ಲವ್ ಜಿಹಾದ್ ಆರೋಪ: ಗಂಡನ ಕಿರುಕುಳದ ಕ್ರೌರ್ಯದ ಬಗ್ಗೆ ಹೇಳಿಕೊಂಡ ಕನ್ನಡದ ಕಿರುತೆರೆ ನಟಿ!
ಇತ್ತೀಚೆಗಷ್ಟೇ ತಾವು ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಸ್ಯಾಂಡಲ್ ವುಡ್ ನಟಿ ಹಾಗೂ ಕಿರುತೆರೆ ನಟಿ ದಿವ್ಯಾ ಶ್ರೀಧರ್ ತಮ್ಮ ಗಂಡನಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ.
Published: 06th October 2022 06:54 PM | Last Updated: 07th October 2022 01:48 PM | A+A A-

ಅಮ್ಜದ್ ಖಾನ್-ದಿವ್ಯಾ ಶ್ರೀಧರ್
ಇತ್ತೀಚೆಗಷ್ಟೇ ತಾವು ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಸ್ಯಾಂಡಲ್ ವುಡ್ ನಟಿ ಹಾಗೂ ಕಿರುತೆರೆ ನಟಿ ದಿವ್ಯಾ ಶ್ರೀಧರ್ ತಮ್ಮ ಗಂಡನಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ.
ಗಂಡನಿಂದ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿವ್ಯಾ ಅವರು ಪತಿ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ವಿರುದ್ಧ ವಿಡಿಯೋ ಮಾಡಿದ್ದಾರೆ.
ವಿಡಿಯೋದಲ್ಲಿ ದಿವ್ಯಾ, ನಾನು ಮತ್ತು ಅಮ್ಜದ್ ಖಾನ್ ಇತ್ತೀಚೆಗೆ ಮದುವೆಯಾಗಿದ್ದೇವು. 2017ರಿಂದಲೂ ನಾವಿಬ್ಬರು ಲಿವಿಂಗ್ ಟು ಗೆದರ್ ನಲ್ಲಿದ್ದೇವು. 5 ವರ್ಷದಿಂದ ಜೊತೆಗಿದ್ದೇವೆ. ಸ್ವಂತ ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಅವನಿಗೆ ಏನು ಕೆಲಸ ಇರಲಿಲ್ಲ. ಇಂತಹ ಸಮಯದಲ್ಲೂ 30 ಲಕ್ಷ ಲೋನ್ ಮಾಡಿ, 30 ಸಾವಿರದಂತೆ ಸಾಲ ಕಟ್ಟಿದ್ದೇನೆ. ಅವನಿಗೆ ಒಂಚೂರು ಕಮ್ಮಿಯಾದಗಂತೆ ನೋಡಿಕೊಂಡರೂ ಅವನಿಂದಲೇ ಈಗ ಕಿರುಕುಳ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಅನ್ಯಜಾತಿ ಯುವಕನೊಂದಿಗೆ ಮಗಳು ಪರಾರಿ; ಮರ್ಯಾದೆಗೆ ಅಂಜಿ ಕುಟುಂಬದ ಮೂವರು ಆತ್ಮಹತ್ಯೆ
ಆತ ನನ್ನ ಹೊಟ್ಟೆಗೆ ಒದಿದ್ದು ತೀವ್ರ ನೋವಿನಿಂದ ಕೆಳಗೆ ಬಿದ್ದೆ. ಆಗ ಆತ ನನ್ನ ಕೈಕಾಲುಗಳನ್ನೆಲ್ಲಾ ತುಳಿದ ಇದು ವಿಪರೀತ ನೋವು ಕೊಟ್ಟಿದು. ನಂತರ ನಾನು ಲೋ ಬಿಪಿಯಾಗಿ ಅಸ್ವಸ್ಥಳಾದೆ. ಕೆಲ ಸಮಯದ ನಂತರ ನನಗೆ ಪ್ರಜ್ಞೆ ಬಂದಿತ್ತು. ಆತ ಮನೆಯಲ್ಲೇ ಇದ್ದರೂ ನನ್ನ ಬಳಿ ಬಂದು ನೋಡಲಿಲ್ಲ. ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ಆಯ್ತು. ಆಗ ಆತನಿಗೆ ಕರೆ ಮಾಡಿದೆ. ಅವನು ಬೇರೆ ಅಪಾರ್ಟ್‍ಮೆಂಟ್‍ನಲ್ಲಿ ಇದ್ದಾನೆ ಎಂದು ಹೇಳಿದರು ಎಂದು ದಿವ್ಯಾ ಶ್ರೀಧರ್ ಅಲವತ್ತುಗೊಂಡಿದ್ದಾರೆ. ಇನ್ನು ನಾನು ಗರ್ಭೀಣಿಯಾಗಿದ್ದು ಇದರಿಂದ ಗರ್ಭಪಾತವಾಗಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ನಟಿ ಹೇಳಿದ್ದಾರೆ.
ಕನ್ನಡದ ವಿಚಿತ್ರ ಪ್ರೇಮಿ, ಹುಚ್ಚುಡುಗಿ, ಹೀಗೂ ಉಂಟಾ, ಸಾಚಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು ದಿವ್ಯಾ ಆಕಾಶ ದೀಪ ಧಾರಾವಾಹಿಯ ಮೂಲಕ ಜನಮನ್ನಣೆ ಗಳಿಸಿದ್ದರು. ಸದ್ಯ ಆಕೆ ತಮಿಳಿನ ಧಾರಾವಾಹಿವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.