ಮುಂಬಯಿ: 'ಲವ್ ರಂಜನ್' ಚಿತ್ರದ ಸೆಟ್‌ನಲ್ಲಿ ಬೆಂಕಿ, ಓರ್ವ ವ್ಯಕ್ತಿ ಸಾವು; ರಾಜಶ್ರೀ ನಿರ್ಮಾಣ ಸಂಸ್ಥೆಯ ಸೆಟ್ ಭಸ್ಮ

ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಫಿಲ್ಮ್ ಸ್ಟುಡಿಯೊದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಓರ್ವ ಸಾವನ್ನಪ್ಪಿರುವುದು ವರದಿಯಾಗಿದೆ.
ಶ್ರದ್ಧಾ ಮತ್ತು ರಣ್ಬೀರ್ ಕಪೂರ್
ಶ್ರದ್ಧಾ ಮತ್ತು ರಣ್ಬೀರ್ ಕಪೂರ್

ಮುಂಬಯಿ: ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಫಿಲ್ಮ್ ಸ್ಟುಡಿಯೊದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಓರ್ವ ಸಾವನ್ನಪ್ಪಿರುವುದು ವರದಿಯಾಗಿದೆ. ಮುಂಬೈ ಅಗ್ನಿಶಾಮಕ ದಳವು ಲಿಂಕ್ ರೋಡ್‌ನ ಸ್ಟಾರ್ ಬಜಾರ್ ಬಳಿಯ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 2 ನೇ ಹಂತದಲ್ಲಿ ಸಂಜೆ 4:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.

ಬೆಂಕಿಯ ತೀವ್ರಗೆ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದಾವಿಸಿ ಸುಮಾರು 5 ಗಂಟೆಗಳ ಕಾಲ ಬೆಂಕಿಯನ್ನು ಹತೋಟಿಗೆ ತಂದವು. ಮಾಧ್ಯಮ ವರದಿಗಳ ಪ್ರಕಾರ, ಈ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್, ರಣಬೀರ್ ಕಪೂರ್ ಅಭಿನಯದ ಲವ್ ರಂಜನ್ ನಿರ್ದೇಶನದ ಸಿನಿಮಾ ಸೆಟ್‌ಗೆ ಬೆಂಕಿ ಬಿದ್ದಿತ್ತು.

ರಣಬೀರ್ ಕಪೂರ್, ಶ್ರದ್ಧಾ ಕಪೂರ್ ಅವರು ಮುಂಬೈನಲ್ಲಿ ಈ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಬೇಕಾಗಿತ್ತು.  ಬೆಂಕಿ ಹೊತ್ತಿಕೊಂಡಾಗ ಸೆಟ್‌ನಲ್ಲಿ ದೀಪಾಲಂಕಾರ ನಡೆಯುತ್ತಿತ್ತು. ಮುಂದಿನ ವಾರದಿಂದ, ರಣಬೀರ್ ಮತ್ತು ಶ್ರದ್ಧಾ ಸೆಟ್‌ನಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಇದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ.

ಬೋನಿ ಕಪೂರ್, ಡಿಂಪಲ್ ಕಪಾಡಿಯಾ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2023 ಮಾರ್ಚ್ 8ರಂದು ಈ ಚಿತ್ರ ರಿಲೀಸ್ ಆಗಲು ಸಿದ್ಧತೆ ನಡೆಸುತ್ತಿದೆ. ಇದರ ಪಕ್ಕದಲ್ಲಿ ರಾಜಶ್ರೀ ಚಿತ್ರದ ಇನ್ನೂ ಎರಡು ಸೆಟ್‌ಗಳನ್ನು ಹಾಕಲಾಗಿತ್ತು. ಅದರಲ್ಲಿ ಒಂದಕ್ಕೆ ಬೆಂಕಿ ಹತ್ತಿಕೊಂಡಿದೆ. ಆದರೆ ಎರಡನೇ ಸೆಟ್ ಸುರಕ್ಷಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com