ವಿಜಯಾನಂದ: ನಿಹಾಲ್‌ನನ್ನು ನೋಡಿದಾಗ ನನ್ನ ಚಿಕ್ಕ ವಯಸ್ಸಿನ ದಿನಗಳು ನೆನಪಾದವು ಎಂದ ವಿಜಯ ಸಂಕೇಶ್ವರ್

ರಿಷಿಕಾ ಶರ್ಮಾ ನಿರ್ದೇಶನದ 'ವಿಜಯಾನಂದ' ಸಿನಿಮಾ ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.
ವಿಜಯಾನಂದ ಸಿನಿಮಾದ ದೃಶ್ಯ
ವಿಜಯಾನಂದ ಸಿನಿಮಾದ ದೃಶ್ಯ

ರಿಷಿಕಾ ಶರ್ಮಾ ನಿರ್ದೇಶನದ 'ವಿಜಯಾನಂದ' ಸಿನಿಮಾ ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.
ಶರಣ್ ಮತ್ತು ಹರ್ಷಿಕಾ ಪೂಣಚ್ಚ ಅತಿಥಿಗಳಾಗಿ ಆಗಮಿಸಿದ್ದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದರು.

'ಹಾಗೆ ಆದ ಆಲಿಂಗನ' ಎಂಬ ಹಾಡನ್ನು ಕನ್ನಡ ಮತ್ತು ಹಿಂದಿಯಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರು ಸಂಯೋಜಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಗೋಪಿ ಸುಂದರ್ ಅವರು ವಿಜಯಾನಂದ್ ಸಿನಿಮಾದೊಂದಿಗೆ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಧನಂಜಯ್ ರಂಜನ್ ಬರೆದಿರುವ 'ಹಾಗೆ ಆದ ಆಲಿಂಗನ'ವನ್ನು ವಿಜಯ್ ಪ್ರಕಾಶ್ ಮತ್ತು ಕೀರ್ತನಾ ವೈದ್ಯನಾಥನ್ ಹಾಡಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿಜಯ್ ಸಂಕೇಶ್ವರ್, ನಿರ್ದೇಶಕಿ ರಿಷಿಕಾ ಶರ್ಮಾ ಅವರು ತಮ್ಮ ಜೀವನಾಧಾರಿತ ಸಿನಿಮಾ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಆರಂಭದಲ್ಲಿ ಹಿಂದೇಟು ಹಾಕಿದ್ದೆ. ರಿಷಿಕಾ ಅವರ ಉತ್ತಮ ಪ್ರಯತ್ನಗಳಿಗಾಗಿ ನಾನು ಪ್ರಶಂಸಿಸುತ್ತೇನೆ. ಅವರು ಉತ್ತಮ ಸಿನಿಮಾವನ್ನು ಮಾಡಿದ್ದು ನನ್ನ ಮಗ ಆನಂದ ಸಂಕೇಶ್ವರ್ ಚಿತ್ರವನ್ನು ನಿರ್ಮಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಉದ್ಯಮಿಗಳು. ನಾನು ಸಾರಿಗೆ ಉದ್ಯಮವನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿದಾಗ ನನ್ನ ತಂದೆ ಆಘಾತಕ್ಕೊಳಾಗಿದ್ದರು ಎನ್ನುತ್ತಾರೆ.

'ಕೇವಲ ಒಂದೇ ಒಂದು ಲಾರಿಯಿಂದ ಶುರುವಾದ ನನ್ನ ಉದ್ಯಮವು ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ. ನನ್ನ ಹಿಂದಿರುವ ಶಕ್ತಿ ನನ್ನ ಪತ್ನಿ ಲಲಿತಾ. ನನ್ನ ಬದುಕಿನ ನೈಜತೆಯನ್ನು ಚಿತ್ರ ಬಿಂಬಿಸಬೇಕು ಎಂದು ನಿರ್ದೇಶಕರಿಗೆ ಹೇಳಿದ್ದೆ. ಚಿತ್ರಕ್ಕೆ ಹೆಚ್ಚುವರಿ ಏನನ್ನೂ ಸೇರಿಸಬಾರದು ಎಂದಿದ್ದೆ. ಪರದೆ ಮೇಲೆ ನಿಹಾಲ್‌ರನ್ನು ನೋಡಿದಾಗ ನನ್ನ ಸಣ್ಣ ವಯಸ್ಸಿನ ದಿನಗಳು ನೆನಪಿಗೆ ಬರುತ್ತವೆ' ಎಂದು ತಿಳಿಸಿದರು.

'ಆ ಮೀಸೆ ಮತ್ತು ಬಣ್ಣಬಣ್ಣದ ಶರ್ಟ್‌ಗಳು... ಆ ವಯಸ್ಸಿನಲ್ಲಿ ನಾನು ಹೇಗಿದ್ದೆ ಎಂಬುದನ್ನು ತೋರಿಸುತ್ತದೆ. ನಾಯಕಿ ಸಿರಿ ಪ್ರಹ್ಲಾದ್ ಕೂಡ ನನ್ನ ಹೆಂಡತಿಯನ್ನು ಹೋಲುತ್ತಾರೆ. ಈ ಚಿತ್ರ ಯುವಜನತೆಗೆ ಸ್ಪೂರ್ತಿಯಾಗಲಿ' ಎಂದರು.

ಸಿರಿ ಪ್ರಹ್ಲಾದ್ ಮತ್ತು ನಿಹಾಲ್ ಹೊರತುಪಡಿಸಿ, ವಿಜಯಾನಂದ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಭರತ್ ಬೋಪಣ್ಣ ಮತ್ತು ಅರ್ಚನಾ ಕೊಟ್ಟಿಗೆ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com