ಹೆಡ್ ಬುಷ್ ಸಿನಿಮಾದಲ್ಲಿನ ನನ್ನ ಪಾತ್ರ ನನ್ನ ವೃತ್ತಿಜೀವನದ ಮೈಲಿಗಲ್ಲು: ನಟ ಯೋಗಿ

ವಿಜಯ್ ಅಭಿನಯದ ದುನಿಯಾ ಚಿತ್ರದ ಮೂಲಕ ಲೂಸ್ ಮಾದ ಎಂದೇ ಹೆಸರಾದ ನಟ ಯೋಗಿ, ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಇದೀಗ ಹೆಡ್ ಬುಷ್‌ ಸಿನಿಮಾದಲ್ಲಿ ನಟಿಸಿದ್ದು, ಗಂಗಾ ಪಾತ್ರವು ತನ್ನ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ತಿಳಿಸಿದ್ದಾರೆ.
ಹೆಡ್ ಬುಷ್ ಚಿತ್ರದ ಪೋಸ್ಟರ್
ಹೆಡ್ ಬುಷ್ ಚಿತ್ರದ ಪೋಸ್ಟರ್
Updated on

ವಿಜಯ್ ಅಭಿನಯದ ದುನಿಯಾ ಚಿತ್ರದ ಮೂಲಕ ಲೂಸ್ ಮಾದ ಎಂದೇ ಹೆಸರಾದ ನಟ ಯೋಗಿ, ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಇದೀಗ ಹೆಡ್ ಬುಷ್‌ ಸಿನಿಮಾದಲ್ಲಿ ನಟಿಸಿದ್ದು, ಗಂಗಾ ಪಾತ್ರವು ತನ್ನ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ತಿಳಿಸಿದ್ದಾರೆ.

'ಹೆಡ್ ಬುಷ್ ಸಿನಿಮಾದಲ್ಲಿನ ಗಂಗಾ ಪಾತ್ರವು ನನಗೆ ಇಲ್ಲಿಯವರೆಗೆ ಸಿಕ್ಕಿರುವ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ನನ್ನನ್ನು ಸಾಮಾನ್ಯವಾಗಿ ಲೂಸ್ ಮಾದ ಎಂದು ಸಂಬೋಧಿಸುವ ಜನರು, ಹೆಡ್ ಬುಷ್ ನಂತರ ನನ್ನನ್ನು ಗಂಗಾ ಎಂದು ಕರೆಯಲು ಪ್ರಾರಂಭಿಸುತ್ತಾರೆ' ಎಂದು ಯೋಗಿ ಹೇಳುತ್ತಾರೆ.

ಅಕ್ಟೋಬರ್ 21 ರಂದು ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಮಾತನಾಡಿದ ಯೋಗಿ, ಕೆಲ ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವಾಗ ನನ್ನ ದೃಷ್ಟಿಕೋನ ಮತ್ತು ಚಿಂತನೆಯ ಪ್ರಕ್ರಿಯೆಯು ಬದಲಾಗಿದೆ. 'ನಟರಾಗಿದ್ದಾಗ ನಾವು ಯಾವುದೇ ಪಾತ್ರವಾದರೂ ಅದಕ್ಕೆ ಹೊಂದಿಕೊಳ್ಳಲು ಅವಕಾಶವಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆದರೆ, ಅದು ನಾಯಕನ ಪಾತ್ರದಲ್ಲಿ ನಟಿಸುವಾಗ ಆಗುವುದಿಲ್ಲ. ಹಾಗಾಗಿ, ಈಗ ಹೀರೋ ಆಗುವುದಕ್ಕಿಂತ ಒಳ್ಳೆಯ ಪಾತ್ರಗಳತ್ತ ಗಮನ ಹರಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಯೋಗಿ.

ನಟ ಯೋಗಿ
ನಟ ಯೋಗಿ

'ಪ್ರತಿ ಚಿತ್ರವು ವಿಭಿನ್ನ ಅವಕಾಶಗಳನ್ನು ನೀಡುತ್ತದೆ ಮತ್ತು ನಾಯಕನ ಪಾತ್ರಗಳಲ್ಲಿ ನಟಿಸಲು ಕೂಡ ನಾನು ಹಿಂಜರಿಯುವುದಿಲ್ಲ. ವಾಸ್ತವವಾಗಿ, ನಾನು ಕಂಸ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡುತ್ತಿದ್ದೇನೆ. ಅದನ್ನು ನಾನೇ ನಿರ್ಮಾಣ ಮಾಡುತ್ತಿದ್ದೇನೆ ಎನ್ನುವ ಅವರು, ನಿರ್ಣಾಯಕ ಪಾತ್ರಗಳಲ್ಲಿ ನಟಿಸಲು ಏಕೆ ಬಹಳ ಸಮಯ ತೆಗೆದುಕೊಂಡಿತು ಎಂದು ಕೇಳಿದಾಗ, 'ಅದು ಯಾವಾಗಲೂ ಚಲನಚಿತ್ರ ನಿರ್ಮಾಪಕರ ಕರೆಯಾಗಿರುತ್ತದೆ. ನನಗೆ ಒಂದು ಪಾತ್ರದಲ್ಲಿ ನಟಿಸುವ ಸಾಮರ್ಥ್ಯವಿದೆ ಎಂದು ನಿರ್ದೇಶಕರೇ ನಂಬಬೇಕು' ಎಂದು ಹೇಳುತ್ತಾರೆ.

