ಯಾವ ನಿರೀಕ್ಷೆಗಳೂ ಇಲ್ಲದೆ ನಾನು ಸಿನಿಮಾ ರಂಗ ಪ್ರವೇಶಿಸಿದ್ದೇನೆ: ನಟಿ ರಚನಾ ಇಂದರ್
ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚನಾ ಇಂದರ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಮತ್ತು ಮೇಘಾ ಶೆಟ್ಟಿ ಕೂಡ ಇದ್ದಾರೆ.
Published: 15th November 2022 12:05 PM | Last Updated: 15th November 2022 01:09 PM | A+A A-

ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ರಚನಾ ಇಂದರ್ ಮತ್ತು ಅದಿತಿ ಪ್ರಭುದೇವ
ಲವ್ ಮಾಕ್‌ಟೇಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನಟಿ ರಚನಾ ಇಂದರ್, ಲವ್ ಮಾಕ್‌ಟೇಲ್ 2 ನಲ್ಲೂ ನಟಿಸಿದ್ದರು. 2022ರಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರರಾದರು. ಅದಾದ ಬಳಿಕ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಮತ್ತು ಮೇಘಾ ಶೆಟ್ಟಿ ಕೂಡ ಇದ್ದಾರೆ.

ಎಂಬಿಎ ವ್ಯಾಸಂಗ ಮಾಡುತ್ತಿರುವ ರಚನಾ, ಅಸೈನ್‌ಮೆಂಟ್‌ಗಳನ್ನು ಸಲ್ಲಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. 'ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತಿರುವಾಗ, ನಾನು ನನ್ನ ವ್ಯಾಸಂಗವನ್ನು ಪೂರ್ಣಗೊಳಿಸಬೇಕು ಎಂದು ನನ್ನ ಹೆತ್ತವರು ಷರತ್ತು ವಿಧಿಸಿದರು. ನಾನು ಚಲನಚಿತ್ರೇತರ ಹಿನ್ನೆಲೆಯಿಂದ ಬಂದಿರುವ ಕಾರಣ, ಅವರು ನನ್ನ ವಿದ್ಯಾಭ್ಯಾಸವನ್ನು ಬಿಟ್ಟುಕೊಡಲು ಬಯಸಲಿಲ್ಲ. ಹೀಗಾಗಿ, ನಾನು ನನ್ನ ಅಧ್ಯಯನ ಮತ್ತು ಚಲನಚಿತ್ರಗಳಲ್ಲಿ ನನ್ನ ಶೇ 100 ರಷ್ಟು ಶ್ರಮವನ್ನು ನೀಡುತ್ತಿದ್ದೇನೆ' ಎನ್ನುತ್ತಾರೆ.
'ನಾನು ಶೂನ್ಯ ನಿರೀಕ್ಷೆಯೊಂದಿಗೆ ಚಿತ್ರರಂಗಕ್ಕೆ ಪ್ರವೇಶಿಸಿದ್ದೇನೆ. ಆದರೆ, ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ಖುಷಿಯಾಗಿದೆ. ಕೃಷ್ಣ ಮತ್ತು ರಿಷಬ್ ಶೆಟ್ಟಿ ಅವರಂತಹ ನಟರ ಜೊತೆಯಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ಸಂತೋಷವಾಗಿದೆ. ಶಶಾಂಕ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಸೋಲೋ ಹೀರೋಯಿನ್ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ಕಾಣಿಸಿಕೊಳ್ಳುತ್ತಿದ್ದೇನೆ' ಎನ್ನುತ್ತಾರೆ ರಚನಾ.
