರ ಕರ್ನಾಟಕದಿಂದ (ಹುಬ್ಬಳ್ಳಿ, ಧಾರವಾಡ) ಬಂದ ನಾನು ವಿಜಯ್ ಸರ್ ಮತ್ತು ಅವರ ಮಗ ಆನಂದ್ ಅವರ ಸ್ಪೂರ್ತಿದಾಯಕ ಕೃತಿಗಳ ಬಗ್ಗೆ ನನ್ನ ತಂದೆ ಮಾತನಾಡುವುದನ್ನು ಕೇಳುತ್ತಾ ಬೆಳೆದೆ. ಅದು ನನ್ನ ಮನಸ್ಸಿನಲ್ಲಿ ಬಹಳ ಕಾಲ ಅಂಟಿಕೊಂಡಿತ್ತು. ನನ್ನ ಶಾಲಾ ದಿನಗಳಲ್ಲಿ ನಾನು ನೋಡಿದ ಮಣಿರತ್ನಂ ಅವರ ಗುರು ಚಿತ್ರ ಮತ್ತೊಂದು ಸ್ಫೂರ್ತಿ. ನಾನು ಖ್ಯಾತನಾಮರ ಜೀವನಚರಿತ್ರೆಗಳನ್ನು ಬಹಳವಾಗಿ ಓದುತ್ತೇನೆ, ಅನುಸರಿಸುತ್ತೇನೆ, ಅವು ನನ್ನ ನೆಚ್ಚಿನ ಪ್ರಕಾರಗಳಾಗಿವೆ. ಪ್ರಾಸಂಗಿಕವಾಗಿ, ಅಂತಹ ಒಂದು ವಿಷಯದ ಭಾಗವಾಗಲು ನನಗೆ ಅವಕಾಶ ಸಿಕ್ಕಿದ್ದು ಅತೀವ ಸಂತಸ ತಂದಿತು. ವಿಜಯಾನಂದ ಚಿತ್ರದಲ್ಲಿ ವಿಜಯ್ ಸಂಕೇಶ್ವರ ಪಾತ್ರವನ್ನು ನಿರ್ವಹಿಸಿದ ಅದೃಷ್ಟಶಾಲಿ ನಾನು ಎನ್ನುತ್ತಾರೆ. 

ಟ್ರಂಕ್ ನಂತರ, ರಿಷಿಕಾ ಮತ್ತು ನಾನು ನಮ್ಮ ಮುಂದಿನ ಯೋಜನೆ ಬಗ್ಗೆ ಚರ್ಚಿಸುತ್ತಿದ್ದೆವು. ವಿಜಯ್ ಸಂಕೇಶ್ವರ ಅವರ ಜೀವನಚರಿತ್ರೆ ಮಾಡುವ ಆಲೋಚನೆಯನ್ನು ನಾನು ಹಂಚಿಕೊಂಡೆ. ಆರಂಭಿಕ ಚರ್ಚೆಯ ಒಂದು ವಾರದ ನಂತರ, ರಿಷಿಕಾ ಅವರಿಗೂ ಒಳ್ಳೆಯ ಆಲೋಚನೆ ಎನಿಸಿ ಮುಂದುವರಿದೆವು ಎನ್ನುತ್ತಾರೆ. 

ನಿಹಾಲ್ ಮತ್ತು ನಿರ್ದೇಶಕರು ವಿಜಯ್ ಸಂಕೇಶ್ವರ ಅವರನ್ನು ನಂತರ ಭೇಟಿ ಮಾಡಲು ಹೋದರಂತೆ. ಅವರ ಜೀವನಚರಿತ್ರೆಯ ಹಕ್ಕುಗಳನ್ನು ಪಡೆಯಲು. ಅವರಿಗೂ ನಮ್ಮ ಕೆಲಸದ ವೈಖರಿ, ಯೋಜನೆ ಇಷ್ಟವಾಗಿ VRL ಪ್ರೊಡಕ್ಷನ್ ಅಡಿಯಲ್ಲಿ ಚಲನಚಿತ್ರವನ್ನು ಮಾಡಲು ನಿರ್ಧರಿಸಿದರು. ವಿಜಯ್ ಸರ್ ಅವರ ಮಗ ಆನಂದ್ ಸಂಕೇಶ್ವರ್ ಅವರು ಹೆಜ್ಜೆ ಹಾಕಿದಾಗ, ಚಿತ್ರಕ್ಕೆ ಮತ್ತಷ್ಟು ಬಲ ಸಿಕ್ಕಿತು. ನಾವು ಅದನ್ನು ಆಶೀರ್ವಾದ ಎಂದು ಎನ್ನುತ್ತಾರೆ ನಿಹಾಲ್.

