'ಅಪರೂಪದ ಚರ್ಮದ ಕಾಯಿಲೆ'ಯ ಚಿಕಿತ್ಸೆಗಾಗಿ ನಟಿ ಸಮಂತಾ ಅಮೆರಿಕಕ್ಕೆ; ವದಂತಿ ತಳ್ಳಿಹಾಕಿದ ಮ್ಯಾನೇಜರ್

ಟಾಲಿವುಡ್ ಸೇರಿದಂತೆ ಕಾಲಿವುಡ್‌ನಲ್ಲೂ ಸಾಲು ಸಾಲು ಸಿನಿಮಾಗಳ ಮೂಲಕ ಸಖತ್ ಬ್ಯುಸಿಯಾಗಿರುವ ನಟಿ ಸಮಂತಾ ರುತ್ ಪ್ರಭು ಅವರ ಅವರ 'ಯಶೋದಾ' ಮತ್ತು 'ಶಾಕುಂತಲಂ' ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಆದರೆ, ಅವರ ಇತ್ತೀಚಿನ ಅಮೆರಿಕ ಪ್ರವಾಸವು ಇದೀಗ ಗಾಸಿಪ್‌ಗಳಿಗೆ ಆಹಾರವಾಗಿದೆ.
ನಟಿ ಸಮಂತಾ ರುತ್ ಪ್ರಭು
ನಟಿ ಸಮಂತಾ ರುತ್ ಪ್ರಭು
Updated on

ಟಾಲಿವುಡ್ ಸೇರಿದಂತೆ ಕಾಲಿವುಡ್‌ನಲ್ಲೂ ಸಾಲು ಸಾಲು ಸಿನಿಮಾಗಳ ಮೂಲಕ ಸಖತ್ ಬ್ಯುಸಿಯಾಗಿರುವ ನಟಿ ಸಮಂತಾ ರುತ್ ಪ್ರಭು ಅವರ ಅವರ 'ಯಶೋದಾ' ಮತ್ತು 'ಶಾಕುಂತಲಂ' ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಆದರೆ, ಅವರ ಇತ್ತೀಚಿನ ಅಮೆರಿಕ ಪ್ರವಾಸವು ಇದೀಗ ಗಾಸಿಪ್‌ಗಳಿಗೆ ಆಹಾರವಾಗಿದೆ. ಸಮಂತಾ ಅವರು ಕೆಲವು ಅಪರೂಪದ ಚರ್ಮದ ಕಾಯಿಲೆಗೆ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎಂಬ ವದಂತಿಗಳು ಹರಡಿವೆ.

ಸಮಂತಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲದ ಹಿಂದೆ ಆಕೆಯ ವೈದ್ಯಕೀಯ ಸ್ಥಿತಿಯು ಪ್ರಮುಖ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಸಮಂತಾ ಕೂಡ ಕೆಲ ತಿಂಗಳಿಂದ  ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದೆ ದೂರ ಉಳಿದಿರುವುದು ವದಂತಿಗಳು ಹೆಚ್ಚುವಂತೆ ಮಾಡಿದೆ ಮತ್ತು ಸಮಂತಾರಿಗೆ ಏನಾಗಿದೆ ಎನ್ನುವ ಕುರಿತು ಅನೇಕರು ಆಶ್ಚರ್ಯ ಪಡುವಂತೆ ಮಾಡಿದೆ.

ಈ ವದಂತಿಗಳನ್ನು ಸಮಂತಾ ಅವರ ಮ್ಯಾನೇಜರ್ ಮಹೇಂದ್ರ ಅವರು ತಳ್ಳಿಹಾಕಿದ್ದಾರೆ. 'ಇದು ಕೇವಲ ಗಾಸಿಪ್' ಎಂದಿದ್ದು, ಸಮಂತಾ ಅವರು ಯಾಕೆ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದಾರೆ ಎನ್ನುವ ಕುರಿತು ತಿಳಿಸಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಮಂತಾ ವಿದೇಶ ಪ್ರವಾಸ ಕೈಗೊಂಡಿರುವುದರಿಂದ ಅವರ ಮುಂಬರುವ 'ಖುಷಿ' ಚಿತ್ರದ ನಿರ್ಮಾಣ ಕಾರ್ಯದ ವಿಳಂಬಕ್ಕೆ ಕಾರಣವಾಗಿದೆ ಎಂಬ ವದಂತಿಗಳಿವೆ. ಆದಾಗ್ಯೂ, ಈ ವರ್ಷದ ಕ್ರಿಸ್‌ಮಸ್ ರಜೆಯ ಸಮಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದು, ಚಿತ್ರೀಕರಣವು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬ್ಲಾಕ್‌ಬಸ್ಟರ್ ತೆಲುಗು ಚಿತ್ರ ಪುಷ್ಪ: ದಿ ರೈಸ್‌ನ ಊ ಅಂಟವಾ ಮಾವ ಹಾಡಿನಲ್ಲಿನ ತನ್ನ ನೃತ್ಯದಿಂದಾಗಿ ಸಮಂತಾ ಅವರ ಜನಪ್ರಿಯತೆಯು ಏರಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋದ ಜನಪ್ರಿಯ ಸರಣಿ 'ದಿ ಫ್ಯಾಮಿಲಿ ಮ್ಯಾನ್, ಸೀಸನ್ 2 ರಲ್ಲಿ ಎಲ್‌ಟಿಟಿಇ ಕಾರ್ಯಕರ್ತೆಯಾಗಿ ಅವರ ಅಭಿನಯಕ್ಕಾಗಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಸಮಂತಾ ಕೊನೆಯದಾಗಿ ತಮಿಳಿನ ಕಾದಲ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿಘ್ನೇಶ್ ಶಿವನ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈಗ ಯಶೋಧಾ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಸಮಂತಾ ಅವರು, ಚಿತ್ರದಲ್ಲಿ ಗರ್ಭಿಣಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com