ತಮಿಳಿನ ಖ್ಯಾತ ನಟ ಜಯಂ ರವಿಗೆ ಕೋವಿಡ್ ಪಾಸಿಟಿವ್, ಚಿತ್ರರಂಗದ ಹಲವರಲ್ಲಿ ತಳಮಳ
ನಿರ್ದೇಶಕ ಮಣಿರತ್ನಂ ಅವರ ಬ್ಲಾಕ್‌ಬಸ್ಟರ್ ಹಿಟ್ 'ಪೊನ್ನಿಯಿನ್ ಸೆಲ್ವನ್ 1' ನಲ್ಲಿ ಅರುಣ್ಮೋಳಿ ವರ್ಮನ್ ಪಾತ್ರವನ್ನು ನಿರ್ವಹಿಸಿದ್ದ ನಟ ಜಯಂ ರವಿ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
Published: 22nd October 2022 11:38 AM | Last Updated: 22nd October 2022 01:36 PM | A+A A-

ನಟ ಜಯಂ ರವಿ
ಚೆನ್ನೈ: ನಿರ್ದೇಶಕ ಮಣಿರತ್ನಂ ಅವರ ಬ್ಲಾಕ್‌ಬಸ್ಟರ್ ಹಿಟ್ 'ಪೊನ್ನಿಯಿನ್ ಸೆಲ್ವನ್ 1' ನಲ್ಲಿ ಅರುಣ್ಮೋಳಿ ವರ್ಮನ್ ಪಾತ್ರವನ್ನು ನಿರ್ವಹಿಸಿದ್ದ ನಟ ಜಯಂ ರವಿ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಜಯಂ ರವಿ, 'ಇಂದು ಸಂಜೆ ನನಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ನಾನು ತಕ್ಷಣವೇ ಪ್ರತ್ಯೇಕವಾಸದಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಅಗತ್ಯವಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಮಾಸ್ಕ್. ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ! ದೇವರ ಆಶೀರ್ವಾದವಿರಲಿ' ಎಂದಿದ್ದಾರೆ.
Earlier this evening I tested positive for Covid-19. Following all protocols, I have immediately isolated myself. I sincerely request all those that have come in contact with me to get themselves tested if necessary. Mask up. Stay safe! God bless.
— Jayam Ravi (@actor_jayamravi) October 21, 2022
ಹಲವಾರು ಸೆಲೆಬ್ರಿಟಿಗಳು ರವಿ ಅವರು ಕೋವಿಡ್‌ನಿಂದ ಶೀಘ್ರವಾಗಿ ಮತ್ತು ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ರವಿ ಅವರ ಜೊತೆ ಒಂದೆರಡು ಚಿತ್ರಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ಅಹಮದ್, 'ಅಯ್ಯೋ ಇಲ್ಲ, ಬೇಗ ಗುಣಮುಖರಾಗಿ ರವಿ' ಎಂದು ರವಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ರವಿ ಅವರಿಗೆ ಕೋವಿಡ್ ದೃಢಪಟ್ಟಿರುವ ಈ ಘೋಷಣೆಯು ಕೋವಿಡ್ ಎಂಬುದು ಗತಕಾಲದ ಸಂಗತಿ ಎಂದು ಭಾವಿಸಿದ್ದ ಚಿತ್ರರಂಗದ ಅನೇಕರಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.
ಜನರು ತಮ್ಮ ಮನೆಗಳಿಂದ ಹೊರಬರುವಾಗ ಮಾಸ್ಕ್ ಧರಿಸದಿರುವ ತಮ್ಮ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇದು ಈಗ ಒತ್ತಾಯಿಸಿದೆ.