ಗುರು ಶಿಷ್ಯರು ಟ್ರೈಲರ್ ಬಿಡುಗಡೆ; ಸಿನಿಮಾದಲ್ಲಿ ದೇಸೀ ಕ್ರೀಡೆ ಕ್ರೀಡೆ ಖೋ-ಖೋ ಖದರ್

80ರ ದಶಕದಲ್ಲಿ ಇದೇ ಶೀರ್ಷಿಕೆಯ ಚಿತ್ರವೊಂದು ನಟ ದ್ವಾರಕೀಶ್ ನಿರ್ಮಿಸಿ ಹಿಟ್ ಆಗಿದ್ದನ್ನು ಗಮನಿಸಬಹುದು. ಹೊಸ ಚಿತ್ರವನ್ನು ಶರಣ್ ಅವರ ಲಡ್ಡು ಸಿನಿಮಾಸ್ ಬ್ಯಾನರ್ ಮತ್ತು ತರುಣ್ ಕಿಶೋರ್ ಸುಧೀರ್ ತರುಣ್ ಕಿಶೋರ್ ಕ್ರಿಯೇಟಿವೇಜ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸಿನಿಮಾವು ಮರೆತುಹೋದ ದೇಸೀ ಆಟದ ಮೇಲೆ ಬೆಳಕು ಚೆಲ್ಲುತ್ತದೆ.
ಗುರು ಶಿಷ್ಯರು ಸಿನಿಮಾದ ನಟರು ಮತ್ತು ಸಿಬ್ಬಂದಿ
ಗುರು ಶಿಷ್ಯರು ಸಿನಿಮಾದ ನಟರು ಮತ್ತು ಸಿಬ್ಬಂದಿ

ಶರಣ್ ಅಭಿನಯದ ಜಡೇಶಾ ಕೆ ಹಂಪಿ ನಿರ್ದೇಶನದ 'ಗುರು ಶಿಷ್ಯರು' ಸಿನಿಮಾ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಚಿತ್ರದ ಟ್ರೈಲರ್ ಶಿಕ್ಷಕರ ದಿನದಂದು ಬಿಡುಗಡೆಯಾಗಿದೆ. 1995 ರಲ್ಲಿ ನಡೆದ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಶರಣ್ ಪಿಟಿ ಶಿಕ್ಷಕನ ಪಾತ್ರ ನಿರ್ವಹಿಸಿದ್ದು, ಅನುಭವ ಪ್ರಮಾಣಪತ್ರವನ್ನು (experience certificate) ಪಡೆಯಲು ಶರಣ್ ಸರ್ಕಾರಿ ಶಾಲೆಗೆ ಸೇರುತ್ತಾರೆ. ಆದರೆ, ವಿದ್ಯಾರ್ಥಿಗಳಿಗೆ ಖೋ-ಖೋ ತರಬೇತಿ ನೀಡಲು ಅವರನ್ನು ನೇಮಿಸಲಾಗುತ್ತದೆ.

ಮುಂದಿನದು ಪಿಟಿ ಶಿಕ್ಷಕ ಮತ್ತು ಅವರ ವಿದ್ಯಾರ್ಥಿಗಳ ನಡುವಿನ ಹಗ್ಗ-ಜಗ್ಗಾಟವಾಗಿದೆ. ಆದರೆ, ಶಾಲೆಯ ಭೂಮಿಯನ್ನು ಪಡೆಯಲು ವ್ಯಕ್ತಿಯೊಬ್ಬ ಪ್ರಯತ್ನಿಸಿದಾಗ ನಿಜವಾದ ಸವಾಲು ಪ್ರಾರಂಭವಾಗುತ್ತದೆ. ‘ಶಾಲೆಯನ್ನು ಉಳಿಸಲು ಈ ಪಿಟಿ ಶಿಕ್ಷಕರು ಸಹಾಯ ಮಾಡುತ್ತಾರೆಯೇ?’ ಎಂಬ ಪ್ರಶ್ನೆಗೆ ಸೆಪ್ಟೆಂಬರ್ 23 ರಂದು ಚಿತ್ರಮಂದಿರಗಳಲ್ಲಿ ಉತ್ತರ ಸಿಗಲಿದೆ.

