ರಾಜೀವ್ ಅಭಿನಯದ ಉಸಿರೇ ಉಸಿರೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್
ವಿಕ್ರಾಂತ್ ರೋಣ ಸಿನಿಮಾದ ಬಳಿಕ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಗುಡ್ ನ್ಯೂಸ್ ನೀಡಿದ್ದು, ಸಿನಿಮಾದಲ್ಲಿ ತಮ್ಮ ಮೆಚ್ಚಿನ ನಟ ಏನಾಗಿ ಕಾಣಿಸಿಕೊಳ್ಳಿಲಿದ್ದಾರೆ ಎನ್ನುವ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.
Published: 24th December 2022 11:14 AM | Last Updated: 24th December 2022 11:14 AM | A+A A-

ಉಸಿರೆ ಉಸಿರೆ ಸಿನಿಮಾ ತಂಡದೊಂದಿಗೆ ಕಿಚ್ಚ ಸುದೀಪ್
ವಿಕ್ರಾಂತ್ ರೋಣ ಸಿನಿಮಾದ ಬಳಿಕ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಗುಡ್ ನ್ಯೂಸ್ ನೀಡಿದ್ದು, ಸಿನಿಮಾದಲ್ಲಿ ತಮ್ಮ ಮೆಚ್ಚಿನ ನಟ ಏನಾಗಿ ಕಾಣಿಸಿಕೊಳ್ಳಿಲಿದ್ದಾರೆ ಎನ್ನುವ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.
ಈಮಧ್ಯೆ, ಸುದೀಪ್ ಅವರು ಸಿಸಿಎಲ್ ಪ್ಲೇಯರ್ ಹಾಗೂ ಬಿಗ್ ಬಾಸ್ ಸ್ಪರ್ಧಿ, ರಾಜೀವ್ ಅವರ ಮುಂಬರುವ ಚಿತ್ರ ಉಸಿರೆ ಉಸಿರೆಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.
ಸಿ.ಎಂ. ವಿಜಯ್ ನಿರ್ದೇಶನದ ಚಿತ್ರ ಸದ್ಯ ಅಂತಿಮ ಹಂತದ ಕೆಲಸದಲ್ಲಿದ್ದು, ಸುದೀಪ್ ಎಂಟ್ರಿಯಿಂದಾಗಿ ಚಿತ್ರತಂಡ ಖುಷಿಯಲ್ಲಿದೆ. ಆದರೆ, ಸದ್ಯಕ್ಕೆ ಸುದೀಪ್ ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ಗೊಂಬೆ ಬ್ಯಾನರ್ ಅಡಿಯಲ್ಲಿ ಪ್ರದೀಪ್ ಯಾದವ್ ಅವರ ನಿರ್ಮಾಣದ ಚಿತ್ರಕ್ಕೆ ಮನು ಅವರ ಛಾಯಾಗ್ರಹಣ ಮತ್ತು ವಿವೇಕ್ ಚಕ್ರವರ್ತಿ ಅವರ ಸಂಗೀತವಿದೆ.
ಉಸಿರೆ ಉಸಿರೆ ಸಿನಿಮಾದಲ್ಲಿ ರಾಜೀವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನಾಯಕಿಯಾಗಿ ಶ್ರೀಜಿತಾ ನಟಿಸುತ್ತಿದ್ದಾರೆ. ಇನ್ನುಳಿದಂತೆ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅಲಿ, ಬ್ರಹ್ಮಾನಂದಂ, ಸಾಧುಕೋಕಿಲಾ, ದೇವರಾಜ್, ಮಂಜು ಪಾವಗಡ, ಜಗ್ಗಪ್ಪ, ಶಿವ ಮತ್ತು ಸುಷ್ಮಿತಾ ನಟಿಸಿದ್ದಾರೆ.