ಇದನ್ನೂ ಓದಿ: ಮೂವರು ನಾಯಕಿಯರೊಂದಿಗೆ ಗೋಲ್ಡನ್ ಸ್ಟಾರ್ 'ತ್ರಿಬಲ್ ರೈಡಿಂಗ್'; ಯಟ್ಟಾ ಯಟ್ಟಾ ಹಾಡಿಗೆ ಭರ್ಜರಿ ರೆಸ್ಪಾನ್ಸ್
'ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣದಲ್ಲಿ ಲವ್ ಮಾಕ್‌ಟೇಲ್ ನಂತರ ಪಾಲ್ಗೊಂಡೆ. ಯಾವುದೇ ಅಭ್ಯಾಸವಿಲ್ಲದೆ ಕ್ಷೇತ್ರಕ್ಕೆ ಬಂದಿದ್ದರಿಂದ ಆರಂಭದಲ್ಲಿ ಅವರು ಸ್ಥಳದಲ್ಲೇ ಡೈಲಾಗ್‌ಗಳನ್ನು ನೀಡುತ್ತಿದ್ದರಿಂದ ಭಯಭೀತಗೊಂಡಿದ್ದೆ. ಗಣೇಶ್ ಮತ್ತು ರಂಗಾಯಣ ರಘು ಅವರೊಂದಿಗೆ ನಟಿಸುತ್ತಿರುವುದು ಇದೇ ಮೊದಲು. ನನಗಿನ್ನು ಸ್ಟೇಜ್ ಫಿಯರ್ ಇರುವುದರಿಂದ, ನನ್ನ ಸುತ್ತಲೂ ಜನರಿದ್ದಾಗ ನಾನು ಕಾನ್ಶಿಯಸ್ ಆಗುತ್ತೇನೆ. ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದಾರೆ ಎಂದು ನಾನು ಭಾವಿಸಿದೆ ಮತ್ತು ನಾನು ಒಂದು ನಿಮಿಷ ಬ್ಲಾಂಕ್ ಆಗುತ್ತಿದ್ದೆ. ಆದರೆ, ದಿನಕಳೆದಂತೆ ನಾನು ಕಂಫರ್ಟ್ ಆಗಿದ್ದೇನೆ' ಎಂದು ಚಿತ್ರದಲ್ಲಿ ರಾಧಿಕಾ ಎಂಬ ಧೈರ್ಯಶಾಲಿ ಯುವತಿಯ ಪಾತ್ರದಲ್ಲಿ ನಟಿಸಿರುವ ರಚನಾ ಹೇಳುತ್ತಾರೆ.
ಲವ್ 360 ಹೊರತುಪಡಿಸಿ, ಇತರೆ ಸಿನಿಮಾಗಳಲ್ಲಿ ಮಲ್ಟಿಸ್ಟಾರ್‌ಗಳ ಜೊತೆ ನಟಿಸಿರುವ ರಚನಾ, 'ತ್ರಿಬಲ್ ರೈಡಿಂಗ್‌ನಲ್ಲಿ ದೊಡ್ಡ ತಾರಾಗಣವಿದ್ದರೂ, ನಾನು ಬಹಳ ಮಹತ್ವದ ಪಾತ್ರವನ್ನು ನಿರ್ವಹಿಸುತ್ತೇನೆ. ನನ್ನ ಎಲ್ಲಾ ದೃಶ್ಯಗಳು ಗೋಲ್ಡನ್ ಸ್ಟಾರ್ ಜೊತೆಯಲ್ಲಿವೆ. ಗಣೇಶ್ ಅವರು ಯಾವಾಗಲೂ ನಗುಮುಖದಲ್ಲಿರುತ್ತಾರೆ' ಎಂದು ಹೇಳುತ್ತಾರೆ.
ಇದನ್ನೂ ಓದಿ: 'ಲವ್ 360' ಸಿನಿಮಾದಲ್ಲಿ ನನ್ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ನನಗೆ ಸಮಯ ಹಿಡಿಯಿತು: ನಟಿ ರಚನಾ ಇಂದರ್
'ಅವರು ಯಾವಾಗಲೂ ಸೆಟ್‌ಗಳಲ್ಲಿ ಹಗುರವಾದ ವಾತಾವರಣವನ್ನು ಸೃಷ್ಟಿಸುತ್ತಾರೆ ಮತ್ತು ಇದು ನನ್ನಂತಹ ಮುಂಬರುವ ಪ್ರತಿಭೆಗಳಿಗೆ ತುಂಬಾ ಸಹಕಾರಿ. ಒಂದು ವೇಳೆ ನಾನು ಹಲವು ಟೇಕ್‌ಗಳನ್ನು ತೆಗೆದುಕೊಂಡರೂ, ಅವರು ಬೇಜಾರಾಗುವುದಿಲ್ಲ, ಕಿರಿಕಿರಿ ಅಥವಾ ಕೋಪಗೊಳ್ಳುವುದನ್ನು ನಾನು ಎಂದಿಗೂ ನೋಡಿಯೇ ಇಲ್ಲ. ಹೀಗಾಗಿ, ನಾನು ಅವರಿಗೆ ಕೃತಜ್ಞಳಾಗಿರುತ್ತೇನೆ' ಎನ್ನುತ್ತಾರೆ ರಚನಾ.