80ರ ದಶಕದಲ್ಲಿ ಇದೇ ಶೀರ್ಷಿಕೆಯ ಚಿತ್ರವೊಂದು ನಟ ದ್ವಾರಕೀಶ್ ನಿರ್ಮಿಸಿ ಹಿಟ್ ಆಗಿದ್ದನ್ನು ಗಮನಿಸಬಹುದು. ಹೊಸ ಚಿತ್ರವನ್ನು ಶರಣ್ ಅವರ ಲಡ್ಡು ಸಿನಿಮಾಸ್ ಬ್ಯಾನರ್ ಮತ್ತು ತರುಣ್ ಕಿಶೋರ್ ಸುಧೀರ್ ತರುಣ್ ಕಿಶೋರ್ ಕ್ರಿಯೇಟಿವೇಜ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸಿನಿಮಾವು ಮರೆತುಹೋದ ದೇಸೀ ಆಟದ ಮೇಲೆ ಬೆಳಕು ಚೆಲ್ಲುತ್ತದೆ.

ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ದತ್ತಣ್ಣ, ನಿಶ್ವಿಕಾ ನಾಯ್ಡು ಮತ್ತು ಅಪೂರ್ವ ಕಾಸರಹಳ್ಳಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸ್ಟಾರ್ ನಟರ ಮಕ್ಕಳೂ ಒಟ್ಟಿಗೆ ನಟಿಸಿದ್ದಾರೆ. ಹೃದಯ (ಶರಣ್ ಅವರ ಮಗ), ಏಕಾಂತ್ (ನೆನಪಿರಲಿ ಪ್ರೇಮ್ ಅವರ ಮಗ), ರಕ್ಷಕ್ (ದಿವಂಗತ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮಗ), ಮಣಿಕಂಠ ನಾಯಕ್ (ಶಾಸಕ ರಾಜುಗೌಡ ಅವರ ಮಗ), ಸೂರ್ಯ (ರವಿ ಶಂಕರ್ ಗೌಡ ಅವರ ಮಗ) ಮತ್ತು ಹರ್ಷಿತ್ (ನವೀನ್ ಕೃಷ್ಣ ಅವರ ಮಗ) ಕಾಣಿಸಿಕೊಂಡಿದ್ದಾರೆ.

<strong>ಗುರು ಶಿಷ್ಯರು ಸಿನಿಮಾದ ಪೋಸ್ಟರ್</strong>
ಗುರು ಶಿಷ್ಯರು ಸಿನಿಮಾದ ಪೋಸ್ಟರ್

ಇವರಲ್ಲದೆ ಖೋ-ಖೋ ಆಟಗಾರರಾಗಿ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನೂಪ್ ರಮಣ, ಅಮಿತ್ ಬಿ ಕೂಡ ಕಾಣಿಸಿಕೊಂಡಿದ್ದಾರೆ.

ಇದು ನನ್ನ ಮೊದಲ ನಿರ್ಮಾಣ ಮತ್ತು ನನ್ನ ಹಿಂದಿನ ನಿರ್ದೇಶನದ ರಾಬರ್ಟ್‌ ಸಿನಿಮಾದಿಂದ ನನ್ನ ಎಲ್ಲಾ ಗಳಿಕೆಯನ್ನು ಈ ಚಿತ್ರಕ್ಕೆ ಹೂಡಿಕೆ ಮಾಡಿದ್ದೇನೆ. ಶಾಸಕ ರಾಜೂಗೌಡ ನಮ್ಮ ಬೆನ್ನೆಲುಬು. ದೇಸಿ ಕ್ರೀಡೆಯ ಕುರಿತಾದ ಚಿತ್ರಗಳು ನಮಗೆ ಸಿಗುವುದು ಅಪರೂಪ. ಹಾಗಾಗಿ ನಾವು ಖೋಖೋವನ್ನು ಆಯ್ಕೆ ಮಾಡಿಕೊಂಡಿದ್ದೇವೆ' ಎಂದು ಟ್ರೈಲರ್ ಬಿಡುಗಡೆಗೆ ಒಂದು ದಿನ ಮೊದಲು ನಡೆದ ಸಮಾರಂಭದಲ್ಲಿ ತರುಣ್ ಕಿಶೋರ್ ಸುಧೀರ್ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಹಿರಿಯ ನಟರಾದ (ದ್ವಾರಕೀಶ್, ಡಿಂಗ್ರಿ ನಾಗರಾಜ್, ಉಮೇಶ್, ಮತ್ತು ಎಂ ಎನ್ ಲಕ್ಷ್ಮೀದೇವಿ) ಮತ್ತು ಖೋ-ಖೋದಲ್ಲಿ ಪ್ರಶಸ್ತಿ ಪಡೆದ ಎಸ್ ಪ್ರಕಾಶ್, ಸರಸ್ವತಿ ಮತ್ತು ಸಿದ್ದಲಿಂಗಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com