ಎಬಿ ಡಿವಿಲಿಯರ್ಸ್ ಭೇಟಿ ಮಾಡಿದ ರಿಷಬ್ ಶೆಟ್ಟಿ: ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಲ್ಲಿ ಕುತೂಹಲ!

ಕಾಂತಾರ ಯಶಸ್ಸಿನ ಅಲೆಯಲ್ಲಿರುವ ರಿಷಬ್ ಶೆಟ್ಟಿ ಹಾಗೂ ಕ್ರಿಕೆಟ್‌ನಲ್ಲಿ ಮಿಸ್ಟರ್ 360 ಎಂದೇ ಜನಪ್ರಿಯರಾಗಿರುವ ಸೌತ್ ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಹೊಸ ಪಂದ್ಯಕ್ಕೆ ಸಜ್ಜಾಗಿದ್ದಾರೆ.
ಎಬಿ ಡಿವಿಲಿಯರ್ಸ್ ಭೇಟಿ ಮಾಡಿದ ರಿಷಬ್ ಶೆಟ್

ಇದು ಕ್ರಿಕೆಟ್ ಅಥವಾ ಕಂಬಳವೇ ಅನ್ನೋ ಕುತೂಹಲವನ್ನು ಹೆಚ್ಚಿಸಿದೆ. ಕಾರಣ ಇಬ್ಬರು ಜೊತೆಯಾಗಿ ಕಂಬಳ ಕೋಣ ಒಡಿಸುವ ಮೊದಲು ಹೇಳುವ ಪದವನ್ನು ಹೇಳಿದ್ದಾರೆ. ಈ ಮೂಲಕ ಸಿನಿಮಾ ಕ್ಷೇತ್ರದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಜೊತೆಯಾಗಿ ಅಭಿಮಾನಿಗಳಿಗೆ ಹೊಸ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ರಿಶಬ್ ಶೆಟ್ಟಿ, ಹೊಂಬಾಳೆ ಫಿಲ್ಮ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವಿಶೇಷ ವಿಡಿಯೋ ಪೋಸ್ಟ್ ಮಾಡಿದೆ. ಈ ಪೋಸ್ಟ್ ಮೂಲಕ ಹಲವು ಕೂತಹಲಕರ ಸೂಚನೆಯನ್ನು ನೀಡಿದೆ. ಆರಂಭದಲ್ಲಿ ರಿಷಬ್ ಹಾಗೂ ಎಬಿಡಿ ಜೊತೆಯಾಗಿ ಬಿಡಿಯಾ ಎಂದಿದ್ದಾರೆ. ಬಳಿಕ ಕಾಂತಾರ ಎಂದಿದ್ದಾರೆ.

ಈ ವಿಡಿಯೋ ಪೋಸ್ಟ್ ಮಾಡಿರುವ ರಿಶಬ್ ಶೆಟ್ಟಿ, ಇದು ಪಂದ್ಯ, ನಿಜವಾದ 360ಯನ್ನು ಭೇಟಿಯಾದೆ. ಸೂಪರ್ ಹೀರೋ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಿದ್ದಾರೆ. ನಮ್ಮ ಬೆಂಗಳೂರು ಎಂದು ರಿಶಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com