ಸಮಂತಾ ನಟನೆಯ ಯಶೋದಾ ಬಾಕ್ಸ್ ಆಫೀಸ್ ಕಲೆಕ್ಷನ್; ಉತ್ತಮ ಆರಂಭ, 8ನೇ ದಿನಕ್ಕೆ ಕೋಟಿ ಗಳಿಸಲು ಹೆಣಗಾಟ
ನಟಿ ಸಮಂತಾ ರುತ್ ಪ್ರಭು ಅಭಿಯನದ ಯಶೋದಾ ಚಿತ್ರವು ಬಿಡುಗಡೆಯಾದಾಗಿನಿಂದಲೂ ಗಲ್ಲಾಪೆಟ್ಟಿಯಲ್ಲಿ ಉತ್ತಮ ಆರಂಭವನ್ನು ಹೊಂದಿತ್ತು. ಹರಿ-ಹರೀಶ್ ಜೋಡಿಯ ನಿರ್ದೇಶನದ ವೈದ್ಯಕೀಯ ಥ್ರಿಲ್ಲರ್, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿಯೇ 20 ಕೋಟಿ ರೂ. ಕಲೆಕ್ಷನ್ ಮಾಡಿದೆ.
Published: 20th November 2022 04:02 PM | Last Updated: 20th November 2022 04:02 PM | A+A A-

ಯಶೋದಾ ಸಿನಿಮಾದ ಪೋಸ್ಟರ್
ನಟಿ ಸಮಂತಾ ರುತ್ ಪ್ರಭು ಅಭಿಯನದ ಯಶೋದಾ ಚಿತ್ರವು ಬಿಡುಗಡೆಯಾದಾಗಿನಿಂದಲೂ ಗಲ್ಲಾಪೆಟ್ಟಿಯಲ್ಲಿ ಉತ್ತಮ ಆರಂಭವನ್ನು ಹೊಂದಿತ್ತು. ಹರಿ-ಹರೀಶ್ ಜೋಡಿಯ ನಿರ್ದೇಶನದ ವೈದ್ಯಕೀಯ ಥ್ರಿಲ್ಲರ್, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿಯೇ 20 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದಾದ ಬಳಿಕ ಗಲ್ಲಾಪೆಟ್ಟಿಗೆಯಲ್ಲಿ ತನ್ನ ವೇಗವನ್ನು ಕಳೆದುಕೊಂಡು, 8ನೇ ದಿನದಲ್ಲಿ ಕೋಟಿ ಗಳಿಸಲು ಹೆಣಗಾಡುತ್ತಿದೆ. ಯಶೋದಾ ಇದೀಗ 30 ಕೋಟಿ ರೂ. ಗಳಿಕೆಯ ಸಮೀಪದಲ್ಲಿದೆ.
ಒಂದು ಅಂದಾಜಿನ ಪ್ರಕಾರ, ಬಿಡುಗಡೆಯಾದ 8ನೇ ದಿನದಲ್ಲಿ ಚಿತ್ರವು 65-70 ಕೋಟಿ ರೂ. ಗಳಿಸಿದೆ. ಕಳೆದೆರಡು ದಿನಗಳಿಂದ ಚಿತ್ರವು 1 ಕೋಟಿ ರೂ. ಗಳಿಸಲು ಕೂಡ ಪರದಾಡುವಂತಾಗಿದೆ. ತೆಲುಗು ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆಯನ್ನು ಕಂಡ ಚಿತ್ರ ಇತರೆಡೆಯಲ್ಲಿ ಗಮನ ಸೆಳೆಯುವಲ್ಲಿ ವಿಫಲವಾಯಿತು.
ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಅವರ ಪ್ರಕಾರ, ಚಿತ್ರವು ನಿಧಾನಗತಿಯಲ್ಲಿ ಸಾಗುತ್ತಿರುವುದರ ಹೊರತಾಗಿಯೂ, ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಿದ ಕಾರಣ ಯಶಸ್ವಿಯಾಗುತ್ತದೆ.
ಇದನ್ನೂ ಓದಿ: 'ಯಶೋದಾ' ಸಿನಿಮಾ ಯಶಸ್ಸು: ನಾನು ಕ್ಲೌಡ್ ನೈನ್‌ನಲ್ಲಿ ಇದ್ದೇನೆ ಎಂದ ನಟಿ ಸಮಂತಾ
ಯಶೋದಾ ಚಿತ್ರವು ನವೆಂಬರ್ 11 ರಂದು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಯಿತು. ಇದೇ ವೇಳೆ ನಟ ಅಮಿತಾಬ್ ಬಚ್ಚನ್ ಅವರ ಉಂಚೈ ಮತ್ತು ಹಾಲಿವುಡ್ ಚಿತ್ರ 'ಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್' ಚಿತ್ರಗಳು ಬಿಡುಗಡೆಯಾಗಿದ್ದವು.
ಯಶೋದಾ ಸಿನಿಮಾ ವೈದ್ಯಕೀಯ ಥ್ರಿಲ್ಲರ್ ಆಗಿದ್ದು, ಪಾತ್ರವು ಮಹಿಳೆಯರನ್ನು ಬಾಡಿಗೆ ತಾಯ್ತನಕ್ಕೆ ಬಳಸಿಕೊಳ್ಳುವ ಮತ್ತು ಬಲವಂತ ಮಾಡುವ ಮಾಫಿಯಾವನ್ನು ತೋರಿಸುತ್ತದೆ. ಚಿತ್ರದಲ್ಲಿ ಸಮಂತಾ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.