ಗಾಳಿಸುದ್ದಿಗಳಿಗೆ ತೆರೆ ಎಳೆದ ಸಮಂತಾ ರುತ್ ಪ್ರಭು, ತಾವು ಬಳಲುತ್ತಿರುವ ಕಾಯಿಲೆ ಬಹಿರಂಗಪಡಿಸಿದ ನಟಿ

ನಟಿ ಸಮಂತಾ ರುತ್ ಪ್ರಭು ಅವರು ತಾವು ಅಪರೂಪದ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಶನಿವಾರ ಹೇಳಿದ್ದಾರೆ.
ನಟಿ ಸಮಂತಾ ರುತ್ ಪ್ರಭು
ನಟಿ ಸಮಂತಾ ರುತ್ ಪ್ರಭು

ಮುಂಬೈ: ನಟಿ ಸಮಂತಾ ರುತ್ ಪ್ರಭು ಅವರು ತಾವು ಅಪರೂಪದ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಶನಿವಾರ ಹೇಳಿದ್ದಾರೆ.

ತಮ್ಮ ಮುಂಬರುವ ಚಲನಚಿತ್ರ 'ಯಶೋದಾ' ಸಿನಿಮಾದ ಟ್ರೇಲರ್‌ಗೆ ಲಭ್ಯವಾಗಿರುವ ಅಗಾಧ ಪ್ರತಿಕ್ರಿಯೆಗಾಗಿ ತನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ನಟಿ, ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

'ಯಶೋಧ' ಟ್ರೈಲರ್‌ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಈ ಪ್ರೀತಿ ಮತ್ತು ಸಂಪರ್ಕವೇ ಜೀವನದಲ್ಲಿ ನನಗೆ ಎದುರಾಗುತ್ತಿರುವ ಅಂತ್ಯವಿಲ್ಲದ ಸವಾಲುಗಳನ್ನು ಎದುರಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ಕೆಲವು ತಿಂಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿ ಇರುವುದು ಪತ್ತೆಯಾಯಿತು. ಚಿಕಿತ್ಸೆ ಪಡೆದ ನಂತರ ನಾನು ಈ ಬಗ್ಗೆ ಹಂಚಿಕೊಳ್ಳಲು ಆಶಿಸಿದ್ದೆ. ಆದರೆ, ನಾನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ' ಎಂದು ಆಸ್ಪತ್ರೆಯ ಫೋಟೋದೊಂದಿಗೆ ಸಮಂತಾ ಬರೆದಿದ್ದಾರೆ.

ಸ್ನಾಯುಗಳು ದುರ್ಬಲ, ದಣಿದ ಮತ್ತು ನೋವಿನಿಂದ ಕೂಡಿದ ಅಪರೂಪದ ಪರಿಸ್ಥಿತಿಗಳ ಗುಂಪಿಗೆ ಮೈಯೋಸಿಟಿಸ್ ಹೆಸರು. ಇದು ಸಾಮಾನ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಸಮಸ್ಯೆಯಿಂದ ಉಂಟಾಗುತ್ತದೆ. ಇದು ಆರೋಗ್ಯಕರ ಅಂಗಾಂಶವನ್ನು ಆಕ್ರಮಿಸುತ್ತದೆ.

35 ವರ್ಷದ ಸಮಂತಾ ಅವರು ಶೀಘ್ರವೇ ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ ಎಂದು ವೈದ್ಯರು ಹೇಳಿದ್ದಾರೆ.

'ನಾವು ಯಾವಾಗಲೂ ನಿಜವಾಗಿಯೂ ಭಾವಿಸುವುದಕ್ಕಿಂತ ಯಾವಾಗಲೂ ತನ್ನನ್ನು ತಾನು ಹೆಚ್ಚು ಧೈರ್ಯಶಾಲಿ, ದೃಢನಿಶ್ಚಯ ಅಥವಾ ಹೆದರದವರಂತೆ ತೋರುವ ಅಗತ್ಯವಿಲ್ಲ ಎಂಬುದನ್ನು ನಾನು ನಿಧಾನವಾಗಿ ಅರಿತುಕೊಳ್ಳುತ್ತಿದ್ದೇನೆ. ಈ ದುರ್ಬಲತೆಯನ್ನು ಒಪ್ಪಿಕೊಳ್ಳುವುದಕ್ಕೆ ನಾನಿನ್ನೂ ಹೋರಾಡುತ್ತಿದ್ದೇನೆ. ಶೀಘ್ರದಲ್ಲೇ ನಾನು ಸಂಪೂರ್ಣ ಗುಣಮುಖಳಾಗುತ್ತೇನೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದ್ದಾರೆ.

'ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನನಗೆ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳು ಬಂದಿವೆ ಮತ್ತು ಈ ರೀತಿಯ ಇನ್ನೂ ಒಂದು ದಿನವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಾವಿಸಿದಾಗಲೂ, ಆ ಕ್ಷಣವೂ ಹೇಗಾದರೂ ಹಾದುಹೋಗುತ್ತದೆ. ಇದರಿಂದ ನಾನು ಚೇತರಿಸಿಕೊಳ್ಳಲು ಇನ್ನೂ ಒಂದಷ್ಟು ದಿನಗಳ ಹತ್ತಿರವಾಗಿದ್ದೇನೆ ಎಂದು ಮಾತ್ರ ಹೇಳಬಹುದೆಂದು ನಾನು ಭಾವಿಸುತ್ತೇನೆ. ಇಂತವುಗಳು ತುಂಬಾ ಹಾದುಹೋಗುತ್ತದೆ' ಎಂದು ಸಮಂತಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ನಟಿ ತಮ್ಮ ಮುಂದಿನ "ಯಶೋದಾ" ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ 11 ರಂದು ಈ ಚಿತ್ರ ಬಿಡುಗಡೆಯಾಗಲಿದೆ.

ಹರಿ ಶಂಕರ್ ಮತ್ತು ಹರೀಶ್ ನಾರಾಯಣ್ ಬರೆದು ನಿರ್ದೇಶಿಸಿದ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com