ನಾನು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಅಗ್ರ ನಟರಲ್ಲಿ ಒಬ್ಬನಾಗಲು ಬಯಸುತ್ತೇನೆ. ನನ್ನ ವೃತ್ತಿಜೀವನವನ್ನು 2012 ರಲ್ಲಿ ರಂಗಭೂಮಿಯಿಂದ ಪ್ರಾರಂಭಿಸಿ, ನಿರೂಪಕನಾಗಿ, ಧಾರಾವಾಹಿಗಳಿಗೆ ಪ್ರವೇಶಿಸಿದೆ ನಂತರ ಪಾತ್ರ ಕಲಾವಿದನಾಗಿ, ಖಳನಾಯಕನಾಗಿ ಕೆಲಸ ಮಾಡಿದೆ. ಟ್ರಂಕ್ ನಂತ ನನಗೆ ವಿಜಯಾನಂದ ಚಿತ್ರದ ಅವಕಾಶ ಬಂತು ಎನ್ನುತ್ತಾರೆ.

ಚಿತ್ರದಲ್ಲಿ ನಿಹಾಲ್ ಮೂರು ವಿಭಿನ್ನ ನೋಟಗಳ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಧ್ಯವಯಸ್ಕ ಪಾತ್ರಕ್ಕಾಗಿ 22 ಕೆಜಿ ತೂಕವನ್ನು ಹೆಚ್ಚಿಸಬೇಕಾಗಿತ್ತು. ನಾನು ವಿಜಯ್ ಸಂಕೇಶ್ವರ್ ಅವರನ್ನು ಅನುಕರಿಸಲು ಪ್ರಯತ್ನಿಸಿಲ್ಲ, ಆದರೆ ಅವರ ಚಲನವಲನಗಳನ್ನು ಗಮನದಲ್ಲಿಟ್ಟುಕೊಂಡು ಪಾತ್ರ ನಿರ್ವಹಿಸಿದೆ. ತಂಡವಾಗಿ, ನಾವು 18 ತಿಂಗಳ ತಯಾರಿಯನ್ನು ಮಾಡಿದ್ದೇವೆ. ಎಲ್ಲಾ ನಟರು ತಮ್ಮ ತಮ್ಮ ಪಾತ್ರಗಳಿಗಾಗಿ 45 ದಿನಗಳ ಕಾರ್ಯಾಗಾರಕ್ಕೆ ಹಾಜರಾಗಿದ್ದರು. ನಾನು ವಿಜಯ್ ಸಂಕೇಶ್ವರ್ ಅವರನ್ನು ತೆರೆಯ ಮೇಲೆ ಪ್ರತಿನಿಧಿಸಲು ಪ್ರಯತ್ನ ಮಾಡಿದೆ ಎನ್ನುತ್ತಾರೆ. 

ವಿಜಯಾನಂದ ಚಿತ್ರದ ಮೂಲಕ ನಮ್ಮ ಗುರಿ ಯುವಕರು ಮತ್ತು ಚಿತ್ರವನ್ನು ನೋಡುವ ಯಾರಿಗಾದರೂ ಸ್ಫೂರ್ತಿ ನೀಡುವುದು. ವಿಜಯ ಸಂಕೇಶ್ವರ್ ಮತ್ತು ಅವರ ಮಗನ ಜೀವನದ ಮೂಲಕ ಕಲಿಯಬೇಕಾದ ಜೀವನ ಪಾಠವಿದೆ. ಅವರ ಕೆಲಸವು ಮುಂಬರುವ ಅನೇಕ ಉದ್ಯಮಿಗಳಿಗೆ ಮಾರ್ಗದರ್ಶಿಯಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com