ಧನಂಜಯ್ ಮತ್ತು ನಿರ್ದೇಶಕ ಶೂನ್ಯ ಅವರು ಮೊದಲು ನಾನು ಈ ಪಾತ್ರವನ್ನು ನಿಭಾಯಿಸಬಹುದು ಎಂದು ಭಾವಿಸಿದ್ದರು ಮತ್ತು ನಾನು ಈ ಪಾತ್ರಕ್ಕೆ ಹೊಂದಿಕೊಳ್ಳುತ್ತೇನೆ ಎಂಬುದು ನನಗೆ ಖುಷಿಯ ವಿಚಾರಯಾಗಿದೆ. ಉತ್ತಮ ಗ್ಯಾಂಗ್‌ಸ್ಟರ್ ಚಿತ್ರವು ಕೇವಲ ನಾಯಕ ಮತ್ತು ನಾಯಕಿಯ ಬಗ್ಗೆ ಇರಬಾರದು, ಚಿತ್ರದ ಪ್ರತಿಯೊಂದು ಪಾತ್ರವೂ ಮುಖ್ಯವಾಗಿರಬೇಕು. ಹೆಡ್ ಬುಷ್ ಖಂಡಿತವಾಗಿಯೂ ಅಂತಹ ಸಿನಿಮಾಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ ಯೋಗಿ.

ಗಂಗಾ ಧೈರ್ಯಶಾಲಿ, ಮೊಂಡ, ನೇರ ಮತ್ತು ಜಯರಾಜ್ (ಧನಂಜಯ್ ನಿರ್ವಹಿಸಿರುವ ಪಾತ್ರ) ಅವರ ಆತ್ಮೀಯ ಸ್ನೇಹಿತ. ಇಬ್ಬರೂ ಒಬ್ಬರಿಗೊಬ್ಬರು ನಿಲ್ಲುತ್ತಾರೆ ಮತ್ತು ಅವರ ಸಮೀಕರಣವು ಹೆಡ್ ಬುಷ್‌ನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಹೆಡ್ ಬುಷ್ ಅಗ್ನಿ ಶ್ರೀಧರ್ ಅವರ ಆತ್ಮಕಥೆಯಾದ 'ಮೈ ಡೇಸ್ ಇನ್ ದಿ ಅಂಡರ್‌ವರ್ಲ್ಡ್' ಅನ್ನು ಆಧರಿಸಿದ್ದು, ನಾನು ಅವರ ಅಭಿಮಾನಿಯಾಗಿದ್ದೇನೆ ಮತ್ತು ಅವರ ಪುಸ್ತಕವನ್ನು ಓದಿರುವುದು ಮಾತ್ರವಲ್ಲದೆ, ಅವರ ಸಾಕಷ್ಟು ಸಂದರ್ಶನಗಳನ್ನು ಸಹ ನೋಡಿದ್ದೇನೆ ಎಂದು ಹೇಳುತ್ತಾರೆ.

'ಮೇಲಾಗಿ ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಬೆಳೆಯುತ್ತಲೇ ಅಂಡರ್‌ವರ್ಲ್ಡ್‌ ಬಗ್ಗೆ ಕೇಳಿದ್ದೇನೆ, ನೋಡಿದ್ದೇನೆ. ನಾನು ಖಂಡಿತವಾಗಿಯೂ ಈ ವಿಷಯಕ್ಕೆ ಸಂಬಂಧಿಸಬಲ್ಲೆ. ನಟ ಮತ್ತು ನಿರ್ಮಾಪಕರಾಗಿ ಧನಂಜಯ್ ಅವರು ತಮ್ಮ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ಅವರು ಈ ದೊಡ್ಡ ಸಾಹಸದಲ್ಲಿ ಯಶಸ್ವಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅವರಿಗೆ ಯಾವಾಗಲೂ ನನ್ನ ಬೆಂಬಲವಿರುತ್ತದೆ' ಎಂದು ಯೋಗಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com