ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣ: 2018ರ ಕೇಸ್'ಗೆ ಮರುಜೀವ

ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವಿನ ಕಿತ್ತಾಟ ಕೇಸ್ ಮರುಜೀವ ಪಡೆದುಕೊಂಡಿದೆ.
ದುನಿಯಾ ವಿಜಯ್
ದುನಿಯಾ ವಿಜಯ್

ಬೆಂಗಳೂರು: ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವಿನ ಕಿತ್ತಾಟ ಕೇಸ್ ಮರುಜೀವ ಪಡೆದುಕೊಂಡಿದೆ.  

ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ನಟನನ್ನು ಬೆದರಿಸಿ ಕಾರಿಗೆ ಹಾನಿ ಮಾಡಿದ್ದಕ್ಕಾಗಿ ಜಿಮ್ ಟ್ರೈನರ್ ಸೇರಿದಂತೆ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 23, 2018 ರಂದು ವಿಜಯ್ ಮತ್ತು ಅವರ ಮಗ ಸಾಮ್ರಾಟ್ ಡಾ ಬಿಆರ್ ಅಂಬೇಡ್ಕರ್ ಭವನಕ್ಕೆ ಹೋಗಿದ್ದರು, ಅಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ವಿಜಯ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ದುನಿಯಾ ವಿಜಯ್ ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಮಾರುತಿ ಗೌಡ ಎಂಬಾತ ಕೆಲ ನಿಂದನಾತ್ಮಕ ಮಾತುಗಳನ್ನಾಡಿದ್ದಾನೆ. ಈ ವೇಳೆ ವಿಜಯ್ ಅವರು ಜೀವ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಆಕ್ರೋಶಗೊಂಡ ನಟನ ಅಭಿಮಾನಿಗಳು ಮಾರುತಿ ಗೌಡರನ್ನು ಸುತ್ತುವರೆದಿದ್ದು, ನಂತರ ವಿಜಯ್ ಅವರನ್ನು ಅವರ ಕಾರಿನಲ್ಲಿ ಕೂರಿಸಿದ್ದಾರೆ. ಆದರೆ, ಮಾರುತಿ ಗೌಡರ ಸಂಬಂಧಿ ಪಾನಿಪುರಿ ಕಿಟ್ಟಿ ತಕ್ಷಣವೇ ಹೈಗ್ರೌಂಡ್ಸ್ ಪೊಲೀಸರನ್ನು ಸಂಪರ್ಕಿಸಿ, ವಿಜಯ್ ಗೌಡನನ್ನು ಅಪಹರಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು.

ಪೊಲೀಸರು ವಿಜಯ್ ಅವರನ್ನು ಸಂಪರ್ಕಿಸಿ ಠಾಣೆಗೆ ಬರುವಂತೆ ಹೇಳುತ್ತಿದ್ದಾರೆ, ಈ ವೇಳೆ ವಿಜಯ್ ಅವರು ಮಾರುತಿ ಗೌಡ ಅವರನ್ನು ಠಾಣೆಗೆ ಕರೆತಂದಿದ್ದರು.

ವಿಜಯ್ ಅವರು ಠಾಣೆಗೆ ಪ್ರವೇಶಿಸುತ್ತಿದ್ದಂತೆಯೇ, ಕಿಟ್ಟಿ ಮತ್ತು ಅವರ ಸಹಾಯಕರು ವಿಜಯ್‌ಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅವರ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಪಹರಣದ ಆರೋಪದ ಮೇಲೆ ವಿಜಯ್ ಮತ್ತು ಇತರ ಮೂವರನ್ನು ಪೊಲೀಸರು ಬಂಧಿಸಿದ್ದರು. ನಂತರ ನಟ ಕಿಟ್ಟಿ, ಮಾರುತಿ ಗೌಡ ಮತ್ತು ಇತರರ ವಿರುದ್ಧ ಪ್ರತಿದೂರು ದಾಖಲಾಗಿತ್ತು. ಆದಾಗ್ಯೂ, ಕಿಟ್ಟಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು, ನಂತರ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಂಡಿತ್ತು.

ಇದನ್ನು ಪ್ರಶ್ನಿಸಿ ವಿಜಯ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯವು ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

 ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ನಾವು ಕಿಟ್ಟಿ, ಗೌಡ ಮತ್ತು ಇತರರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com