ಪ್ರಕಾಶ್ ರೈ ಕನಸಿನ 'ಅಪ್ಪು ಆಂಬ್ಯುಲೆನ್ಸ್ 'ಸೇವೆಗೆ ರಾಕಿಂಗ್ ಸ್ಟಾರ್ ಯಶ್ ಸಾಥ್ 

ಅಪ್ಪು ಹೆಸರಿನ ಆಂಬ್ಯುಲೆನ್ಸ್ ರಾಜ್ಯದಲ್ಲಿ ಓಡಾಡಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಕಾಶ್ ರೈ, ನಾವು ಪ್ರತಿದಿನ ಅಪ್ಪು ಜೀವಂತಿಕೆಯನ್ನು ನೋಡಬೇಕು, ಅಪ್ಪು ಹೆಸರಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಓಡಾಡಬೇಕು ಎಂದರು.
ನಟರಾದ ಶಿವಣ್ಣ, ಪ್ರಕಾಶ್ ರೈ, ರಾಘಣ್ಣ, ಯಶ್
ನಟರಾದ ಶಿವಣ್ಣ, ಪ್ರಕಾಶ್ ರೈ, ರಾಘಣ್ಣ, ಯಶ್

ಬೆಂಗಳೂರು: ಅಪ್ಪು ಹೆಸರಿನ ಆಂಬ್ಯುಲೆನ್ಸ್ ರಾಜ್ಯದಲ್ಲಿ ಓಡಾಡಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಕಾಶ್ ರೈ, ನಾವು ಪ್ರತಿದಿನ ಅಪ್ಪು ಜೀವಂತಿಕೆಯನ್ನು ನೋಡಬೇಕು, ಅಪ್ಪು ಹೆಸರಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಓಡಾಡಬೇಕು ಎಂದರು.

ನನ್ನ ಕನಸಿನ ಯೋಜನೆ ಬಗ್ಗೆ ಹೇಳಿದಾಗ ಶಿವರಾಜ್ ಕುಮಾರ್, ಗೀತಾ ಕಣ್ತುಂಬಿಕೊಂಡರು. ಮೊದಲನೆಯದಾಗಿ ಮೈಸೂರಿನಲ್ಲಿ ಆಂಬ್ಯುಲೆನ್ಸ್ ಸೇವೆ ಆರಂಭಿಸಿದೆ. ಈ ವಿಚಾರ ತಿಳಿದು ನಟರಾದ ಸೂರ್ಯ, ಚಿರಂಜೀವಿ ಕೈ ಜೋಡಿಸುವುದಾಗಿ ಹೇಳಿದರು. ನಾವು ಕೂಡಾ ಒಂದೊಂದು ಆಂಬ್ಯುಲೆನ್ಸ್ ನೀಡುವುದಾಗಿ ಹೇಳಿದರು. ಹಲವು ಮಂದಿ ಈ ಯೋಜನೆಗೆ ಕೈ ಜೋಡಿಸಿರುವುದಾಗಿ ತಿಳಿಸಿದರು.

ಅಪ್ಪು ಇದ್ದಿದ್ದರೆ 'ಕಾಂತಾರಾ' ಅನ್ನುತ್ತಿದ್ದರು, ಚಿತ್ರರಂಗಕ್ಕೆ ಬರುವ ಹೊಸಬರನ್ನು ಸ್ವಾಗತಿಸುತ್ತಿದ್ದರು. ಕಾಡು ಸುತ್ತುವುದು ಸಾಮಾನ್ಯ ಕೆಲಸವಲ್ಲ. ಗುಂಡಿಗೆ ಬೇಕು, ಹೆಜ್ಜೆ ಹೆಜ್ಜೆಗೂ ನಿಗೂಢತೆ ಇರುವ ಗಂಧದ ಗುಡಿ ತೋರಿಸಿದ್ದಕ್ಕೆ ಧನ್ಯವಾದ ಎಂದರು.

ನಂತರ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಪ್ರಕಾಶ್ ರೈ ಅವರ ಅಪ್ಪು ಹೆಸರಿನ ಆಂಬ್ಯುಲೆನ್ಸ್ ಸೇವೆಗೆ ಕೈ ಜೋಡಿಸುವುದಾಗಿ ಹೇಳಿದರು.  ಗಂಧದ ಗುಡಿ ಚಿತ್ರವನ್ನು ಪ್ರತಿಯೊಬ್ಬರು ವೀಕ್ಷಿಸುವ ಮೂಲಕ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಬೇಕು ಎಂದರು.

ತಮಿಳು ನಟ ಸೂರ್ಯ ಮಾತನಾಡಿ, ಶುದ್ದವಾದ ಹೃದಯ ಇದ್ದವರು ಮಾತ್ರ ಗಂಧದ ಗುಡಿ ಚಿತ್ರ ಮಾಡಲು ಸಾಧ್ಯ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com