ಕಾಂತಾರ ದಾಖಲೆ: 100 ಕೋಟಿ ರೂ. ಕ್ಲಬ್ ಸೇರಿದ 6ನೇ ಕನ್ನಡದ ಚಿತ್ರ; ಇಲ್ಲಿದೆ ಪಟ್ಟಿ!

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆಗಳು ಪಡೆದಿತ್ತು. ಇನ್ನು ಕಳೆದ ವಾರ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡಿದ್ದ ಕಾಂತಾರ ಅದ್ಭುತ ಓಪನ್ ಪಡೆದಿದೆ. 
ಕಾಂತಾರ ಚಿತ್ರದ ಸ್ಟಿಲ್
ಕಾಂತಾರ ಚಿತ್ರದ ಸ್ಟಿಲ್

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆಗಳು ಪಡೆದಿತ್ತು. ಇನ್ನು ಕಳೆದ ವಾರ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡಿದ್ದ ಕಾಂತಾರ ಅದ್ಭುತ ಓಪನ್ ಪಡೆದಿದೆ. 

ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾಂತಾರ ಇದೀಗ ವಿಶ್ವದಾದ್ಯಂತ 119 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದ 6ನೇ ಕನ್ನಡ ಚಿತ್ರವಾಗಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಹಾಲ್‌ಗಳು ಇನ್ನೂ ತುಂಬಿ ತುಳುಕುತ್ತಿದೆ. ಇದರ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ಚಿತ್ರದ ಕಲೆಕ್ಷನ್ ಮತ್ತಷ್ಟು ಜಾಸ್ತಿಯಾಗಲಿದೆ. ಇನ್ನು ಕಳೆದ ಶನಿವಾರ 14 ಕೋಟಿ ಹಾಗೂ ಭಾನುವಾರ 18 ಕೋಟಿ ಕಲೆಕ್ಷನ್ ಮಾಡಿದೆ.

ವಿಶ್ವಾದ್ಯಂತ ₹1207 ಕೋಟಿ ಗಳಿಸುವ ಮೂಲಕ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಕೆಜಿಎಫ್ 1 ಚಿತ್ರ 250 ಕೋಟಿ ಸಂಗ್ರಹದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ₹ 159 ಕೋಟಿ, ಜೇಮ್ಸ್ (₹ 151 ಕೋಟಿ) ಮತ್ತು 777 ಚಾರ್ಲಿ ( ₹ 105 ಕೋಟಿ) ನಂತರದ ಸ್ಥಾನದಲ್ಲಿದೆ. 

ಕಾಂತಾರ ಹೊಗಳಿದ ಸೆಲೆಬ್ರಿಟಿಗಳು!
ಸಿನಿಮಾಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ವಿಲಕ್ಷಣವಾಗಿ, ವಿಚಿತ್ರವಾಗಿ, ಹಲವು ಬಾರಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಸುದ್ದಿಯಾಗುತ್ತಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ. ಈಗ ಎಲ್ಲಿ ನೋಡಿದರಲ್ಲಿ ಅಪ್ಪಟ ಕನ್ನಡದಲ್ಲಿ ತೆರೆಕಂಡು ನಂತರ ಪ್ಯಾನ್ ಇಂಡಿಯಾದಲ್ಲಿ ಡಬ್ ಆಗಿ ಅಲ್ಲಿ ಕೂಡ ಜನಪ್ರಿಯತೆ ಕಂಡು ಭರ್ಜರಿ ಪ್ರದರ್ಶನ ನೀಡಿ ಯಶಸ್ಸಿನಲ್ಲಿ ಬೀಗುತ್ತಿರುವ ಕರಾವಳಿ ಮೂಲದ ಕಥೆ ಕಾಂತಾರ ಚಿತ್ರದ್ದೇ ಸದ್ದು, ಸುದ್ದಿ. ಈ ಚಿತ್ರವನ್ನು ಜನಸಾಮಾನ್ಯರು ಮಾತ್ರವಲ್ಲದೆ ಭಾಷೆ, ಗಡಿಯನ್ನು ಮೀರಿ ಸಿನಿಮಾ ಕಲಾವಿದರು, ನಿರ್ದೇಶಕರು ನೋಡಿ ಮೆಚ್ಚಿದ್ದಾರೆ. ನಾಲ್ಕು ಮೆಚ್ಚುಗೆಯ ನುಡಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com